ಚೀನಾದಲ್ಲಿ ಮತ್ತೆ ಭೂಮಿ ಕಂಪಿಸಿದ್ದು. ಕಳೆದ 48 ಗಂಟೆಗಳಲ್ಲಿ 2 ಭಾರಿ ಭೂಮಿ ಕಂಪಿಸಿದ್ದು ಇದರಿಂದ ವಾಯುವ್ಯ ಚೀನಾ ಭಾಗದಲ್ಲಿ ಆತಂಕ ಹೆಚ್ಚಿದೆ.
ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರಈ ಬಗ್ಗೆ ಮಾಹಿತಿ ನೀಡಿದ್ದು ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5 ರಷ್ಟು ದಾಖಲಾಗಿದೆ ಎಂದಿದೆ.
ಚೀನಾದ ಕಿಂಗೈ ಎಂಬಲ್ಲಿ ಈ ಭೂಕಂಪನ ಸಂಭವಿಸಿದ್ದು ಅಲ್ಲಿನ ಸಮಯದ ಪ್ರಕಾರ ಗುರುವಾರ ಬೆಳಿಗ್ಗೆ 7.30 ರ ಸಂದರ್ಭದಲ್ಲಿ ಭೂಮಿ ನಡುಗಿದೆ. ಸದ್ಯ ಯಾವುದೇ ಸಾವು ನೋವುಗಳು ಬರದಿಯಾಗಿಲ್ಲ. ಇನ್ನಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
ಸಾರ್ವಜನಿಕರೆಲ್ಲರೂ ಸುರಕ್ಷಿತವಾಗಿ ಇರುವಂತೆ ಸೂಚಿಸಲಾಗಿದ್ದು, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಖಾರಿಗಳು ತಿಳಿಸಿದ್ದಾರೆ.