ಮೆಂತ್ಯವು ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸುತ್ತವೆ. ಇದು ಅಜೀರ್ಣ ಅಥವಾ ಉಬ್ಬುವಿಕೆಯಿಂದ ಉಂಟಾಗುವ ಅಸ್ವಸ್ಥತೆಯನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಹೆಚ್ಚುವರಿಯಾಗಿ, ಮೆಂತ್ಯವು ಕರುಳಿನಲ್ಲಿನ ಕೊಲೆಸ್ಟ್ರಾಲ್ ಹೀರಿಕೊಳ್ಳುವುದನ್ನು ತಡೆಯಲು ಸಹಾಯ ಮಾಡುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದರ ಜೊತೆಗೆ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ತೂಕ ನಷ್ಟಕ್ಕೂ ಇದು ಸಹಕಾರಿ ಎಂದು ಯೋಗ ಇನ್ಸ್ಟಿಟ್ಯೂಟ್ನ ನಿರ್ದೇಶಕ ಹಂಸಾಜಿ ಯೋಗೇಂದ್ರ ಅವರು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳುತ್ತಾರೆ.
ಮೆಂತ್ಯ ಬೀಜಗಳನ್ನು ಹೇಗೆ ಸೇವಿಸಿದರೆ ಉತ್ತಮ ? ಒಂದು ಚಮಚ ಮೆಂತ್ಯವನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ಮರುದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅದನ್ನು ಸೇವಿಸಿ. ನೀರಿನೊಂದಿಗೆ ಬೀಜಗಳನ್ನು ಚೆನ್ನಾಗಿ ಅಗಿದು ನುಂಗಿ.
ಜಿಂದಾಲ್ ನೇಚರ್ಕ್ಯೂರ್ ಇನ್ಸ್ಟಿಟ್ಯೂಟ್ನ ಮುಖ್ಯ ಆಹಾರ ತಜ್ಞರಾದ ಸುಷ್ಮಾ ಪಿ.ಎಸ್ ಅವರು ಮೆಂತ್ಯ ಬೀಜಗಳ 14 ದಿನಗಳವರೆಗೆ ಸೇವಿಸುವುದರಿಂದ ದೇಹದ ಮೇಲೆ ವಿವಿಧ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಹೇಳುತ್ತಾರೆ.
ಜೀರ್ಣಕಾರಿ ಸಮಸ್ಯೆಗಳ ನಿವಾರಣೆ: ಎರಡು ವಾರಗಳ ಕಾಲ ಮೆಂತ್ಯ ಬೀಜಗಳನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ವರ್ಧಿಸುವುದರ ಜೊತೆಗೆ ಹೊಟ್ಟೆ ಉಬ್ಬರಿಸುವುದು, ಅಜೀರ್ಣ ಮತ್ತು ಮಲಬದ್ಧತೆ ಸೇರಿದಂತೆ ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಣೆಯಾಗುತ್ತದೆ. ಮೆಂತ್ಯ ಬೀಜಗಳಲ್ಲಿನ ಹೆಚ್ಚಿನ ಫೈಬರ್ ಅಂಶವು ಕರುಳಿನ ಆರೋಗ್ಯವನ್ನು ಬೆಂಬಲಿಸುತ್ತದೆ ಎಂದು ಸುಷ್ಮಾ ಹೇಳುತ್ತಾರೆ.
ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣ: ಮೆಂತ್ಯವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಏಕೆಂದರೆ ಮೆಂತ್ಯದಲ್ಲಿ “ಹೈಪೊಗ್ಲಿಸಿಮಿಕ್ ಗುಣಗಳನ್ನು” ಹೊಂದಿವೆ ಎಂದು ಹೇಳಲಾಗುತ್ತದೆ. ಈಗಾಗಲೇ ಮಧುಮೇಹ ಹೊಂದಿರುವ ಅಥವಾ ಪೂರ್ವ ಮಧುಮೇಹ ಸ್ಥಿತಿ ಹೊಂದಿರುವವರಿಗೆ ಇದು ವಿಶೇಷವಾಗಿ ಸಹಾಯಕವಾಗಬಹುದು ಎಂದು ಸುಷ್ಮಾ ಹೇಳಿದರು.
ಹೃದಯ ರಕ್ತನಾಳದ ಆರೋಗ್ಯ: ಮೆಂತ್ಯ ಬೀಜಗಳನ್ನು ಸತತವಾಗಿ ಎರಡು ವಾರಗಳ ಕಾಲ ಸೇವಿಸುವುದರಿಂದ ಸುಧಾರಿತ ಲಿಪಿಡ್ ಪ್ರೊಫೈಲ್ಗಳು ಮತ್ತು ಹೃದಯರಕ್ತನಾಳದ ಆರೋಗ್ಯಕ್ಕೆ ಕಾರಣವಾಗಬಹುದು ಎಂದು ಆರ್ಟೆಮಿಸ್ ಲೈಟ್, ಎನ್ಎಫ್ಸಿ, ನವದೆಹಲಿಯ ಸಂಗೀತಾ ತಿವಾರಿ ಅವರು ಹೇಳುತ್ತಾರೆ
ತೂಕ ನಷ್ಟಕ್ಕೆ ಸಹಕಾರಿ: ಮೆಂತ್ಯ ಬೀಜಗಳು ಹಸಿವನ್ನು ನಿಗ್ರಹಿಸಲು ಮತ್ತು ಪೂರ್ಣತೆಯ ಭಾವನೆಗಳನ್ನು ಉತ್ತೇಜಿಸುತ್ತವೆ. ಇವು ತೂಕ ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ. 14 ದಿನಗಳಲ್ಲಿ, ನಿಮ್ಮ ಆಹಾರದಲ್ಲಿ ಮೆಂತ್ಯ ಬೀಜಗಳನ್ನು ಸೇರಿಸುವುದು ಕಡುಬಯಕೆಗಳನ್ನು ನಿಯಂತ್ರಿಸಲು ಮತ್ತು ತೂಕ ನಷ್ಟ ಪ್ರಯತ್ನಗಳನ್ನು ಬೆಂಬಲಿಸಲು ಸಹಾಯ ಮಾಡುತ್ತದೆ ಎಂದು ತಿವಾರಿ ಹೇಳುತ್ತಾರೆ
ಮೆಂತ್ಯವು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಎರಡು ವಾರಗಳಲ್ಲಿ ಮೆಂತ್ಯ ಬೀಜಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಸಂಧಿವಾತ ಮತ್ತು ಆಸ್ತಮಾದಂತಹ ಉರಿಯೂತದ ಪರಿಸ್ಥಿತಿಗಳ ಲಕ್ಷಣಗಳನ್ನು ನಿವಾರಿಸಬಹುದು ಎಂದು ಸಂಗೀತಾ ತಿವಾರಿ ಹೇಳುತ್ತಾರೆ. ಇದಲ್ಲದೆ, ಮೆಂತ್ಯ ಬೀಜಗಳು ಆರೋಗ್ಯವನ್ನು ಸುಧಾರಿಸುವ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿವೆ