ದುನಿಯಾ ವಿಜಯ್ ನಟನೆಯ ಹೆಚ್ಚಿನ ಸಿನಿಮಾಗಳು ಕರ್ನಾಟಕ ಬಿಟ್ಟು ಹೊರಡಗೆ ರಿಲೀಸ್ ಆಗಿರೋದು ತೀರಾ ಕಡಿಮೆ. ಆದರೆ ದುನಿಯಾ ವಿಜಯ್ ನಿರ್ದೇಶಿಸಿ, ನಟಿಸಿರುವ ಭೀಮ ಸಿನಿಮಾ ಇದೀಗ ವಿದೇಶದಲ್ಲಿ ತೆರೆಕಾಣಲು ಸಜ್ಜಾಗಿದೆ.
ಭೀಮ ಚಿತ್ರದ ಬಗ್ಗೆ ದೊಡ್ಡ ಮಟ್ಟದ ಕ್ರೇಕ್ ಕ್ರಿಯೇಟ್ ಆಗಿದೆ. ಕರ್ನಾಟಕದ ಬಹುತೇಕ ಏರಿಯಾಗಳು ಸೋಲ್ಡ್ ಔಟ್ ಆಗಿದ್ದು, ತೆಲುಗು ಭಾಷೆಯಲ್ಲೂ ಭೀಮನಿಗೆ ಭರ್ಜರಿ ಡಿಮ್ಯಾಂಡ್ ಇದೆ. ಈ ಹಿಂದೆ ಬಾಲಯ್ಯ ಅಭಿನಯದ ಚಿತ್ರದಲ್ಲಿ ದುನಿಯಾ ವಿಜಯ್ ವಿಲನ್ ರೋಲ್ ಮಾಡಿದ್ದರು. ಅದು ಅಲ್ಲಿಯ ಜನರಿಗೆ ಇಷ್ಟ ಆಗಿದೆ. ಹಾಗಾಗಿಯೇ ಇದೀಗ ಟಾಲಿವುಡ್ನಲ್ಲೂ ದುನಿಯಾ ವಿಜಯ್ ಚಿತ್ರಕ್ಕೆ ಬೇಡಿಕೆ ಇದೆ.
ಭೀಮ ಚಿತ್ರದ ರಾಜ್ಯದ ಎಲ್ಲ ಏರಿಯಾ ಸೇಲ್ ಆಗಿವೆ. ನಿರ್ಮಾಪಕ ಜಗದೀಶ್ ಅವರೇ ಈ ವಿಚಾರವನ್ನ ಹೇಳಿಕೊಂಡಿದ್ದಾರೆ. ಇದರ ಜೊತೆಗೆ ವಿದೇಶದಲ್ಲೂ ಬೀಮ ತೆರೆಕಾಣಲಿದ್ದಾನೆ ಎಂಬ ಮಾಹಿತಿ ನೀಡಿದ್ದಾರೆ. ಭೀಮ ಚಿತ್ರವನ್ನ ಭಾರತದೆಲ್ಲೆಡೆ ಆಗಸ್ಟ್ 9 ರಂದು ರಿಲೀಸ್ ಮಾಡಲಾಗುತ್ತಿದೆ. ಇದರ ಜೊತೆಗೆ ಸಾಗರೋತ್ತರದಲ್ಲೂ ಕನ್ನಡದ ಭೀಮನ ಅಬ್ಬರ ಇರುತ್ತದೆ. ಹೀಗೆ ಕನ್ನಡದ ಚಿತ್ರವನ್ನ ಬೇರೆ ಬೇರೆ ರಾಜ್ಯಗಳಿಗೆ, ಬೇರೆ ಬೇರೆ ದೇಶಗಳಿಗೆ ತಲುಪಿಸೋ ಕೆಲಸವನ್ನ KRG ಸಂಸ್ಥೆ ಮಾಡುತ್ತಿದೆ.
ಇದನ್ನ ಅಧಿಕೃತವಾಗಿಯ ಇದೀಗ ಈ ಸಂಸ್ಥೆ ಹೇಳಿಕೊಂಡಿದೆ. ಹಾಗೇನೆ ನಿರ್ಮಾಪಕ ಜಗದೀಶ್ ಕೂಡ ಹೇಳಿಕೊಂಡಿದ್ದರು. ಆ ಲೆಕ್ಕದಂತೆ ಇದೀಗ ಕನ್ನಡದ ಭೀಮ ಕನ್ನಡದಲ್ಲಿಯೇ ಎಲ್ಲೆಡೆ ರಿಲೀಸ್ ಆಗುತ್ತಿದೆ. ಈ ಮೂಲಕ ಭೀಮ ಚಿತ್ರ ದೊಡ್ಡಮಟ್ಟದಲ್ಲಿಯೇ ಎಲ್ಲಾ ಕಡೆಗೆ ರಿಲೀಸ್ ಆಗಲು ಸಜ್ಜಾಗಿದೆ.