ಇಂದಿನ ಜೀವನ ಶೈಲಿಯಿಂದ ಸಾಕಷ್ಟು ಮಹಿಳೆಯರು ತಾಯಿತನವನ್ನು ಅನುಭವಿಸಲು ಸಾಧ್ಯವಾಗುತ್ತಿಲ್ಲ. ಇದನ್ನೆ ಬಂಡವಾಳ ಮಾಡಿಕೊಂಡ ಕೆಲವರು ಮಕ್ಕಳಿಲ್ಲದವರಿಗೆ ಮಕ್ಕಳನ್ನು ಹೆತ್ತು ಕೊಟ್ಟು ಲಕ್ಷ ಲಕ್ಷ ಸಂಪಾದಿಸುತ್ತಿದ್ದಾರೆ. ಇದೀಗ ಚೀನಾದ ಕಂಪನಿಯೊಂದು ಮಗುವಿಗೆ ಜನ್ಮ ನೀಡುವ ಮಹಿಳೆಗೆ ಸಖತ್ ಆಫರ್ ನೀಡಿದೆ.
28 ರಿಂದ 29 ವರ್ಷ ವಯಸ್ಸಿನ ಯಾವುದೇ ಮಹಿಳೆ ಮಗುವಿಗೆ ಜನ್ಮ ನೀಡುವ ಮೂಲಕ ಹಣವನ್ನು ಗಳಿಸಬಹುದು ಎಂದು ಕಂಪನಿ ಹೇಳಿದೆ. ಇದು ಒಂದು ರೀತಿಯ ವಾಣಿಜ್ಯ ಜಾಹೀರಾತಾಗಿದ್ದು, ಮಕ್ಕಳನ್ನು ಹೊಂದುವ ಮೂಲಕ ಹಣವನ್ನು ಸಂಪಾದಿಸಲು ಮಹಿಳೆಯರನ್ನು ಪ್ರೋತ್ಸಾಹಿಸುತ್ತಿದೆ.
ಚೀನಾದ ಹೆನಾನ್ ಪ್ರಾಂತ್ಯದಲ್ಲಿರುವ ಹುಚೆನ್ ಹೌಸ್ ಕೀಪಿಂಗ್, ಮಹಿಳೆಯರು ಬಾಡಿಗೆ ತಾಯಂದಿರಾಗುವ ಮೂಲಕ ಹಣವನ್ನು ಗಳಿಸಬಹುದು ಎಂದು ಆಫರ್ ನೀಡುತ್ತಿದೆ. ಅಷ್ಟೇ ಅಲ್ಲ, ಅವರ ವಯಸ್ಸಿಗೆ ಅನುಗುಣವಾಗಿ ಪ್ಯಾಕೇಜ್ ನೀಡಲಾಗುತ್ತಿದೆ. 28 ವರ್ಷದ ಮಹಿಳೆ ತಾಯಿಯಾದರೆ ಆಕೆಗೆ 220,000 ಯುವಾನ್ ಅಂದರೆ 25,23,783 ರೂಪಾಯಿ ಮತ್ತು 29 ವರ್ಷದ ಮಹಿಳೆ ಮಗುವಿಗೆ ಜನ್ಮ ನೀಡಿದರೆ ಆಕೆಗೆ 210,000 ಯುವಾನ್ ಅಂದರೆ 24,19,057 ರೂಪಾಯಿ ನೀಡಲಾಗುತ್ತದೆ. ಅಂತೆಯೇ, ಮಹಿಳೆಗೆ ವಯಸ್ಸಾದಂತೆ, ಮಗುವಿಗೆ ಜನ್ಮ ನೀಡಲು ಅವಳು ಕಡಿಮೆ ಹಣವನ್ನು ಪಡೆಯುತ್ತಾಳೆ. ಯಾರಾದರೂ 40-42 ವರ್ಷಗಳಲ್ಲಿ ಈ ಕೆಲಸವನ್ನು ಮಾಡಲು ಬಯಸಿದರೆ, ಕಂಪನಿಯು ಅವರಿಗೆ 20 ಲಕ್ಷ ರೂಪಾಯಿಗಳನ್ನು ನೀಡಲಿದೆಯಂತೆ.