ಬಿಡಿಎ ಹೊಸ ಭೂ ಪರಿಹಾರ ಅಡಿ ಪರಿಹಾರ ಕೊಡಲ್ವಾಂತೆ.ಇದೇ ವಿಚಾರ ಬಿಡಿಎ ಹಾಗೂ ರೈತರ ನಡುವಿನ ಹೋರಾಟ ತಾರಕಕ್ಕೇ ರಿದೆ. ಇಷ್ಟು ದಿನ ಭೂಸ್ವಾಧೀನ ಜಾಗದಲ್ಲಿ ಬಿಡಿಎ ವಿರುದ್ಧ ಕೇವಲ ಪ್ರತಿಭಟನೆ ,ಹಾಗೂ ರ್ಯಾಲಿ ಮಾಡ್ತಿದ್ದ, ರೈತರು ಇವತ್ತು ಬಿಡಿಎ ಕೇಂದ್ರ ಕಚೇರಿಗೆ ನುಗ್ಗಿದ್ದರರು.ಕಾರಂತ ಬಡಾವಣೆ ಹಾಗೂ ಫೆರಿಫರಲ್ ರಸ್ತೆ ಹೊಸ ಭೂ ಪರಿಹಾರ ಅಡಿ ಭೂಪರಿಹಾರ ಕೊಟ್ಟಿಲ್ಲ ಅಂದ್ರೆ ಪರಿಣಾಮ ನೆಟ್ಟಗಿರಲ್ಲ ಅಂತ ಎಚ್ಚರಿಕೆ ನೀಡಿದ್ರು.
ಬಿಡಿಎ ಹೊಸದಾಗಿ ನಿರ್ಮಾಣ ಮಾಡ್ತಿರೋ ಉದ್ದೇಶಿತ ಡಾ ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕಾಗಿ ಜಮೀನು ಬಿಟ್ಟುಕೊಡುವವರಿಗೆ ಪರಿಹಾರ ವಿತರಣೆ ವಿಷಯ ಕಗ್ಗಂಟ್ಟು ಆಗಿದೆ..ರೈತರು ಹಾಗೂ ಬಿಡಿಎ ನಡುವೆ ಹಗ್ಗಜಗ್ಗಾಟ ನಡೆಯುತ್ತಲ್ಲೇ ಇದೆ..ಲೇಔಟ್ ನಿರ್ಮಾಣಕ್ಕ 3567 ಎಕರೆ ಜಾಗ ಸ್ವಾಧೀನಪಡಿಸಿಕೊಂಡಿರೋ ಬಿಡಿಎ ಸ್ವಾಧೀನ ಜಾಗದಲ್ಲಿ ಟೆಂಡರ್ ಕರೆದು ಲೇಔಟ್ ಪರಿವರ್ತನೆ ಮಾಡ್ತಿದೆ.ಈ ಸಂಬಂಧ ಕೆರಳಿರುವ ರೈತರು 2013 ರ ಕಾಯ್ದೆ ಅಡಿ ಭೂಪರಿಹಾರ ನೀಡುವರಿಗೂ ಲೇಔಟ್ ಮಾಡೋಕೆ ಬಿಡೋದಿಲ್ಲ ಅಂತ ಪಟ್ಟು ಹಿಡಿದ್ದಾರೆ..
ಹೌದು. ಹೆಸರಘಟ್ಟ ಹಾಗೂ ಯಲಹಂಕ ನಡುವಿನ 17 ಗ್ರಾಮಗಳ ಲೇಔಟ್ ನಲ್ಲಿ ಮೂಲಸೌಕರ್ಯ ಸೌಕರ್ಯಗಳ ಕಲ್ಪಿಸಲು ಕಾಮಗಾರಿ ಕೈಗೊಳ್ಳುತ್ತಿದೆ.17 ಗ್ರಾಮದ ರೈತರು ಬಿಡಿಎ ಕಾಮಗಾರಿ ಸ್ಥಳಗಳಿಗೆ ನುಗ್ಗಿ ಈಗಾಗಲೇ ಕಾಮಗಾರಿ ನಿಲ್ಲಿಸಿದ್ದಾರೆ..2013 ರ ಕಾಯ್ದೆ ಅಡಿ ಭೂಪರಿಹಾರ ನೀಡೋದದಾಗಿ ಘೋಷಣೆ ಮಾಡಿ ಬಳಿಕ ಕಾಮಗಾರಿ ಕೈಗೊಳ್ಳಿ ಅಂತ ಪ್ರಶ್ನಸಿದ್ದಾರೆ.ಆದ್ರೆ ಬಿಡಿಎ ಮಾತ್ರ ಇದಕ್ಕೆ ಒಪ್ಪುತ್ತಿಲ್ಲ. ಈ ಬಗ್ಗೆ ಕೆರಳಿರೋ ರೈತರು ಇವತ್ತು ಬಿಡಿಎ ಮುಂದೆ ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ರು. ಕೂಡಲೇ 2013 ಆಕ್ಟ್ ಪ್ರಕಾರವೇ ನಮಗೆ ಭೂ ಪರಿಹಾರ ನೀಡಬೇಕು. ಇಲ್ಲವಾದ್ರೆ ಹೋರಾಟ ತೀವ್ರಗೊಳಿಸೋದಾಗಿ ಎಚ್ಚರಿಕೆ ನೀಡಿದ್ರು.ಇನ್ನೂ ಪ್ರತಿಭಟನೆ ಸ್ಥಳಕ್ಕೆ ಬಂದ ಬಿಡಿಎ ಡಿಸಿ ಹಾಗೂ ಕಾರ್ಯದರ್ಶಿ ಅವರಿಗೆ ರೈತರು ತೀವ್ರ ತರಾಟೆ ತೆಗೆದುಕೊಂಡರು
ಬಿಡಿಎ ಪ್ರಸುತ್ತ ಜಮೀನು ಬಿಟ್ಟುಕೊಡುವ ರೈತರಿಗೆ 40*60 ಅಡಿ ಪರಿಹಾರ ನೀಡಲು ನಿರ್ಧಾರ ಮಾಡಿದೆ.ಅದೂ ಕೂಡ 1894 ರ ಭೂಪರಿಹಾರ ಕಾಯ್ದೆ ಅಡಿ ಪರಿಹಾರ ವಿತರಿಸಲಾಗ್ತದೆ.ಇದಕ್ಕೆ ಗ್ರಾಮಗಳ ರೈತರು ಭಾರಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.ಕಾರಂತ ಬಡಾವಣೆಗೆ ಭೂಮಿ ಬಿಟ್ಟು ಕೊಡಬೇಕಿದ್ದಲ್ಲಿ 2013 ರ ಭೂ ಪರಿಹಾರ ಕಾಯ್ದೆ ಅನ್ವಯಿಸುವಂತೆ ಪರಿಹಾರ ನೀಡುವಂತೆ ಪಟ್ಟು ಹಿಡಿದ್ದಾರೆ.. ಬಿಡಿಎ ನಿರ್ಮಾಣ ಮಾಡೋಕೆ ಹೊರಟಿರುವ ಶಿವರಾಮ ಕಾರಂತ್ ಲೇ ಔಟ್ನಲ್ಲಿ 17 ಹಳ್ಳಿಯ ಜನರು ಕೂಡ ಇದಕ್ಕೆ ಬಹುತೇಕ ಮಂದಿ ವಿರೋಧಗಳನ್ನ ವ್ಯಕ್ತಪಡಿಸ್ತಿದ್ದಾರೆ.ಈಗಾಗಲೇ ಶೇಖಡಾ 70 ಪರ್ಸೆಂಟ್ ಡೆವಲಪ್ ಆಗಿದೆ. ಸುಮಾರು 20 ಸಾವಿರ ಮನೆಗಳನ್ನ ಕಟ್ಟಿದ್ದಾರೆ. ಬಡವರು, ಮದ್ಯಮ ವರ್ಗದವರು ಇಲ್ಲಿ ಸೈಟ್ಗಳನ್ನ ಖರೀದಿಸಿದ್ದಾರೆ.
ಆದ್ರೆ ಇಲ್ಲಿ ಇದೀಗ ಮತ್ತೆ ಲೇ ಔಟ್ ಮಾಡ್ತಿವಿ ಅಂತಾ ಬಿಡಿಎ ಹೇಳ್ತಿದೆ. ಆದ್ರೆ ಅದಕ್ಕೆ ನಾವೂ ಅವಕಾಶ ಕೊಡೋದಿಲ್ಲ. ನಮ್ಮ ಪ್ರಾಣ ಹೋದ್ರು ಸರಿ ನಾವ್ ಮಾತ್ರ ನಮ್ಮ ಜಾಗ ಬಿಟ್ಟಿಕೊಡೋದಿಲ್ಲ .ಹೊಸ ಕಾಯ್ದೆ ಅಡಿನೇ ಭೂ ಪರಿಹಾರ ನೀಡೋವರಿಗೆ ನಮ್ಮ ಜಾಗ ಬಿಡೋದಿಲ್ಲ ಅಂತ ಎಚ್ಚರಿಕೆ ನೀಡಿದ್ದಾರೆ..ಮತ್ತೊಂದೆಡೆ ಫೆರಿಫೆರಲ್ ರಸ್ತೆ ನಿರ್ಮಾಣಕ್ಕೆ ಅಂತ ಬಿಡಿಎ 17 ವರ್ಷಗಳ ಹಿಂದೆ ರೈತರಿಂದ ಭೂಮಿ ಸ್ವಾದೀನ ಪಡಿಸಿಕೊಂಡಿದೆ.ಇಲ್ಲಿಯೂ ಕೂಡ ಹಳೆ ನಿಯಮದ ಪ್ರಕಾರವೇ ಪರಿಹಾರ ನೀಡೋಕೆ ಮುಂದಾಗಿದೆ. ಇದಕ್ಕೂ ರೈತರು ಭಾರೀ ವಿರೋಧ ಮಾಡ್ತಿದ್ದಾರೆ. ಹೊಸ ಗೈಡ್ಲೈನ್ ಪ್ರಕಾರ ಪಿಆರ್ಆರ್ ಯೋಜನೆಗೆ ಭೂ ಪರಿಹಾರ ನೀಡಬೇಕು ಅಂತ ರೈತರು ಪಟ್ಟು ಹಿಡಿದಿದ್ದಾರೆ.
ಒಟ್ಟಿನಲ್ಲಿ ಭೂ ಕೊಡುವ ರೈತರಿಗೆ ಬಿಡಿಎ ಸಮರ್ಪಕವಾಗಿ ಭೂ ಪರಿಹಾರ ನೀಡ್ತಿಲ್ಲ ಬಿಡಿಎ .ಇದರಿಂದ ಬೇಸತ್ತು ರೈತರೆಲ್ಲಾ ಬಿಡಿಎ ಮುಂದೆ ಪ್ರತಿಭಟನೆ ಮಾಡೋಕೆ ಮುಂದಾಗಿದ್ದಾರೆ. ರೈತರ ಸಮರ್ಪಕವಾಗಿ ಪರಿಹಾರ ಕೇಳಿದರೆ ಅಧಿಕಾರಿಗಳು ದಬ್ಬಾಳಿಕೆ ಮಾಡ್ತಿದ್ದಾರೆ ಅನ್ನೋ ಆರೋಪ ರೈತರದ್ದು.ಇನ್ನಾದ್ರೂ ಬಿಡಿಎ ಎಚ್ಚೆತ್ತುಕೊಂಡು ಸಮರ್ಪಕ ಭೂ ಪರಿಹಾರ ಘೋಷಣೆ ಮಾಡಿ ಬಳಿಕ ಭೂಸ್ವಾದೀನ ಪ್ರಕ್ರಿಯೆಗೆ ಮುಂದಾಗಬೇಕು. ಇಲ್ಲವಾದ್ರೆ ಬಿಡಿಎ ಹಾಗೂ ರೈತರ ಗುದ್ದಾಟ ಮತ್ತಷ್ಟು ಜಟಿಲ ಆಗೋದು ಪಕ್ಕಾ. .