ಕಾಂಗ್ರೆಸ್ ಗೆ ಹಾಗೂ ಪರಿಷತ್ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿಗೆ ಸೇರಿದ್ದೇನೆ ಅಮಿತ್ ಶಾ ಅವರನ್ನೂ ಭೇಟಿ ಮಾಡಿದ್ದೇನೆ ಯಡಿಯೂರಪ್ಪ ಸೇರಿದಂತೆ ಎಲ್ಲ ನಾಯಕರು ಉಪಸ್ಥಿತರಿದ್ದರು ಎಂದು ಬಿಜೆಪಿ ಸೇರಿದ ಬಳಿಕ ಶೆಟ್ಟರ್ ಹೇಳಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು , ಎಲ್ಲ ನಾಯಕರು, ನಿಮಗೆ ಸೂಕ್ತ ಸ್ಥಾನಮಾನ, ಗೌರವ ಕೊಡುತ್ತೇವೆ ಎಂದಿದ್ದಾರೆ ಬಿಜೆಪಿಗೆ ವಾಪಸ್ ಬರುವ ಪ್ರಕ್ರಿಯೆ ಕೇವಲ ನಾಲ್ಕು ಗಂಟೆಯಲ್ಲಿ ಆಗಿದ್ದಲ್ಲ ಇದು ನನ್ನ ಮನೆ, ನಾವೆಲ್ಲ ಕಟ್ಟಿ ಬೆಳೆಸಿದ ಮನೆ ನಮ್ಮ ಕುಟುಂಬದವರೆಲ್ಲ ಜನಸಂಘದಿಂದ ಜೊತೆಗೆ ಇದ್ದೇವೆ ಅಸ್ಸೆಂಬ್ಲಿ ಚುನಾವಣೆ ವೇಳೆ ಕೆಲ ಘಟನೆ ನಡೆಯಿತು ಅದರಿಂದ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದೆ ಕಾಂಗ್ರೆಸ್ ತೊರೆದು ಮತ್ತೆ ಬಿಜೆಪಿ ಸೇರಿದ್ದೇನೆ
ಮೋದಿ ಅವರ 10 ವರ್ಷಗಳಿಂದ ಉತ್ತಮ ಕೆಲಸ ಮಾಡಿದ್ದಾರೆ ಮತ್ತೊಮ್ಮೆ ಅವರು ಪ್ರಧಾನಿ ಆಗಬೇಕು ಎಂಬ ಆಶಯ ಇದೆ ಅದಕ್ಕಾಗಿ ಬಿಜೆಪಿ ಸೇರಿದ್ದೇನೆ ಜಗತ್ತಿನಲ್ಲೇ ಭಾರತ ಆರ್ಥಿಕವಾಗಿ ಕೂಡ ಬಲಿಷ್ಟವಾಗಿದೆ ಅವರು ಮತ್ತೊಮ್ಮೆ ಪ್ರಧಾನಿ ಆಗಲು ನಾನು ಅಳಿಲು ಸೇವೆ ಸಲ್ಲಿಸಬೇಕು ಎಂದರು.
ರಾಮ ಮಂದಿರ ನಿರ್ಮಾಣವಾಗಿದೆ ಹಿಂದೆ ಆಡ್ವಾನಿ ರಥಯಾತ್ರೆ ಮಾಡಿದಾಗ ಹುಬ್ಬಳ್ಳಿಯಲ್ಲಿ ಎಲ್ಲ ನಿರ್ಚಹಣೆ ಮಾಡಿದ್ದೆ ಅಯೋದ್ಯೆ ಹೋರಾಟದಲ್ಲೂ ನಾನು ಪಾಲ್ಗೊಂಡಿದ್ದೆ ವಿಹಿಂಪ ಜೊತೆ ಸೇರಿ ಮಂದಿರ ನಿರ್ಮಾಣಕ್ಕಾಗಿ 2 ಕೋಟಿ ರೂ. ಹಣ ಸಂಗ್ರಹಿಸಿದ್ದೆ
ಕಾಂಗ್ರೆಸ್ ಸೇರಿದಮೇಲು ಬಿಜೆಪಿಯ ಪ್ರಮುಖರು, ಕಾರ್ಯಕರ್ತರು ವಾಪಸ್ ಬರಲು ಒತ್ತಾಯಿಸುತ್ತಿದ್ದರು ದೆಹಲಿ ನಾಯಕರೂ ಕರೆ ಮಾಡಿದ್ದರು ವಿಜಯೇಂದ್ರ ಅಧ್ಯಕ್ಷರಾದ ಬಳಿಕ ಯಡಿಯೂರಪ್ಪ ಅವರೂ ಮುತುವರ್ಜಿ ವಹಿಸಿದ್ದಾರೆ ಕೇವಲ ನಾಲ್ಕು ಗಂಟೆಯಲ್ಲಿ ಬಿಜೆಪಿ ಸೇರಿಲ್ಲ ನಾಲ್ಕು ತಿಂಗಳಿಂದ ಈ ಪ್ರೊಸೆಸ್ ನಡೆಯುತ್ತಿದೆ ವಿಜಯೇಂದ್ರ ಅಧ್ಯಕ್ಷರಾದ ಬಳಿಕ ವೇಗ ಹೆಚ್ಚಾಗಿತ್ತುಬಿಜೆಪಿ ನಿರ್ದೇಶನದಂತೆ ಕೆಲಸ ಮಾಡುತ್ತೇನೆ 25 ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು ಎಂಬ ಗುರಿ ಎಂದರು.
ಬಿಜೆಪಿ ಸರಿಪಡಿಸಲಾಗದಷ್ಟು ಹದಗೆಟ್ಟಿದೆ ಎಂಬ ಹಿಂದಿನ ಹೇಳಿಕೆ ವಿಚಾರ ಆ ಸಂದರ್ಭದಲ್ಲಿ ಆವತ್ತಿನ ಪರಿಸ್ಥಿತಿ ಬಗ್ಗೆ ಹೇಳಿದ್ದೆ ಯಾವುದನ್ನೂ ಸರಿಪಡಲಾಗುವುದಿಲ್ಲ ಎಂಬ ನಿರಾಶೆ ಇರಬಾರದು ಆಶಾಭಾವನೆ ಇರಬೇಕು ಆ ಹಿನ್ನೆಲೆಯಲ್ಲಿ ಸರಿಪಡಿಸಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಮುನ್ನಡೆಸುವ ಕೆಲಸ ಆಗಲಿದೆ