ಡಂಕಿ & ಸಲಾರ್ ಕ್ಲ್ಯಾಶ್ ಬಗ್ಗೆ ಕಳೆದ ಹಲವು ತಿಂಗಳಿಂದಲೂ ಸುದ್ದಿಯಾಗ್ತಾನೇ ಇತ್ತು. ಫೈನಲಿ ಗುರುವಾರ ಡಂಕಿ ತೆರೆಗೆ ಬಂದ್ರೆ ಶುಕ್ರವಾರ ಸಲಾರ್ ವರ್ಲ್ಡ್ವೈಡ್ ರಿಲೀಸ್ ಆಗಿದೆ. ಡಂಕಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡ್ರೆ ಸಲಾರ್ ಥಿಯೇಟರ್ ಅಂಗಳದಲ್ಲಿ ಉಗ್ರಾವತಾರ ಪ್ರದರ್ಶಿಸುತ್ತಿದೆ. ಸಲಾರ್ ಅಬ್ಬರ ಹೇಗಿದೆ ಅಂದ್ರೆ ಬಾಕ್ಸ್ಆಫೀಸ್ನಲ್ಲಿ ಹೊಸ ರೆಕಾರ್ಡ್ ಸೃಷ್ಟಿಯಾಗೋದು ಫಿಕ್ಸ್ ಅಂತಿದೆ ಮಾರ್ಕೆಟ್.
ಯೆಸ್, ಶಾರೂಖ್ ಖಾನ್ ನಟನೆ ನಿರ್ಮಾಣದ ಡಂಕಿ ಎದುರು ಸಲಾರ್ ಬರುತ್ತೆ ಅಂದಾಗ ಇದು ಇಂಡಿಯನ್ ಸಿನಿ ಇಂಡಸ್ಟ್ರಿಯ ಬಿಗ್ಗೆಸ್ಟ್ ಕ್ಲ್ಯಾಶ್ ಆಗುತ್ತೆ ಅಂತ ಎಲ್ಲರೂ ಊಹೆ ಮಾಡಿದ್ರು. ಎರಡೂ ಬಿಗ್ ಸ್ಟಾರ್ ಗಳ ಬಿಗ್ ಸಿನಿಮಾಗಳೇ. ಡಂಕಿ ಗುರುವಾರದ ದಿನವೇ ತೆರೆಗೆ ಬಂದಿದೆ. ಪ್ರೇಕ್ಷಕರಿಂದ ಮೀಶ್ರ ಪ್ರತಿಕ್ರಿಯೆ ಗಳಿಸಿರೋ ಡಂಕಿ ಮೊದಲ ದಿನದ ಅಂತ್ಯಕ್ಕೆ ಡೊಮೆಸ್ಟಿಕ್ ಮಾರ್ಕೆಟ್ನಲ್ಲಿ 30 ಕೋಟಿ ಗಳಿಸಿದೆ.
ಇನ್ನೂ ಡಂಕಿಗೆ ಕಂಪೇರ್ ಮಾಡಿದ್ರೆ ಸಲಾರ್ಗೆ ಬಿಗ್ಗೆಸ್ಟ್ ಓಪನಿಂಗ್ ಸಿಕ್ಕಿದೆ. ತೆಲುಗು ರಾಜ್ಯಗಳಲ್ಲಿ ಮತ್ತು ಉತ್ತರ ಭಾರತದಲ್ಲಂತೂ ಸಲಾರ್ ನ ಪ್ರೇಕ್ಷಕರು ಮುಗಿಬಿದ್ದು ನೋಡ್ತಾ ಇದ್ದಾರೆ. ಸದ್ಯದ ಬುಕ್ಕಿಂಗ್ ಲೆಕ್ಕಾಚಾರ ನೋಡ್ತಾ ಇದ್ರೆ ಮೊದಲ ದಿನದ ಅಂತ್ಯಕ್ಕೇನೇ ಸಲಾರ್ ನೂರು ಕೋಟಿ ಗಡಿ ಮುಟ್ಟುವ ನಿರೀಕ್ಷೆ ಇದೆ.
ಸಲಾರ್ ಸಿನಿಮಾ ಇಬ್ಬರು ಸ್ನೇಹಿತರ ಕಥೆ. ಹಿಂಸೆಯನ್ನ ತೊರೆದು ಮೆಕಾನಿಕ್ ಆಗಿ ಮೌನವಾಗಿ ನಟ್ಟು ಬೋಲ್ಟು ತಿರುಗಿಸ್ತಾ ಇದ್ದ ನಾಯಕ, ಮತ್ತೆ ಆ ಹಿಂಸೆಯ ಪ್ರಪಂಚಕ್ಕೆ ಎಂಟ್ರಿ ಕೊಡುವ ಕಥೆ. ಈ ಸ್ಟೋರಿ ಕೇಳುತ್ತಲೇ ಇದು ಉಗ್ರಂ ಕಥೆ ಅಲ್ವಾ ಅಂತ ಕೇಳಲೇಬೇಡಿ. ಅಫ್ಕೋರ್ಸ್ ಇದು ಉಗ್ರಂ ಕಥೆಯೇ. ಖುದ್ದು ಪ್ರಶಾಂತ್ ನೀಲ್ ಇದನ್ನ ಒಪ್ಪಿಕೊಂಡಿದ್ದು, ಮತ್ತು ಇದೇ ಕಥೆಯನ್ನ ಸಲಾರ್ ಆಗಿಸಿದ್ದು ಯಾಕೆ ಅನ್ನೋ ಸೀಕ್ರೆಟ್ನೂ ತೆರೆದಿಟ್ಟಿದ್ದಾರೆ.
ಹೌದು ಉಗ್ರಂ ಸಿನಿಮಾವನ್ನ ಇಷ್ಟಪಟ್ಟು ಕಷ್ಟಪಟ್ಟು ಮಾಡಿದ್ದ ನೀಲ್ಗೆ ಅಂದುಕೊಂಡ ಮಟ್ಟಕ್ಕೆ ಅದು ರೀಚ್ ಆಗಲಿಲ್ಲ ಅನ್ನೋ ಬೇಸರ ಇತ್ತು. ಅದ್ರಲ್ಲೂ ಉಗ್ರಂಗೆ ನಿರ್ಮಾಪಕನೂ ಆಗಿದ್ದ ಪ್ರಶಾಂತ್ ನೀಲ್, ಚಿತ್ರದಿಂದಾಗಿ ಸಾಕಷ್ಟು ಸಾಲ ಸೋಲ ಕೂಡ ಮಾಡಿಕೊಂಡಿದ್ರಂತೆ.
ಉಗ್ರಂಗೆ ಮೆಚ್ಚುಗೆ ಸಿಕ್ರೂ ದೊಡ್ಡ ಮಟ್ಟದಲ್ಲಿ ರೀಚ್ ಆಗಲಿಲ್ಲ. ಆದ್ರೆ ಕೆಜಿಎಫ್ ಬಳಿಕ ದೊಡ್ಡ ಕ್ಯಾನ್ವಾಸ್ನಲ್ಲಿ ಉಗ್ರಂ ಕಥೆಯನ್ನ ನೀಲ್ ಹೇಳಬಯಸಿದ್ರಂತೆ. ಅದಕ್ಕೆ ಹೊಂಬಾಳೆ ಫಿಲಂಸ್ ಸಾಥ್ ಕೊಟ್ಟಿದೆ. ನೀಲ್ ಕಲ್ಪನೆಯ ದೇವ ಆಗಿ ಪ್ರಭಾಸ್ ಅಬ್ಬರಿಸಿದ್ದಾರೆ.