ನ್ಯೂಜೆರ್ಸಿಯಲ್ಲಿ 4.8 ತೀವ್ರತೆಯ ಭೂಕಂಪ ಸಂಭವಿಸಿದ್ದು, ಈ ವೇಳೆ ಸ್ಟ್ಯಾಚ್ಯೂ ಆಫ್ ಲಿಬರ್ಟಿ ಪ್ರತಿಮೆಯು ಕಂಪಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಭೂಕಂಪನವು ನ್ಯೂಜೆರ್ಸಿಯ ಕ್ಯಾಲಿಫೋನ್ ಬಳಿ ಹುಟ್ಟಿಕೊಂಡಿದ್ದು, ಇದು ಬೆಳಿಗ್ಗೆ 10:23 ರ ಸುಮಾರಿಗೆ ಅಪ್ಪಳಿಸಿದೆ. @EarthCam ಟ್ವಿಟರ್ ಖಾತೆಯಲ್ಲಿ ಭೂಕಂಪನದ ವಿಡಿಯೋವನ್ನು ಏಪ್ರಿಲ್ 05ರಂದು ಹಂಚಿಕೊಳ್ಳಲಾಗಿದೆ.
ಸ್ಟ್ಯಾಚ್ಯೂ ಆಫ್ ಲಿಬರ್ಟಿ ಭೂಕಂಪನದ ವೇಳೆ ಕೆಲ ಸೆಕೆಂಡುಗಳ ವರೆಗೆ ಕಂಪಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಸರಿಸುಮಾರು 42 ಮಿಲಿಯನ್ ಜನರು ಭೂಕಂಪವನ್ನು ಅನುಭವಿಸಿದ್ದಾರೆ ಎಂದು ವರದಿಯಾಗಿದೆ, ವಾಷಿಂಗ್ಟನ್ DC ಯಿಂದ ನ್ಯೂಯಾರ್ಕ್-ಕೆನಡಾ ಗಡಿಯವರೆಗೆ ಕಂಪನಗಳು ವಿಸ್ತರಿಸಿವೆ. ಅಲುಗಾಡುವಿಕೆಯು ಕೇವಲ ಸೆಕೆಂಡುಗಳ ಕಾಲ ನಡೆದರೂ, ನ್ಯೂಯಾರ್ಕ್ ನಗರದಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.