ದೇಹದಲ್ಲಿ ಸೋಂಕುಗಳ ವಿರುದ್ಧ ಹೋರಾಡುವ ಗುಣವನ್ನು ಬಿಳಿರಕ್ತಕಣಗಳು ಪಡೆದಿರುತ್ತವೆ. ಬ್ಯಾಕ್ಟೀರಿಯ ಹಾಗೂ ವೈರಸ್ ಗಳನ್ನು ಹಿಮ್ಮೆಟ್ಟಿಸಿ ವ್ಯಕ್ತಿಯನ್ನು ಮತ್ತೆ ಮೊದಲಿನಂತೆ ಹುಷಾರು ಮಾಡುವಲ್ಲಿ ಬಿಳಿ ರಕ್ತಕಣಗಳು ಪ್ರಮುಖವಾಗಿ ಕೆಲಸ ಮಾಡುತ್ತವೆ.
ಆದರೆ ಯಾವುದೇ ಕಾರಣಕ್ಕೂ ಬಿಳಿ ರಕ್ತ ಕಣಗಳ ಸಂತತಿಯನ್ನು ಕಡಿಮೆ ಆಗದಂತೆ ನೋಡಿಕೊಳ್ಳಬೇಕು. ನಿಮ್ಮ ದೇಹದ ಆರೋಗ್ಯದ ರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಬಿಳಿ ರಕ್ತ ಕಣಗಳ ಸಂಖ್ಯೆಯನ್ನು ಹೆಚ್ಚು ಮಾಡುವಲ್ಲಿ ಈ ಕೆಳಗಿನ ಆಹಾರ ಪದಾರ್ಥಗಳು ತುಂಬಾ ಸೂಕ್ತವೆನಿಸುತ್ತವೆ.
ಪರಂಗಿ ಮರದ ಎಲೆಗಳ ಹೀಗೊಂದು ತಯಾರಿ
ಬೇಕಾಗಿರುವ ಸಾಮಗ್ರಿಗಳು
- ಕೆಲವು ಹಸಿ ಪರಂಗಿ ಎಲೆಗಳು
- ಬೇಕಾದ ಪ್ರಮಾಣದಲ್ಲಿ ನೀರು
ತಯಾರು ಮಾಡುವ ವಿಧಾನ
- ಮೊದಲಿಗೆ ಪರಂಗಿ ಎಲೆಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು.
- ನಂತರ ಎಲೆಗಳನ್ನು ಚೆನ್ನಾಗಿ ರುಬ್ಬಿಕೊಳ್ಳಬೇಕು
- ಅತಿಯಾದ ಪೇಸ್ಟ್ ತಯಾರಾದ ಹಾಗೆ ಅದಕ್ಕೆ ನೀರನ್ನು ಬೆರೆಸಿ ಮತ್ತೊಮ್ಮೆ ರುಬ್ಬಿಕೊಳ್ಳುವ ಪ್ರಯತ್ನಮಾಡಿ
- ಇದನ್ನು ನಂತರ ಸೋಸಿಕೊಂಡು ಇದರ ಜೊತೆಗೆ 1 ಟೇಬಲ್ ಚಮಚ ನಿಂಬೆ ಹಣ್ಣಿನ ರಸ ಮಿಶ್ರಣ ಮಾಡಿ.
ಗಮನಿಸಬೇಕಾದ ಅಂಶ
ಒಂದು ವೇಳೆ ಪರಂಗಿ ಎಲೆಗಳ ರಸ ತುಂಬಾ ಕಹಿ ಇದ್ದರೆ, ಇದರ ಜೊತೆಗೆ ಜೇನು ತುಪ್ಪವನ್ನು ಸಹ ಸೇರಿಸಿ ಸೇವನೆ ಮಾಡಬಹುದು.
ಪರಂಗಿ ಎಲೆಗಳಲ್ಲಿ ವಿಟಮಿನ್-ಸಿ ಅಂಶದ ಪ್ರಮಾಣ ತುಂಬಾ ಹೆಚ್ಚಾಗಿ ಕಂಡುಬರುತ್ತದೆ. ಇದು ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಬಲ ಪಡಿಸುವುದರಲ್ಲಿ ಪರಿಣಾಮಕಾರಿ ಪ್ರಭಾವವನ್ನು ಬೀರುತ್ತದೆ.
ಬಿಳಿರಕ್ತಕಣಗಳ ಸಂಖ್ಯೆಯನ್ನು ಹೆಚ್ಚು ಮಾಡುವಲ್ಲಿ ಮತ್ತು ಇದರಿಂದ ಡೆಂಗ್ಯೂ ಸಮಸ್ಯೆಯಿಂದ ಪಾರಾಗಲು ಅನುಕೂಲವಾಗುತ್ತದೆ.
ಕಿವಿ ಹಣ್ಣು ಬಳಕೆ ಮಾಡಿ
ಬೇಕಾಗಿರುವ ಸಾಮಗ್ರಿಗಳು ಮತ್ತು ತಯಾರು ಮಾಡುವ ವಿಧಾನ
ಒಂದು ಅಥವಾ ಎರಡು ಕಿವಿ ಹಣ್ಣುಗಳು ಮೊದಲಿಗೆ ಕಿವಿ ಹಣ್ಣುಗಳ ಮೇಲ್ಭಾಗದ ಸಿಪ್ಪೆಯನ್ನು ತೆಗೆದು ಹಾಕಿ ಸಣ್ಣದಾಗಿ ಹೆಚ್ಚಿ ಸೇವನೆ ಮಾಡಿ. ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವಲ್ಲಿ ಕಿವಿ ಹಣ್ಣುಗಳ ಪಾತ್ರವನ್ನು ಮರೆಯುವಂತಿಲ್ಲ. ಏಕೆಂದರೆ ಇದರಲ್ಲಿ ನಿಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ ಆಂಟಿಆಕ್ಸಿಡೆಂಟ್ ಅಂಶಗಳು, ವಿಟಮಿನ್ ಸಿ, ವಿಟಮಿನ್ ಈ ಮತ್ತು ಪೊಟ್ಯಾಷಿಯಂ ಅಂಶದ ಪ್ರಮಾಣ ತುಂಬಾ ಹೆಚ್ಚಾಗಿ ಸಿಗುತ್ತದೆ. ಬಿಳಿರಕ್ತಕಣಗಳ ಸಂಖ್ಯೆಯನ್ನು ಹೆಚ್ಚು ಮಾಡುವಲ್ಲಿ ಸಹ ಇದು ಅದ್ಭುತವಾಗಿ ಕೆಲಸ ಮಾಡಬಲ್ಲದು.
ಸಿಟ್ರಸ್ ಹಣ್ಣುಗಳು
ಸಿಟ್ರಸ್ ಹಣ್ಣುಗಳಲ್ಲಿ ವಿಟಮಿನ್ ಸಿ ಅಂಶ ಹೇರಳವಾಗಿ ಕಂಡು ಬಂದಿರುವುದು ನಿಮಗೆ ಗೊತ್ತೇ ಇದೆ. ಕೊರೋನಾದ ಸಾಂಕ್ರಾಮಿಕ ಸಂದರ್ಭದಲ್ಲಿ ಇದರ ಅನುಭವ ಈಗಾಗಲೇ ನಿಮಗೆ ಆಗಿದೆ ಎಂದು ಹೇಳಬಹುದು. ಬರುವ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳ ವಿರುದ್ಧ ಮತ್ತು ಸೋಂಕುಗಳ ವಿರುದ್ಧ ಹೋರಾಡುವ ಗುಣವನ್ನು ಇದು ಪಡೆದುಕೊಂಡಿದೆ.
ಇದರ ಜೊತೆ ಬಿಳಿ ರಕ್ತ ಕಣಗಳ ಸಂಖ್ಯೆಯನ್ನು ಸಹ ಹೆಚ್ಚು ಮಾಡುತ್ತದೆ. ಕಿತ್ತಳೆ ಹಣ್ಣು, ಸೇಬು ಹಣ್ಣು, ಸ್ಟ್ರಾಬೆರಿ ಹಣ್ಣು, ನಿಂಬೆಹಣ್ಣು ಇತ್ಯಾದಿ ಹುಳಿ ಮತ್ತು ಸಿಹಿ ಮಿಶ್ರಣದ ಹಣ್ಣುಗಳು ಇದಕ್ಕೆ ಉತ್ತಮ ಉದಾಹರಣೆ. ನೀವು ನಿಮ್ಮ ಆಹಾರ ಪದ್ಧತಿಯಲ್ಲಿ ಇವುಗಳನ್ನು ತಪ್ಪದೆ ಸೇರಿಸಿ ಸೇವನೆ ಮಾಡಿ.