ಮಳೆ ಕೊರತೆಯಿಂದಾಗಿ ಕಾಯಿಯಾಗದೇ ಬೆಳೆ ಹಾಳಾಗಿದ್ದು ಎರಡು ತಿಂಗಳ ಕಾಲ ಕಷ್ಟ ಪಟ್ಟು ಬೆಳೆಸಿದ್ದ ಹೆಸರು ಬೇಳೆ ಬೆಳೆಯನ್ನು ರೈತ ನಾಶ ಮಾಡಿದ ಘಟನೆ ನಡೆದಿದೆ. ತಾವೇ ಬೆಳೆದ ಬೆಳೆಯನ್ನು ತಾವೇ ಕಿತ್ತು ಹಾಕಿ ದುಃಖ ಅನುಭವಿಸಿದ್ದಾನೆ.
ಗ್ರಾಮದಲ್ಲಿ ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ ಹೆಸರು ಕಾಳು ಬೆಳೆದಿದ್ದರು. ಹೂವು ಆದ್ರೂ ಕಾಯಿಯಾಗದೇ ಇರೋದರಿಂದ ರೈತರು ಕಂಗಾಲಾಗಿದ್ದಾರೆ.
ಇನ್ನೊಂದೆಡೆ ಕಾಯಿಯಾದ್ರು ಕೂಡಾ ಅವುಗಳಿಗೆ ಕೀಟಬಾಧೆ ಆವರಿಸಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದೇ ಇರೋದರಿಂದ ಕಂಗಾಲಾದ ರೈತರು ತಮ್ಮ ಕೈಯಾರೆ ಬೆಳೆ ನಾಶ ಮಾಡಿದ್ದಾರೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ, ಕುಕನೂರು ತಾಲೂಕಿನ ಹಲವಡೆ ಹೆಸರು ಬೆಳೆ ಕಾಯಿಯಾಗದೆ ಭಾರೀ ನಷ್ಟ ಎದುರಾಗಿದೆ. ತಮಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.