ಬೆಂಗಳೂರು: ವಿದ್ಯಾರ್ಥಿ ಜೀವನದ ಟರ್ನಿಂಗ್ ಪಾಯಿಂಟ್, ಭವಿಷ್ಯದ ಹಾದಿಯ ಮೆಟ್ಟಿಲು ಅಂತೆಲ್ಲ ಕರೆಯಲ್ಪಡುವ ದ್ವೀತಿಯ ಪಿಯುಸಿ ಫಲಿತಾಂಶ ಇಂದು ಹೊರಬಿದ್ದಿದೆ. ಪರೀಕ್ಷೆ ಬರೆದು ರಿಸಲ್ಟ್ ಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳಿಗೆ ಕೊನೆಗೂ ತಮ್ಮ ಶ್ರಮದ ಫಲ ಸಿಕ್ಕಿದೆ. ಪಿಯುಸಿ ಪರೀಕ್ಷೆಯಲ್ಲಿ ಯಾವ ಜಿಲ್ಲೆಗೆ ಯಾವ ಪಟ್ಟ ಒಲಿದಿದೆ,ಯಾರ ಕೊರಳಿಗೆ ರ್ಯಾಂಕ್ ಅನ್ನೋ ವಿಜಯಮಾಲೆ ದಕ್ಕಿದೆ ಅನ್ನೋದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
2023-24 ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಹೊರಬಿದ್ದಿದೆ. ಈ ಬಾರಿ 6 ಲಕ್ಷದ 81 ಸಾವಿರದ 79ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ರು,ಇದರಲ್ಲಿ 5 ಲಕ್ಷದ 52ಸಾವಿರದ 690 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಈ ಬಾರಿಯೂ ದಕ್ಷಿಣ ಕನ್ನಡ ಜಿಲ್ಲೆ 97.37% ಮೂಲಕ ಪ್ರಥಮ ಸ್ಥಾನಕಾಯ್ದುಕೊಂಡಿದ್ರೆ. ಗದಗ 72.86% ಫಲಿತಾಂಶದ ಮೂಲಕ ಕೊನೆ ಸ್ಥಾನ ಪಡೆದಿದ್ದು,ಎಂದಿನಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ಈ ಬಾರಿ ಬೆಂಗಳೂರಿನ ಎನ್ಎಂಕೆಆರ್ವಿ ಕಾಲೇಜಿನ ಮೇದಾ, ವಿಜಯಪುರದ ವೇದಾಂತ್, ಹಾಗೂ ಬಳ್ಳಾರಿಯ ಕವಿತಾ ಆರ್ಟ್ಸ್ ವಿಭಾಗದಲ್ಲಿ 600ಕ್ಕೆ 596 ಅಂಕ ಗಳಿಸಿ ಮೊದಲ ಸ್ಥಾನ ಹಂಚಿಕೊಂಡರೆ, ವಾಣಿಜ್ಯ ವಿಭಾಗದಲ್ಲಿ ತುಮಕೂರಿನ ಗಾನವಿ 600ಕ್ಕೆ 597 ಅಂಕ ಪಡೆದು ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನೂ…ಹುಬ್ಬಳ್ಳಿ -ಧಾರವಾಡದ ವಿದ್ಯಾಲಕ್ಷ್ಮೀ ವಿಜ್ಞಾನ ವಿಭಾಗದಲ್ಲಿ 600ಕ್ಕೆ 598 ಅಂಕ ಪಡೆದು ಕೊಂಡು ಪ್ರಥಮ ಸ್ಥಾನದಲ್ಲಿದ್ದರೆ… ಊರ್ವಿಶ್, ವೈಭವಿ, ಜಾನವಿ, ಗುಣಸಾಗರ ಎಂಬ ವಿದ್ಯಾರ್ಥಿಗಳು 597 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದುಕೊಂಡು ನಗೆ ಬೀರಿದರು.
ಇನ್ನೂ… ಇಂದಿನಿಂದಲೇ ಉತ್ತರ ಪತ್ರಿಕೆಯ ಸ್ಕ್ಯಾನ್ ಪ್ರತಿಯಾಗಿ ಅರ್ಜಿ ಸಲ್ಲಿಸಲು ಪರೀಕ್ಷಾ ಮಂಡಳಿ ಅವಕಾಶವನ್ನು ನೀಡಿದ್ದು ಒಂದು ವೇಳೆ ವಿದ್ಯಾರ್ಥಿಗಳು ತೆಗೆದುಕೊಂಡಿರುವಂತಹ ಅಂಕದ ಬಗ್ಗೆ ಅನುಮಾನವಿದ್ದಲ್ಲಿ ಮರು ಮೌಲ್ಯಮಾಪನಕ್ಕೂ ಅರ್ಜಿ ಸಲ್ಲಿಸಲು ಇಂದಿನಿಂದಲೇ ಅವಕಾಶವನ್ನು ನೀಡಲಾಗಿದೆ ಇನ್ನು ಸದ್ಯ ಪರೀಕ್ಷೆ ಒಂದರ ಫಲಿತಾಂಶ ಬಂದಿದ್ದು ಏಪ್ರಿಲ್ 29ರಿಂದ ಮೇ 16 ರವರೆಗೆ ಪರೀಕ್ಷೆ ಎರಡನ್ನು ನಡೆಸಲು ತೀರ್ಮಾನಿಸಲಾಗಿದೆ. ಒಟ್ಟಿನಲ್ಲಿ ಕೊನೆಗೂ ವಿದ್ಯಾರ್ಥಿಗಳು ಕಾಯುತ್ತಿದ್ದ ದ್ವಿತೀಯ ಪಿಯು ಪರೀಕ್ಷೆಯ ಫಲಿತಾಂಶ ಹೊರ ಬಿದ್ದಿದ್ದು ರಾಂಕ್ ಪಡೆದ ವಿದ್ಯಾರ್ಥಿಗಳ ಮೊಗದಲ್ಲಿ ಖುಷಿ ಮೂಡಿಸುವದಂತು ನಿಜ.