ಒಟ್ಟಾವಾ: ಉನ್ನತ ಶಿಕ್ಷಣದ ಕನಸು ಹೊತ್ತು ಕೆನಡಾಗೆ ತೆರಳಿರುವ ಪಂಜಾಬ್ನ ಸುಮಾರು 700 ವಿದ್ಯಾರ್ಥಿಗಳ ಭವಿಷ್ಯ ಇದೀಗ ಗೊಂದಲಕ್ಕೆ ಈಡಾಗಿದೆ. ಪಂಜಾಬ್ನ ಜಲಂಧರ್ನಲ್ಲಿರುವ ಕೆಲವು ಏಜೆಂಟ್ಗಳು ಈ ವಿದ್ಯಾರ್ಥಿಗಳಿಗೆ ನಕಲಿ ಆಫರ್ ಲೆಟರ್ಗಳನ್ನು ನೀಡಿದ್ದು, ಅದನ್ನು ಪಡೆದಿರುವ ವಿದ್ಯಾರ್ಥಿಗಳು ಇದೀಗ ಗಡಿಪಾರಿನ ಭೀತಿ ಎದುರಿಸುವಂತಾಗಿದೆ.
ತಮ್ಮ ಆಫರ್ ಲೆಟರ್ ನಕಲಿ ಎಂದು ಗೊತ್ತಾಗುತ್ತಿದ್ದಂತೆ ಅನೇಕ ವಿದ್ಯಾರ್ಥಿಗಳು ಕೆನಡಾದ ವಿವಿಧ ಭಾಗಗಳಲ್ಲಿ ಪ್ರತಿಭಟನೆಯನ್ನೂ ನಡೆಸಿದ್ದಾರೆ. ಈಗ ಕೆನಡಾ ಸರ್ಕಾರ ಈ ಎಲ್ಲ ವಿದ್ಯಾರ್ಥಿಗಳನ್ನೂ ಭಾರತಕ್ಕೆ ಗಡಿಪಾರು ಮಾಡಲು ಸಿದ್ಧತೆ ನಡೆಸಿದೆ.