ಎಣ್ಣೆಯುಕ್ತ ಚರ್ಮ ಹೊಂದಿರುವ ಜನರಿಗೆ ಮನೆಯಿಂದ ಹೊರಬಂದ ತಕ್ಷಣ ಮುಖದಲ್ಲಿ ಎಣ್ಣೆ, ಬೆವರು ಇತ್ಯಾದಿ ಸಮಸ್ಯೆಗಳು ಶುರುವಾಗುತ್ತವೆ. ಇದರಿಂದ ಮುಕ್ತಿ ಪಡೆಯಲು ಹಾಗೂ ಮುಖದ ಅಂದವನ್ನು ಹೆಚ್ಚಿಸಲು ಮಾರುಕಟ್ಟೆಯಲ್ಲಿ ಸಿಗುವ ಅನೇಕ ಮಾಯಿಶ್ಚರೈಸ್ಗಳನ್ನು ಬಳಸಿರುತ್ತೀರಾ. ಆದರೂ ಅದು ಕಡಿಮೆ ಆಗಿರುವುದಿಲ್ಲ. ಈ ಬೆವರು ಹಾಗು ಮುಖದಲ್ಲಿ ಉಂಟಾಗುವ ಅತಿಯಾದ ಎಣ್ಣೆಯನ್ನು ಹೊಗಲು ಸಿಂಪಲ್ಲಾಗಿ ಇಲ್ಲೊಂದಿಷ್ಟು ಮನೆ ಮದ್ದುಗಳಿವೆ.
ಮುಖವನ್ನು ಆಗಾಗೆ ತೊಳಿಯಿರಿ: ನಿಯಮಿತವಾಗಿ ಮುಖವನ್ನು ತೊಳೆಯುವುದರಿಂದ ಚರ್ಮದ ಮೇಲಿನ ಎಣ್ಣೆಯ ಪ್ರಮಾಣವನ್ನು ಕಡಿಮೆ ಮಾಡಬಹುದು. ಪ್ರತಿನಿತ್ಯ ಬೆಚ್ಚಗಿನ ನೀರನ್ನು ಮುಖಕ್ಕೆ ಸಿಂಪಡಿಸಿಕೊಳ್ಳಿ. ಇದರಿಂದ ಎಣ್ಣೆಯುಕ್ತ ಜಿಡ್ಡನ್ನು ಹೊಗಲಾಡಿಸಬಹುದು.
ರೋಸ್ ವಾಟರ್ ಸ್ಪ್ರೇ: ರೋಸ್ ವಾಟರ್ ಸ್ಪ್ರೇ ಮುಖಕ್ಕೆ ಸಿಂಪಡಿಸುವುದರಿಂದ ನಿಮಗೆ ತಾಜಾತನದ ಅನುಭವ ದೊರೆಯುತ್ತದೆ. ನಿಮ್ಮ ಮುಖ ಎಣ್ಣೆಯಿಂದ ಜಿಡ್ಡಾಗಿ ಕಾಣಿಸಿದಾಗ ಜೊತೆಗೆ ಮುಖದಲ್ಲಿ ಬೆವರುವಿಕೆಯನ್ನು ಅನುಭವಿಸುತ್ತಿರುವಾಗ ರೋಸ್ ವಾಟರ್ ಅನ್ನು ಸಿಂಪಡಿಸಿ ಅದನ್ನು ಯಾವುದಾದರೂ ಮೃದು ಬಟ್ಟೆ ಅಥವಾ ಹತ್ತಿಯಿಂದ ಸ್ವಚ್ಛಗೊಳಿಸಿ. ತಕ್ಷಣ ನಿಮ್ಮಲ್ಲಿರುವ ಆಯಾಸ ಮುಖ ತೊಲಗಿ ಫ್ರೆಶ್ ಆಗಿ ಕಾಣುತ್ತಿರಾ.
ಗ್ರೀನ್ ಟೀ: ಪ್ರತಿನಿತ್ಯ ಗ್ರೀನ್ ಟೀ ಕುಡಿಯುವುದರಿಂದ ಆರೋಗ್ಯಕರ ಜೀವನವನ್ನು ಪಡೆಯುತ್ತೀರಾ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಹಾಗೇ ಗ್ರೀನ್ ಟೀಯನ್ನು ಕುಡಿಯುವ ಬದಲು ಮುಖಕ್ಕೆ ಹಚ್ಚುವುದರಿಂದ ಎಣ್ಣೆಯುಕ್ತ ಚರ್ಮವನ್ನು ಹೊಗಲಾಡಿಸಬಹುದು. ಅದಕ್ಕಾಗಿ ತಯಾರಿಸಿದ ಗ್ರೀನ್ ಟೀಯನ್ನು ತಣ್ಣಗಾಗುವವರೆಗೆ ಹಾಗೇ ಬಿಡಿ. ನಂತರ ಒಂದು ಸಣ್ಣ ಬಾಟಲಿಯಲ್ಲಿ ಗ್ರೀ ಟೀಯನ್ನು ಸಿಂಪಡಿಸಿ. ಅದನ್ನು ಮುಖಕ್ಕೆ ಸ್ಪ್ರೇ ಮಾಡಿ. ಇದರಿಂದ ಎಣ್ಣೆಯುಕ್ತ ಚರ್ಮ ತೊಲಗುತ್ತದೆ.
ತುಳಸಿ ಸ್ಪ್ರೇ: ತುಳಸಿ ಸ್ಪ್ರೇಯನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ಒಂದು ಕಪ್ ನೀರಿನಲ್ಲಿ 3-4 ತುಳಸಿ ಎಲೆಗಳನ್ನು ಹಾಕಿ ಮತ್ತು 2-3 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬೇಯಿಸಿ. ನಂತರ ಅದನ್ನ ತಣ್ಣಗಾಗಿಸಿ, ನಂತರ ಅದನ್ನು ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ. ಅಗತ್ಯವಿದ್ದಾಗ ಬಳಸಿ, ಇದು ಮೊಡವೆಗಳಿಂದ ಪರಿಹಾರವನ್ನು ನೀಡುತ್ತದೆ. ಇದರಿಂದ ಎಣ್ಣೆಯುಕ್ತ ಚರ್ಮ ಹೊಗಲಾಡಿಸಿ, ಫ್ರೇಶ್ನೆಸ್ ಸಿಗುತ್ತೆ.
ಟೊಮೆಟೊ: ಟೊಮೆಟೊವನ್ನು ಮುಖದಲ್ಲಿ ಮುಡುವ ಮೊಡವೆಗೆ ಮನೆಮದ್ದಾಗಿದೆ. ಟೊಮೆಟೊದಲ್ಲಿ ಆಮ್ಲಗಳು ಚರ್ಮದಲ್ಲಿರುವ ಎಣ್ಣೆಯನ್ನು ಹಿರಿಕೊಂಡು ಮುಖವನ್ನು ಕಾಂತಿಯುತವಾಗಿ ಮಾಡುತ್ತದೆ. ನೀವು ಪ್ರತಿನಿತ್ಯ ಟೊಮೆಟೊವನ್ನು ಫೆಸ್ ಮಾಸ್ಕ್ ತರ ಮಾಡಿಕೊಂಡು 5 ನಿಮಿಷಗಳ ಕಾಲ ಬಳಸಿಕೊಳ್ಳಿ.