ನಾಡಹಬ್ಬ ಮೈಸೂರು ದಸರಾ ಕರ್ನಾಟಕದ ಪ್ರತಿಯೊಬ್ಬರಿಗೂ ಕೂಡ ಬಹು ದೊಡ್ಡ ಹಬ್ಬ ಈ ಹಬ್ಬದಂದು ತಾಯಿ ಚಾಮುಂಡೇಶ್ವರಿ ಧೈರ್ಯ, ಶಕ್ತಿ, ಭಕ್ತಿಯನ್ನು ನೀಡಿ ಪ್ರತಿಯೊಬ್ಬರನ್ನು ಕಾಪಾಡಲಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಆಶಿಸಿದರು. ನಾಡಹಬ್ಬ ಮೈಸೂರು ದಸರಾ ಅಂಗವಾಗಿ ಮೈಸೂರು ನಗರ ಹೊರವಲಯ ಉತ್ತನಹಳ್ಳಿಯಲ್ಲಿ ಆಯೋಜಿಸಿದ ಯುವ ದಸರಾ ಕಾರ್ಯಕ್ರಮವನ್ನು ಕನ್ನಡ ಚಲಚಿತ್ರ ನಿರ್ಮಾಪಕರಾದ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಉದ್ಘಾಟಿಸಿ ಮಾತನಾಡಿ,
ಈ ಕಾರ್ಯಕ್ರಮವು ಮೈಸೂರು ಇತಿಹಾಸವನ್ನು ಸಾರುವ ಹಬ್ಬ. ಈ ಹಬ್ಬವನ್ನು ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ, ಈ ಹಬ್ಬವು ಕರ್ನಾಟಕ ಹಾಗೂ ಮೈಸೂರಿಗೆ ಹೆಚ್ಚಿನ ಮೆರಗನ್ನು ನೀಡುವ ಹಬ್ಬವಾಗಿದೆ. ಇದು ನಮ್ಮ ನಾಡ ಹಬ್ಬ ಈ ಹಬ್ಬವು ಪ್ರತಿಯೊಬ್ಬರಿಗೂ ಧೈರ್ಯ, ಶಕ್ತಿ, ಭಕ್ತಿಯನ್ನು ತೋರುತ್ತದೆ ಎಂದು ತಿಳಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಕೂಡ ಧನ್ಯವಾದಗಳನ್ನು ಅರ್ಪಿಸಿದರು.
ಯುವ ದಸರಾ ಕಾರ್ಯಕ್ರಮದಲ್ಲಿ ಮೊದಲ ಗೀತೆಯಾಗಿ ಕೆ.ಜಿ.ಎಫ್ ಚಿತ್ರದ ನಾನು ಬಳ್ಳಿಯ ಮಿಂಚು, ರಾಬರ್ಟ್ ಚಿತ್ರದ ಬೇಬಿ ಡ್ಯಾನ್ಸ್ ಫ್ಲೋರ್ ರೆಡಿ, ಸುಂಟರಗಾಳಿ ಚಿತ್ರದ ಗೀತೆ ಹೀಗೆ ವಿವಿಧ ಗೀತೆಗಳಿಗೆ ಜಾನ್ವಿ ರಾಯಲ್ ಮತ್ತು ತಂಡ ಕುಣಿದು ಕುಪ್ಪಳಿಸಿ ಯುವಕರ ಮೈ ನವಿರೇಳಿಸಿತು, ಚಿತ್ರರಂಗದ ಟಗರು ಪುಟ್ಟಿ ಎಂದೇ ಖ್ಯಾತಿಯನ್ನು ಪಡೆದ ಮಾನ್ವಿತಾ ಮತ್ತು ತಂಡದಿಂದ ಭೀಮಾ ಚಿತ್ರದ ಬ್ಯಾಡ್ ಬಾಯ್ಸ್, ಟಗರು ಚಿತ್ರದ ಮೆಂಟಲ್ ಹೋ ಜಾವ, ಕರಟಕ ಧಮನಕ. ಚಿತ್ರದ ಹಿತ್ತಲಕ ಕರಿಬೇಡ ಮಾವ ಗೀತೆಗಳಿಗೆ ನೃತ್ಯವನ್ನು ಮಾಡಿ ಯುವಕರನ್ನು ರಂಜಿಸಿದರು.
ಕನ್ನಡದ ಖ್ಯಾತ ಹಿನ್ನಲೆ ಗಾಯಕ ವಾಸುಕಿ ವೈಭವ್ ಅವರ ತಂಡದಿಂದ ಕಿರಿಕ್ ಪಾರ್ಟಿ ಚಿತ್ರದ ಕಾಗದದ ದೋಣಿಯಲ್ಲಿ ಗೀತೆಯ ಮೂಲಕ ಪ್ರಾರಂಭಿಸಿ, ಕಾಣದಂತೆ ಮಯವಾದನ್ನು ನಮ್ಮ ಶಿವ ಕೈಲಾಸ ಸೇರಿಕೊಂಡನು ಎಂದು ಪುನೀತ್ ರಾಜ್ ಕುಮಾರ್ ಅವರನ್ನು ಮೈಸೂರು ಜನತೆಯ ಧ್ವನಿಯಲ್ಲಿ ಜೊತೆಗೂಡಿಸಿದರು, ಬಡವ ರಾಸ್ಕಲ್ ಚಿತ್ರದ ಬಂದು ನಮ್ಮೊನೋ ಕಮಾನ್ ಮ್ಯಾನು ಗೀತೆಯ ಮೂಲಕ ಸ್ನೇಹದ ಶ್ರೀಮಂತಿಕೆಯನ್ನು ಹಂಚಿ ಶಿಲೆ ಚಪ್ಪಾಳೆ ಮೂಲಕ ಮೈಸೂರು ಜನತೆಯ ಪ್ರೀತಿ ಪಡೆದರು.
ಖ್ಯಾತ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಲ್ ರವರು ಸುನ್ ರಹಾ ಹೇನ ಗೀತೆಯ ಮೂಲಕ ಕಾರ್ಯಕ್ರಮವನ್ನು ಆರಂಭಿಸಿ ಯುವ ದಸರಾ ಕಾರ್ಯಕ್ರಮದ ಮೊದಲ ದಿನ ಕನ್ನಡದ ಚಕ್ರವರ್ತಿ ಚಿತ್ರದ ಒಂದು ಮಳೆ ಬಿಲ್ಲು, ಕೊಟ್ಟಿಗೊಬ್ಬ ಚಿತ್ರದ ಸಾಲುತಿಲ್ಲವೇ , ಸಂಜು ವೆಡ್ಸ್ ಗೀತಾ ಚಿತ್ರದ ಗಗನವೇ ಬಾಗಿ ಹಾಗೇ ವಿವಿಧ ಕನ್ನಡ ಚಿತ್ರಗೀತೆಗಳು ಹಾಗೂ ಹಿಂದಿ ಚಿತ್ರದ ವಿವಿಧ ಗೀತೆಗಳಿಗೆ ಮೈಸೂರು ಜನತೆಯನ್ನು ಕುಣಿದು ಕುಪ್ಪಳಿಸಿ ರಂಗೇಸಿರಿ ನಿರೀಕ್ಷೆಗೂ ಮೀರಿದ ಜನತೆಯ ಪ್ರೀತಿ ಬರಿಸುವಲ್ಲಿ ಯಶಸ್ವಿಗೊಂಡರು.
ಕಾರ್ಯಕ್ರಮದಲ್ಲಿ ಗಾಯಕಿ ಶ್ರೇಯಾ ಘೋಷಾಲ್ ಅವರು ಹಾಡಿದ ಹಿಂದಿ ಚಿತ್ರದ ಗೀತೆಗಳಿಗಿಂತ ಕನ್ನಡ ಚಿತ್ರದ ಗೀತೆಗಳಿಗೆ ಮೈಸೂರಿನ ಸಂಗೀತ ರಸಿಕರು, ಯುವ ಸಮೂಹವು ಹೆಚ್ಚಿನ ಪ್ರೋತ್ಸಾಹ ವನ್ನು ನೀಡಿ, ಜೊತೆಯಲ್ಲಿ ಕುಣಿದು ಕುಪ್ಪಳಿಸಿ ಯುವ ದಸರಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಒಂದು ಭಾಗವಾಗಿ ಕಂಡು ಬಂದಿತು. ಕನ್ನಡಿಗರು, ಸಂಗೀತ ಪ್ರೀಯರು ಕನ್ನಡ ಚಿತ್ರ ಗೀತೆಗಳಿಗೆ ಗಾಯಕಿಯ ಕಂಠ ಸಿರಿಗೆ ಮಾರುಹೋದರು.
ನಿರೀಕ್ಷೆಗೂ ಮೀರಿದ ಕಲಾರಸಿಕರು ನಾಡ ಹಬ್ಬ ಮೈಸೂರು ದಸರಾದ ಆಕಶರ್ಷಣಿಯ ಕಾರ್ಯಕ್ರಮಗಳಲ್ಲಿ ಒಂದಾದ ಯುವ ದಸರಾ ಕಾರ್ಯಕ್ರಮವನ್ನು ಮೈಸೂರು ಹೊರವಲಯದಲ್ಲಿ ಆಯೋಜಿಸಿದರಿಂದ ಸಾರ್ವಜನಿಕರಿಂದ ವಿವಿಧ ಬಗ್ಗೆಯ ಅನಿಸಿಕೆಯೂ ವ್ಯಕ್ತವಾಗಿತ್ತು, ಆದರೆ ಕಾರ್ಯಕ್ರಮದ ದಿನ ಪ್ರತಿ ವರ್ಷ ಮಹಾರಾಜ ಕಾಲೇಜು ಮೈದಾನದಲ್ಲಿ ಸೇರುತ್ತಿದ ಯುವ ಸಮೂಹಕಿಂತ ಹೆಚ್ಚಿನ ಜನರು ಪಾಲ್ಗೊಂಡು ಮೊದಲ ದಿನದ ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದರು.
ವರದಿಗಾರರು ರಂಗನಾಥ್ ಭಂಡಾರಿ……