ಕಾಡಾನೆ ದಾಳಿಯಿಂದ ಗಾಯಗೊಂಡಿದ್ದ ದಸರಾ ಆನೆ ಗೋಪಾಲಸ್ವಾಮಿ ಸಾವು

ಜಿಲ್ಲೆ

ಮೈಸೂರುವಿಶ್ವವಿಖ್ಯಾತ ಮೈಸೂರು ದಸರಾ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದ ಗೋಪಾಲಸ್ವಾಮಿ ಸಾಕಾನೆಯು ಕಾಡಾನೆ ದಾಳಿಗೆ ತುತ್ತಾಗಿ ಮೃತಪಟ್ಟಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಕೊಳುವಿಗೆ ಬಳಿ ಅರಣ್ಯ ಪ್ರದೇಶದಲ್ಲಿ ಗೋಪಾಲಸ್ವಾಮಿ ಸಾಕಾನೆಯು ಮೃತ ಪಟ್ಟಿದ್ದು, ಮಂಗಳವಾರದಂದು ನೇರಳಕುಪ್ಪೆ ಬಿ ಹಾಡಿಯ ಕ್ಯಾಂಪ್​ನಿಂದ ಮೇಯಲು ಅರಣ್ಯಕ್ಕೆ ಬಿಟ್ಟಿದ್ದಾರೆ. ಈ ವೇಳೆ ಕಾಡಾನೆಗಳು ದಾಳಿ ನಡೆಸಿದೆ.

ಗೋಪಾಲಸ್ವಾಮಿ ಮೇಲೆ ಕಾಡಾನೆ ಅಯ್ಯಪ್ಪ ದಾಳಿ

ಹುಣಸೂರು ತಾಲ್ಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಘಟನೆ ನಡೆದಿದೆ. ಗೋಪಾಲಸ್ವಾಮಿ ಮೇಲೆ ಕಾಡಾನೆ ಅಯ್ಯಪ್ಪ ದಾಳಿ ನಡೆಸಿದೆ. ದಾಳಿಯಲ್ಲಿ ಆನೆ ತೀವ್ರಗಾಗಿ ಗಾಯಗೊಂಡಿದ್ದು, ಗೋಪಾಲಸ್ವಾಮಿ ಆನೆಯ ಚಿರಾಟ ಕೇಳಿ ಮಾವುತರು ಕಾಡಿಗೆ ಹೋಗಿ ನೋಡಿದ್ದಾರೆ. ಆಗ ಗೋಪಾಲಸ್ವಾಮಿ ಆನೆ ಗಾಯಗೊಂಡು ಕೆಳಗೆ ಬಿದ್ದಿತ್ತು.

ಚಿಕಿತ್ಸೆ ಫಲಿಸದೆ ಗೋಪಾಲಸ್ವಾಮಿ ಸಾವು

ಮಂಗಳವಾರ ಮಧ್ಯಾಹ್ನದಿಂದ ನಾಲ್ಕು ವೈದ್ಯರ ತಂಡ ಗೋಪಾಲಸ್ವಾಮಿ ಆನೆಗೆ ಎಲ್ಲಾ ರೀತಿಯ ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಮಧ್ಯಾಹ್ನ 1 ಗಂಟೆ ವೇಳೆ ಸಾವನ್ನಪ್ಪಿದೆ. ಸ್ಥಳಕ್ಕೆ ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ ಎಸಿಎಫ್ ದಯಾನಂದ್ ಸೇರಿದಂತೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿದ್ದರು.  ಕೊಳುವಿನ ಬಳಿ ಅಂತ್ಯಸಂಸ್ಕಾರ ನಡೆಸಲಾಯಿತು.