ಕರಿಬೇವಿನ ಎಲೆಗಳನ್ನು ದಿನನಿತ್ಯದ ಆಹಾರದಲ್ಲಿ ಸೇರಿಸುವುದರಿಂದ ದೇಹದಲ್ಲಿನ ಅನೇಕ ರೋಗಗಳನ್ನು ಗುಣಪಡಿಸಬಹುದು. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಕರಿಬೇವಿನ ಸೊಪ್ಪಿನಲ್ಲಿ ಔಷಧೀಯ ಗುಣಗಳೂ ಇವೆ. ಇದು ಮನುಷ್ಯನ ಆರೋಗ್ಯವನ್ನು ಕಾಪಾಡುವ ವಿಶೇಷವಾದ ನೈಸರ್ಗಿಕ ಆಹಾರ ಉತ್ಪನ್ನವಾಗಿದೆ. ಅಲ್ಲದೇ ಅಡುಗೆಯಲ್ಲಿ ತನ್ನದೇ ಆದಂತಹ ಘಮ ಘಮ ಪರಿಮಳ ಕರಿಬೇವು ಹೊಂದಿದೆ.
ಅಲ್ಲದೇ ಇಂದಿನ ಆರೋಗ್ಯದ ವಿಚಾರದಲ್ಲಿ ಕರಿಬೇವಿನ ಎಲೆಗಳು ಎಷ್ಟೊಂದು ಪ್ರಾಮುಖ್ಯತೆಗಳನ್ನು ಹೊಂದಿವೆ ಎಂದು ತಿಳಿದುಕೊಳ್ಳೋಣ. ಜೊತೆಗೆ ಇದರಿಂದ ನಿಮ್ಮ ನಿತ್ಯದ ಆಹಾರದಲ್ಲಿ ಕರಿಬೇವನ್ನು ಹೆಚ್ಚು ಹೆಚ್ಚಾಗಿ ಉಪಯೋಗಿಸಿಕೊಳ್ಳುವುದು ಅಭ್ಯಾಸ ಮಾಡಿಕೊಳ್ಳಿ.
ಕರಿಬೇವಿನ ಎಲೆಯಲ್ಲಿರುವ ಟ್ಯಾನಿನ್ಗಳು, ಕಾರ್ಬಜೋಲ್ ಆಲ್ಕಲಾಯ್ಡ್ಗಳು ಯಕೃತ್ತನ್ನು (ಲಿವರ್) ಹೆಪಟೈಟಿಸ್ ಮತ್ತು ಸಿರೋಸಿಸ್ನಂತ ಕಾಯಿಲೆಗಳಿಂದ ರಕ್ಷಿಸುತ್ತದೆ. ಚರ್ಮದ ಆರೈಕೆಯಲ್ಲಿ ಕರಿಬೇವಿನ ಎಲೆಗಳು ತುಂಬಾ ಉಪಕಾರಿಯಾಗಿವೆ ಎನ್ನಬಹುದು. ಸುಟ್ಟಗಾಯಗಳು, ಕಡಿತ ಮತ್ತು ತುರಿಕೆ ಚರ್ಮವನ್ನು ಕಡಿಮೆ ಮಾಡಲು ಕರಿಬೇವಿನ ಎಲೆಗಳ ರಸ ಸಹಾಯ ಮಾಡುತ್ತದೆ.
ಸಕ್ಕರೆ ಕಾಯಿಲೆ ಇರುವ ವ್ಯಕ್ತಿಗಳು ದಿನ ಹಸಿರಾಗಿರುವ ಕರಿಬೇವಿನ ಎಲೆಗಳನ್ನು ತಿಂದರೆ ರಕ್ತದಲ್ಲಿ ಸಕ್ಕರೆ ಅಂಶವನ್ನು ಕಡಿಮೆ ಮಾಡಬಹುದು.
ಅಧಿಕ ದೇಹದ ತೂಕ ಹೊಂದಿರುವವರು ನಿತ್ಯ 4 ಕರಿಬೇವಿನ ಎಲೆಗಳ ಸೇವನೆಯಿಂದ ಸ್ವಲ್ಪ ಮಟ್ಟಿಗೆ ತೂಕ ಕಡಿಮೆ ಮಾಡಿಕೊಳ್ಳಬಹುದು. ಈ ಎಲೆಗಳಲ್ಲಿರುವ ಲುಟೀನ್ ಎಂಬ ಆ್ಯಂಟಿಆ್ಯಕ್ಸಿಡೆಂಟ್ ಆರೋಗ್ಯಕ್ಕೆ ಹೆಚ್ಚು ಹೆಚ್ಚು ಉಪಕಾರಿಯಾಗಿದೆ.
ಕರಿಬೇವನ್ನು ನಮ್ಮ ಆಹಾರದಲ್ಲಿ ಪ್ರತಿದಿನ ಬಳಸುವುದರಿಂದ ಇಳಿ ವಯಸ್ಸಿನಲ್ಲಿ ಬರುವ ಕಣ್ಣಿನ ಪೊರೆಗಳಂತ ಸಮಸ್ಯೆಗಳನ್ನು ತಪ್ಪಿಸಬಹುದು. ಇದನ್ನು ಈಗಿನಿಂದಲೇ ರೂಡಿಸಿಕೊಂಡರೆ ಮುಂದೆ ನಮಗೆ ಅನುಕೂಲ ಆಗುತ್ತದೆ.
ಕಿರಿಯರಿಂದ ಹಿರಿಯರವರೆಗೆ ಅಜೀರ್ಣ ಸಮಸ್ಯೆ ಕಾಡುತ್ತಿರುತ್ತದೆ. ಹೀಗಾಗಿ ಕರಿಬೇವಿನ ಎಲೆಯಲ್ಲಿರುವ ನಾರಿನಾಂಶವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ದೇಹದಲ್ಲಿ ಅಜೀರ್ಣ ಸಮಸ್ಯೆ ಕಾಡುತ್ತಿದ್ದಾಗ ಒಂದು ಲೋಟ ಮಜ್ಜಿಗೆಗೆ ಚಿಟಿಕೆ ಇಂಗು, ಕರಿಬೇವು ಹಾಗೂ ಸೋಂಪು ಸೇರಿಸಿ ಕುಡಿದರೆ ಅಜೀರ್ಣ ಸಮಸ್ಯೆಯು ಜೀರ್ಣವಾಗುವುದು ಖಚಿತ.
ಕರಿಬೇವಿನ ಎಲೆಯಲ್ಲಿ ಆಲ್ಕಲಾಯ್ಡ್ ಅಂಶ ಇರುತ್ತದೆ. ಇದು ಗಾಯಗಳನ್ನು ಗುಣಪಡಿಸುವ ಗುಣ ಹೊಂದಿದೆ. ನಂಜು ನಿರೋಧಕ ಗುಣವನ್ನು ಹೊಂದಿರುವ ಈ ಎಲೆಗಳು ಇತರೆ ಔಷಧೀಯ ಗಿಡಮೂಲಿಕೆಯೊಂದಿಗೆ ಕರಿಬೇವನ್ನು ಬೆರೆಸಿ ಪೇಸ್ಟ್ ತಯಾರಿಸಬಹುದು.
ಕರಿಬೇವಿನ ಎಲೆಗಳನ್ನು ಸೇವಿಸುವುದರಿಂದ ನೆನಪಿನ ಶಕ್ತಿ ಹೆಚ್ಚಿಗೆ ಮಾಡಬಹುದು. ಮೆದುಳಿಗೆ ಬೇಕಾದ ಪೋಷಕಾಂಶವನ್ನು ಈ ಎಲೆಗಳು ನೀಡುತ್ತದೆ. ಮೆದುಳನ್ನು ಹೆಚ್ಚು ಜಾಗೃತದಲ್ಲಿಡುತ್ತದೆ.
ಕರಿಬೇವಿನಲ್ಲಿನ ಔಷಧ ಗುಣಗಳು ನರಮಂಡಲ, ಹೃದಯ, ಮೆದುಳು ಮತ್ತು ಮೂತ್ರಕೋಶಗಳ ಆರೋಗ್ಯ ಕಾಪಾಡುತ್ತವೆ. ಕರಿ ಬೇವಿನ ಎಲೆಗಳನ್ನು ಚನ್ನಾಗಿ ಬಿಸಿಲಿನಲ್ಲಿ ಒಣಗಿಸಿ, ನಂತರ ಅದನ್ನು ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಕುದಿಸಿ, ಆ ಎಣ್ಣೆಯನ್ನು ಕೂದಲಿಗೆ ನಿಯಮಿತವಾಗಿ ಹಚ್ಚುವುದರಿಂದ ಕೂದಲು ಉದುರುವುದು, ತಲೆ ಹೊಟ್ಟು ಹಾಗೂ ಒಣ ಕೂದಲಿನ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ.