ಕರಿಬೇವಿನ ಎಲೆಗಳನ್ನು ತಲೆ ಕೂದಲಿನ ಎಣ್ಣೆ(Hair oil) ಮಾಡಲು, ಮಾಸ್ಕ್(Hair Mask) ಆಗಿಯೂ ಹಾಗೂ ಅಡುಗೆಯಲ್ಲಿ ಪರಿಮಳಕ್ಕಾಗಿ(Flavor) ಬಳಸಲಾಗುತ್ತದೆ. ಆದರೆ ಪ್ರತೀ ದಿನ ಹಸಿ ಕರಿಬೇವಿನ ಎಲೆಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಬಹಳ ಪ್ರಯೋಜನವಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ.
ಬ್ಯಾಕ್ಟೀರಿಯಾ(Bacteria) ಮತ್ತು ಹಾನಿಕಾರಕ ಫ್ರೀ ರಾಡಿಕಲ್ಗಳನ್ನು(Free Radicals) ನಿವಾರಿಸುತ್ತದೆ. ಹೆಚ್ಚಿನ ಕಾಯಿಲೆಗಳು ಸೋಂಕಿನಿAದ(Infection) ಉಂಟಾಗುತ್ತವೆ. ಪ್ರತಿಜೀವಕ ನಿರೋಧಕ ತಳಿಗಳ ಬೆಳವಣಿಗೆಯ ಸಮಯದಲ್ಲಿ, ಸೋಂಕುಗಳಿಗೆ ಪರ್ಯಾಯ ಪರಿಹಾರಗಳು ನಿರ್ಣಾಯಕವಾಗಿವೆ. ಕರಿಬೇವಿನ ಎಲೆಗಳಲ್ಲಿ ಕಾರ್ಬಜೋಲ್ ಆಲ್ಕಲಾಯ್ಡ್ಗಳು, ಉತ್ಕರ್ಷಣ ನಿರೋಧಕ, ಬ್ಯಾಕ್ಟೀರಿಯಾ ವಿರೋಧಿ, ಉರಿಯೂತದ(Inflammation) ಮತ್ತು ಕ್ಯಾನ್ಸರ್(Cancer) ವಿರೋಧಿ ಗುಣಲಕ್ಷಣಗಳು ಹೇರಳವಾಗಿದೆ. ಇದರ ಹೂವಿನ ಪರಿಮಳದಲ್ಲಿ ಲಿನೋಲೂಲ್ ಸಂಯುಕ್ತವು ಬ್ಯಾಕ್ಟೀರಿಯಾವನ್ನು ಕೊಲ್ಲುವ ಮತ್ತು ಜೀವಕೋಶ ಹಾನಿಕಾರಕ ಫ್ರೀ ರಾಡಿಕಲ್ಗಳನ್ನು ತೆಗೆದುಹಾಕುವ ಸಾಮರ್ಥ್ಯವನ್ನು ಹೊಂದಿದೆ.
ಆಯುರ್ವೇದದಲ್ಲಿ ಕರಿಬೇವಿನ ಎಲೆಗಳನ್ನು ಗಾಯಗಳನ್ನು ಗುಣಪಡಿಸಲು ಬಳಸಲಾಗುತ್ತದೆ. ಗಾಯದ ಜೊತೆಗೆ ಚರ್ಮ, ಸುಟ್ಟ ಗಾಯಗಳಿಗೆ ಉತ್ತಮ ಔಷಧವಾಗಿದೆ. ಕರಿಬೇವಿನ ಎಲೆಗಳಲ್ಲಿ ಆಲ್ಕಲಾಯ್ಡ್ ಅಂಶವಿದ್ದು ಇದು ಸಣ್ಣ ಹಾಗೂ ಸುಟ್ಟ ಗಾಯಗಳನ್ನು(Wound) ವೇಗವಾಗಿ ಗುಣಪಡಿಸಲು ಸಹಾಯ ಮಾಡುತ್ತದೆ. ಕರಿಬೇವಿನ ಎಲೆಗಳು ತುರಿಕೆ(Itching) ಅಥವಾ ಉರಿಯೂತದ ಚರ್ಮ(Skin) ಮತ್ತು ಮೊದಲ ಹಂತದ ಸುಟ್ಟಗಾಯಗಳನ್ನು ಸರಿಪಡಿಸುತ್ತದೆ.
ಕರಿಬೇವಿನಲ್ಲಿ ಕಾರ್ಬಜೋಲ್ ಆಲ್ಕಲಾಯ್ಡ್ಗಳು(Carbazole Alkaloid) ಹೇರಳವಾಗಿದ್ದು, ಇದು ತೂಕ ಹೆಚ್ಚಾಗುವುದನ್ನು(Weight Gain) ನಿಯಂತ್ರಿಸುತ್ತದೆ. ಅಲ್ಲದೆ ದೇಹದ ಕೊಲೆಸ್ಟಾçಲ್(Cholesterol) ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಮತೋಲಿತ ಆಹಾರ(Balanced Food) ಮತ್ತು ವ್ಯಾಯಾಮದ(Exercise) ಜೊತೆಗೆ ನಿಯಮಿತವಾಗಿ ಈ ಎಲೆಗಳನ್ನು ತಿನ್ನುವುದರಿಂದ ಹಾಗೂ ಪ್ರತೀ ದಿನ 10 ಕರಿಬೇವಿನ ಎಲೆಗಳನ್ನು ಸೇವಿಸುವುದರಿಂದ ತೂಕ ನಷ್ಟವನ್ನು(Weight Loss) ಬೇಗ ಕಡಿಮೆ ಮಾಡಿಕೊಳ್ಳಬಹುದು.
ಗ್ಲಿಬೆನ್ಕ್ಲಾಮೈಡ್(Glibenclamide) ಎಂಬ ಸಕ್ಕರೆ ಕಡಿಮೆ ಮಾಡುವ ಅಂಶ ಕರಿಬೇವಿನ ಎಲೆಗಳಲ್ಲಿ ಇದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಅಲ್ಲದೆ ಈ ಎಲೆಗಳಲ್ಲಿ ಮೇದೋಜ್ಜೀರಕ ಗ್ರಂಥಿಯನ್ನು ಉತ್ತೇಜಿಸುವ ಖನಿಜಗಳಿಂದ(Minerals) ಇದು ರಕ್ತದಲ್ಲಿನ ಗ್ಲೂಕೋಸ್(Blood Glucose) ಮಟ್ಟವನ್ನು ಕಡಿಮೆ ಮಾಡುತ್ತದೆ ಎನ್ನಲಾಗಿದೆ. ಕಬ್ಬಿಣ(Iron), ಸತು, ತಾಮ್ರವು ಹೇರಳವಾಗಿದೆ. ಹಾಗಾಗಿ ಪ್ರತೀ ದಿನ ಒಂದು ಮುಷ್ಟಿ ಹಸಿ ಕರಿಬೇವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಮಧುಮೇಹ(Diabetes) ನಿಯಂತ್ರಿಸಬಹುದು.
ಕರಿಬೇವಿನ ಎಲೆಗಳಲ್ಲಿ ಸೌಮ್ಯ ವಿರೇಚಕಗಳು ಇವೆ. ಇದನ್ನು ಹಾಗೆ ತಿನ್ನಬಹುದಾಗಿದ್ದು, ಕರುಳಿನ ಚಲನೆಯನ್ನು ಬೆಂಬಲಿಸುವ ಮತ್ತು ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸುವ ಮೂಲಕ ಭೇದಿ ಮತ್ತು ಅತಿಸಾರದಂತಹ ಜೀರ್ಣಕಾರಿ ಸಮಸ್ಯೆಗಳಿಗೆ ಉತ್ತಮ ಔಷಧವಾಗಿದೆ. ಮಲಬದ್ಧತೆಯಿಂದ(Constipation) ಬಳಲುತ್ತಿರುವವರು ಕರಿಬೇವಿನ ರಸ(Curry Leaves Juice) ಕುಡಿಯುವುದರಿಂದ ಹೊಟ್ಟೆ ನೋವು(Stomach Pain) ಕಡಿಮೆ ಮಾಡುತ್ತದೆ.
ಕೂದಲ ಬೆಳವಣಿಗೆಗೆ ಕರಿಬೇವು ಉತ್ತಮ ಮನೆಮದ್ದು. ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವುದಲ್ಲದೆ, ಅಕಾಲಿಕ ಬೂದುಬಣ್ಣವನ್ನು ತಡೆಯುತ್ತದೆ ಮತ್ತು ಹೊಟ್ಟನ್ನೂ(Dandruff) ಗುಣಪಡಿಸುತ್ತದೆ. ಕರಿಬೇವಿನ ಎಲೆಗಳು ಕೂದಲಿನ ಕಿರುಚೀಲಗಳನ್ನು ಉತ್ತೇಜಿಸುತ್ತದೆ. ಆರೋಗ್ಯಕರ ಕೂದಲ ಬೆಳವಣಿಗೆ(Hair Growth), ಕೂದಲು ಉದುರುವಿಕೆ(Hair Fall) ಮತ್ತು ಅಕಾಲಿಕ ಬೂದುಬಣ್ಣಕ್ಕೆ(White Hairs) ಉತ್ತಮ ಚಿಕಿತ್ಸೆ ನೀಡುತ್ತದೆ. ತಲೆಹೊಟ್ಟು ಸಾಮಾನ್ಯವಾಗಿ ಮಲಾಸೆಜಿಯಾ ಫರ್ಫರ್ ಫಂಗಲ್ ನೆತ್ತಿಯ ಸೋಂಕಿನಿAದ ಉಂಟಾಗುತ್ತದೆ. ಈ ಶಿಲೀಂಧ್ರವು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ ಮತ್ತು ನೆತ್ತಿಯನ್ನು ಫ್ಲಾಕಿ ಮಾಡುತ್ತದೆ. ಕರಿಬೇವಿನ ಎಲೆಗಳ ಸಾರಗಳು ಈ ಶಿಲೀಂಧ್ರದ ಕಡೆಗೆ ಆಂಟಿಫAಗಲ್(Anti Fungal) ಚಟುವಟಿಕೆಯನ್ನು ತೋರಿಸಿವೆ. ಅದಕ್ಕಾಗಿಯೇ ಇದನ್ನು ತಲೆಹೊಟ್ಟು ಚಿಕಿತ್ಸೆಗಾಗಿ ಬಳಸಬಹುದು.
ಕರಿಬೇವಿನ ಎಲೆಗಳಲ್ಲಿನ ಸುಗಂಧವು(Perfume) ಶಾಂತಗೊಳಿಸುವ ಸ್ವಭಾವವನ್ನು ಹೊಂದಿವೆ. ಹಸಿ ಎಲೆಗಳನ್ನು ಸೇವಿಸುವುದರಿಂದ ಒತ್ತಡವನ್ನು(Stress) ನಿವಾರಿಸಲು ಸಹಾಯ ಮಾಡುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಈ ಎಲೆಗಳಿಂದ ಮಾಡಿದ ತೈಲವು ಆತಂಕ(Anxiety) ಮತ್ತು ಖಿನ್ನತೆಯ(Depression) ಚಿಕಿತ್ಸೆಯಲ್ಲಿ ಉಪಯುಕ್ತ ಸಾಧನವಾಗಿದೆ.
ಆಹಾರದಲ್ಲಿ ಕರಿಬೇವಿನ ಎಲೆಗಳನ್ನು ಸೇರಿಸುವುದರಿಂದ ಬಹಳ ಲಾಭವಿದೆ. ಇದು ನಮ್ಮ ನೆನಪಿನ ಶಕ್ತಿಯನ್ನು(Memory Power) ತೀಕ್ಷ÷್ಣಗೊಳಿಸುತ್ತದೆ. ಆಹಾರದಲ್ಲಿ ಸೇವಿಸುವುದರಿಂದ ನಮ್ಮ ನೆನಪಿನ ಶಕ್ತಿ ಕಡಿಮೆ ಆಗುವುದನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.