ದುನಿಯಾ ಸೂರಿ ನಿರ್ದೇಶನದ, ಅಭಿಷೇಕ್ ಅಂಬರೀಶ್ ನಟನೆಯ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ರಿಲೀಸ್ಗೂ ಮೊದಲೇ ಮತ್ತೊಂದು ಹೊಸ ಸಿನಿಮಾಗೆ ಸೂರಿ ಕೈ ಹಾಕಿದ್ದಾರೆ. ಇದೇ ಮೊದಲ ಬಾರಿಗೆ ಜಯಣ್ಣ ಫಿಲಂಸ್ ನಿರ್ಮಾಣದ ಸಿನಿಮಾವನ್ನು ಸೂರಿ ನಿರ್ದೇಶನ ಮಾಡುತ್ತಿದ್ದಾರೆ.
ಜಯಣ್ಣ ನಿರ್ಮಾಣದ, ಸೂರಿ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ‘ಕಿಸ್’ ಸಿನಿಮಾದ ನಾಯಕ ವಿರಾಟ್ ಕಾಣಿಸಿಕೊಳ್ತಿದ್ದಾರೆ. ಜಯಣ್ಣ- ಬೋಗೇಂದ್ರ ಫಿಲಂಸ್ ಸಂಸ್ಥೆಯೊಂದಿಗೆ ಬಹು ಚಿತ್ರಗಳನ್ನ ಮಾಡಲು ನಟ ವಿರಾಟ್ ಸಹಿ ಮಾಡ್ತಿದ್ದಾರೆ. ಈ ಸಂಸ್ಥೆ ಜೊತೆ ದಿನಕರ್ ತೂಗುದೀಪ್ ನಿರ್ದೇಶನದ ‘ರಾಯಲ್’ ಚಿತ್ರದಲ್ಲಿ ವಿರಾಟ್ ನಟನೆ ಮಾಡ್ತಿದ್ದಾರೆ. ಇದಾದ ಬಳಿಕ ವಿರಾಟ್ಗೆ ‘ಟಗರು’ ಖ್ಯಾತಿಯ ಸೂರಿ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ಅಭಿಷೇಕ್ ಅಂಬರೀಶ್ ನಟನೆಯ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ಮೇ ಅಂತ್ಯದಲ್ಲಿ ತೆರೆಗೆ ಬರಲಿದೆ. ಈ ಸಿನಿಮಾ ರಿಲೀಸ್ ಆದ ಬಳಿಕ ವಿರಾಟ್ ಸಿನಿಮಾವನ್ನು ಕೈಗೆತ್ತಿಕೊಳ್ಳಲಿದ್ದಾರೆ. ಸದಾ ಮಾಸ್ ಎಂಟರ್ ಟ್ರೈನರ್ ಸಿನಿಮಾ ಮಾಡುವ ಸೂರಿ ಈ ಭಾರಿ ಯಾವ ರೀತಿ ಸಿನಿಮಾ ಮಾಡಲಿದ್ದಾರೆ ಎಂಬ ಕ್ಯೂರಿಯಾಸಿಟಿ ಕ್ರಿಯೇಟ್ ಆಗಿದೆ.