ಖರ್ಜೂರ ಅತ್ಯುತ್ತಮ ಆಹಾರವೇ ಆದರೂ ಇದಕ್ಕೆ ಸುಪರ್ ಫುಡ್ ಎಂಬ ಪಟ್ಟವನ್ನು ನೀಡಲು ಕೊಂಚ ಹಿಂದೇಟು ಹಾಕಬೇಕಾಗುತ್ತದೆ. ಆದರೆ ಸುಪರ್ ಫುಡ್ ಆಗಲಿಕ್ಕೆ ನಗಣ್ಯವಾದ ಅಂಶಗಳಿಂದ ಈ ಸ್ಥಾನ ಕಳೆದುಕೊಂಡಿದೆ. ಖರ್ಜೂರದ ಸೇವನೆಯಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಈ ಪ್ರಯೋಜನಗಳನ್ನು ಅರಿತರೆ ಖರ್ಜೂರ ನಮ್ಮ ನಿತ್ಯದ ಆಹಾರವಾಗುವುದರಲ್ಲಿ ಸಂಶಯವೇ ಇಲ್ಲ.
ಆದರೆ ಇದರಲ್ಲಿ ಸಕ್ಕರೆಯ ಪ್ರಮಾಣ ಅಧಿಕವಾಗಿರುವ ಕಾರಣ ಅತಿ ಹೆಚ್ಚು ಪ್ರಮಾಣದಲ್ಲಿ ಸೇವಿಸಬಾರದು, ಇದೇ ಈ ಆಹಾರಕ್ಕಿರುವ ಒಂದು ಋಣಾತ್ಮಕ ಅಂಶ. ಆ ಪ್ರಕಾರ, ನಿಯಮಿತ ಪ್ರಮಾಣದಲ್ಲಿ, ಅಂದರೆ ದಿನಕ್ಕೆ ಮೂರು ಖರ್ಜೂರಗಳನ್ನು ಸೇವಿಸತೊಡಗಿದರೆ ನಮ್ಮ ದೇಹದ ಇದರ ಪರಿಣಾಮಗಳು ಪ್ರಾರಂಭವಾಗಿರುವುದನ್ನು ಒಂದೇ ವಾರದಲ್ಲಿ ಕಾಣಬಹುದು.
ಮೂಳೆಯ ಆರೋಗ್ಯವನ್ನು ವೃದ್ದಿಸುತ್ತದೆ
ಆರೋಗ್ಯ ತಜ್ಞರ ಪ್ರಕಾರ, ಖರ್ಜೂರದಲ್ಲಿ ಬೋರಾನ್ ಅಂಶ ಹೆಚ್ಚಾಗಿರುತ್ತದೆ. ಇದೊಂದು ಖನಿಜವಾಗಿದ್ದು ನಮ್ಮ ಮೂಳೆಗಳನ್ನು ಆರೋಗ್ಯಕರವಾಗಿಸುತ್ತದೆ. ಅಲ್ಲದೇ ಒಣಗಿದ ಖರ್ಜೂರಗಳಲ್ಲಿ ಕಂಡುಬರುವ ರಂಜಕ, ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಮುಂತಾದ ಖನಿಜಗಳು ನಮ್ಮ ಎಲುಬುಗಳನ್ನು ಬಲಪಡಿಸುತ್ತವೆ ಮತ್ತು ಮೂಳೆಗಳಲ್ಲಿ ಗಾಳಿಗುಳ್ಳೆಗಳು ತುಂಬಿ ಶಿಥಿಲವಾಗುವ ಓಸ್ಟಿಯೊಪೊರೋಸಿಸ್ (osteoporosis) ನಂತಹ ರೋಗಗಳ ವಿರುದ್ಧ ಹೋರಾಡುತ್ತವೆ ಎಂದು ಮತ್ತೊಂದು ಅಧ್ಯಯನ ತಿಳಿಸಿದೆ.
ಜೀರ್ಣ ವ್ಯವಸ್ಥೆಯ ಆರೋಗ್ಯವನ್ನು ಉತ್ತಮಗೊಳಿಸುತ್ತದೆ
ಖರ್ಜೂರಗಳಲ್ಲಿ ಕರಗುವ ನಾರಿನಂಶ ಅಧಿಕವಾಗಿದೆ ಮತ್ತು ನಮ್ಮ ಜೀರ್ಣಾಂಗ ವ್ಯವಸ್ಥೆ ಸಮರ್ಪಕವಾಗಿರಲು ಕರಗುವ ಮತ್ತು ಕರಗದ ನಾರು ಅಗತ್ಯವಾಗಿ ಬೇಕಾಗಿದೆ. ಅಲ್ಲದೇ ನಾರಿನಂಶ ಇರುವ ಆಹಾರ ಸೇವನೆಯು ಮಲಬದ್ಧತೆಯನ್ನು ತಡೆಯುತ್ತದೆ ಮತ್ತು ನಿಯಮಿತವಾಗಿ ಕರುಳಿನ ಒಳಗೆ ಆಹಾರದ ಚಲನೆಯನ್ನು ಉತ್ತೇಜಿಸುತ್ತದೆ. ಬ್ರಿಟಿಷ್ ಜರ್ನಲ್ ಆಫ್ ನ್ಯೂಟ್ರಿಷನ್ ಎಂಬ ಮಾಧ್ಯಮದಲ್ಲಿ ಪ್ರಕಟವಾದ ಅಧ್ಯಯದ ಪ್ರಕಾರ, ಖರ್ಜೂರಗಳನ್ನು ನಿಯಮಿತವಾಗಿ ಸೇವಿಸುವ ಜನರು ಉತ್ತಮ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಹೊಂದಿರುವುದಕ್ಕಿಂತ ಇತರರಿಗಿಂತಲೂ ಹೆಚ್ಚಿನ ದಕ್ಷತೆಯಿಂದ ಕೆಲಸ ಮಾಡುತ್ತಾರೆ.
ಒತ್ತಡ ಮತ್ತು ಖಿನ್ನತೆಯ ವಿರುದ್ಧ ಹೋರಾಡಲು ನೆರವಾಗುತ್ತದೆ
ಖರ್ಜೂರಗಳಲ್ಲಿ ವಿಟಮಿನ್ ಬಿ 6 ಉತ್ತಮ ಪ್ರಮಾಣದಲ್ಲಿದೆ. ಇದು ನಿಮ್ಮ ಮೆದುಳಿನ ಆರೋಗ್ಯವನ್ನು ಸುಧಾರಿಸುವ ಸೆರೊಟೋನಿನ್ ಮತ್ತು ನಾರ್ಪಿನೆಫ್ರಿನ್ ಅನ್ನು ( serotonin and norepinephrine) ಎಂಬ ರಸದೂತಗಳನ್ನು ಉತ್ಪಾದಿಸಿ ದೇಹಕ್ಕೆ ಸಹಾಯ ಮಾಡುತ್ತದೆ ಎಂದು ಖಚಿತಪಡಿಸಲಾಗಿದೆ. ಸೆರೊಟೋನಿನ್ ನಿಮ್ಮ ಮನಸ್ಥಿತಿಯನ್ನು ನಿಯಂತ್ರಿಸುತ್ತದೆ, ಆದರೆ ನಾರ್ಪಿನೆಫ್ರಿನ್ ಒತ್ತಡವನ್ನು ನಿವಾರಿಸುತ್ತದೆ. ಇದಲ್ಲದೆ, ಕಡಿಮೆ ಮಟ್ಟದ ಬಿ 6 ಖಿನ್ನತೆಗೆ ಸಂಬಂಧಿಸಿದೆ ಎಂದು ಈ ಅಧ್ಯಯನವು ತೋರಿಸುತ್ತದೆ. ನಮ್ಮ ಆಹಾರದಲ್ಲಿ ಹೆಚ್ಚು ವಿಟಮಿನ್ ಬಿ 6 ಇರುವಂತೆ ನೋಡಿಕೊಳ್ಳುವ ಮೂಲಕ, ನಾವು ದೈಹಿಕವಾಗಿ ಮಾತ್ರವಲ್ಲ, ಮಾನಸಿಕ ಆರೋಗ್ಯವನ್ನೂ ಉತ್ತಮಗೊಳಿಸಲು ಸಾಧ್ಯ.
ಅವು ನಿಮ್ಮ ಪ್ರಮುಖ ಶಕ್ತಿವರ್ಧಕವಾಗಿವೆ
ಖರ್ಜೂರಗಳಲ್ಲಿ ಕರಗುವ ನಾರು, ಪೊಟ್ಯಾಸಿಯಮ್, ಮೆಗ್ನೀಸಿಯಮ್, ವಿಟಮಿನ್ ಮತ್ತು ಆಂಟಿಆಕ್ಸಿಡೆಂಟ್ಗಳು ಸಮೃದ್ಧವಾಗಿವೆ, ಇದೇ ಕಾರಣದಿಂದ ಉಪಾಹಾರಕ್ಕೆ ಖರ್ಜೂರಗಳು ಉತ್ತಮ ಆಯ್ಕೆಯಾಗಿವೆ. ಫ್ರುಕ್ಟೋಸ್ ಮತ್ತು ಗ್ಲೂಕೋಸ್ನಂತಹ ಸಕ್ಕರೆಗಳನ್ನು ನೀಡುವ ಮೂಲಕ ದೇಹಕ್ಕೆ ಅಗತ್ಯ ಶಕ್ತಿಯನ್ನು ನೀಡುತ್ತವೆ. ಅಲ್ಲದೇ, ಈ ಅಧ್ಯಯನದ ಪ್ರಕಾರ ಅವು ನಿಮ್ಮ ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲ, ಶ್ರಮದ ಕೆಲಸ ಅಥವಾ ಕ್ರೀಡೆಯಂತಹ ದೇಹವನ್ನು ದಣಿಸುವ ಯಾವುದೇ ವ್ಯಾಯಾಮ ಮಾಡಿದ ನಂತರ ಅದನ್ನು ತ್ವರಿತವಾಗಿ ಮರಳಿ ಪಡೆಯಲು ಖರ್ಜೂರಗಳು ನಿಮಗೆ ನೆರವಾಗುತ್ತವೆ.
ಇವು ಹೃದ್ರೋಗಗಳನ್ನು ತಡೆಗಟ್ಟುವ ಸಾಮರ್ಥ್ಯ ಪಡೆದಿವೆ
ಖರ್ಜೂರಗಳಲ್ಲಿ ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡುವ ಗುಣವಿದೆ ಉತ್ಕರ್ಷಣ ಶೀಲ ಒತ್ತಡ (oxidative stress) ವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ತಿಳಿಸುತ್ತವೆ. ಇವೆರಡೂ ಹೃದ್ರೋಗ ಮತ್ತು ಅಪಧಮನಿಕಾಠಿಣ್ಯದ (atherogenesis) ಅಪಾಯಕಾರಿ ಅಂಶಗಳಾಗಿವೆ. ಇದರ ಜೊತೆಗೇದೆ, ಅವು ಪೊಟ್ಯಾಸಿಯಮ್ ಅಂಶದ ಸಮೃದ್ಧ ಮೂಲವಾಗಿದ್ದು, ಇತರ ಅಧ್ಯಯನಗಳ ಪ್ರಕಾರ, ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಪಾರ್ಶ್ವವಾಯು ಎದುರಾಗುವ ಅಪಾಯದ ಸಾಧ್ಯತೆಯನ್ನು ಹಾಗೂ ಇದರ ಜೊತೆಗೇ ಹೃದಯ ಸಂಬಂಧಿತ ಇತರ ಕಾಯಿಲೆಗಳು ಆವರಿಸುವ ಸಾಧ್ಯತೆಯನ್ನೂ ಕಡಿಮೆ ಮಾಡುತ್ತದೆ.
ಕರುಳಿನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತಾರೆ
ಖರ್ಜೂರಗಳಲ್ಲಿ ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಮತ್ತು ಕರುಳನ್ನು ಹಾನಿಕಾರಕ ಬ್ಯಾಕ್ಟೀರಿಯಾಗಳಿಂದ ರಕ್ಷಿಸುವ ಗುಣಗಳಿವೆ. ಇದರಿಂದಾಗಿ ಅದು ಕರುಳುಗಳಿಗೆ ಎದುರಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ. ಆಹಾರ ಮತ್ತು ಪೌಷ್ಠಿಕ ವಿಜ್ಞಾನ ವಿಭಾಗವು ನಡೆಸಿದ ಅಧ್ಯಯನದ ಪ್ರಕಾರ ಖರ್ಜೂರಗಳನ್ನು ನಿಯಮಿತವಾಗಿ ಸೇವಿಸುವ ಜನರ ಕರುಳುಗಳಲ್ಲಿ ಕ್ಯಾನ್ಸರ್ ಕೋಶಗಳ ಬೆಳವಣಿಗೆಯಿಂದ ರಕ್ಷಿಸುವ ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಎಂದು ಕಂಡುಕೊಂಡಿದೆ.
ಅಲರ್ಜಿಯ ಲಕ್ಷಣಗಳನ್ನು ನಿವಾರಿಸುತ್ತವೆ
ಕಾಲೋಚಿತ ಅಲರ್ಜಿಕ್ ರ್ಹೈನಿಟಸ್ ತೊಂದರೆ ಅಮೇರಿಕಾದ ಸುಮಾರು 30 ದಶಲಕ್ಷಕ್ಕೂ ಹೆಚ್ಚು ಜನರ ಮೇಲೆ ಪರಿಣಾಮ ಬೀರುತ್ತದೆ, ಆದರೆ ಅದೃಷ್ಟವಶಾತ್, ಖರ್ಜೂರಗಳು ಇದರ ಮೇಲೆ ಧನಾತ್ಮಕ ಪರಿಣಾಮ ಬೀರುತ್ತವೆ. SAR ರೋಗಿಗಳಲ್ಲಿ ಉರಿಯೂತದ ಹಲವಾರು ಲಕ್ಷಣಗಳನ್ನು ಕಡಿಮೆ ಮಾಡಲು ಖರ್ಜೂರವು ಪರಿಣಾಮಕಾರಿಯಾಗಿದೆ ಎಂದು ಮತ್ತೊಂದು ಅಧ್ಯಯನವು ಪ್ರಕಟಿಸಿದೆ.
ಖರ್ಜೂರಗಳು ತೂಕ ಇಳಿಕೆಗೆ ಸಹಾಯ ಮಾಡುತ್ತವೆ
ಖರ್ಜೂರಗಳು ತೂಕ ನಷ್ಟಕ್ಕೆ ಸಹಾ ಸಹಾಯ ಮಾಡುತ್ತದೆ. ಹೌದು, ಅವುಗಳಲ್ಲಿ ಕರಗುವ ನಾರಿನಂಶವಿದೆ, ಆದರೆ ಈ ನಾರಿನಂಶ ನಿಮಗೆ ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವ ಭಾವನೆ ಮೂಡಿಸುತ್ತವೆ ಹಾಗೂ ಅನತ್ಯ ಆಹಾರ ಸೇವನೆಯಿಂದ ತಡೆಯುತ್ತದೆ. ಅಲ್ಲದೇ ಹೆಚ್ಚಿನ ಸಕ್ಕರೆಯ ಅಹಾರ ಸೇವನೆಯಿಂದ ರಕ್ತದಲ್ಲಿ ಸಕ್ಕರೆಯ ಮಟ್ಟ ಥಟ್ಟನೇ ಏರದಂತೆ ತಡೆಯುತ್ತವೆ. ಖರ್ಜೂರಗಳಲ್ಲಿ ಆಂಥೋಸಯಾನಿನ್ ಗಳು, ಫೀನಾಲಿಕ್ಸ್ ಮತ್ತು ಕ್ಯಾರೊಟಿನಾಯ್ಡ್ ಗಳಂತಹ ಉತ್ಕರ್ಷಣ ನಿರೋಧಕಗಳು ಇರುತ್ತವೆ. ಅವು ನಮ್ಮ ದೇಹದಿಂದ ವಿಷವನ್ನು ಹೊರಹಾಕುತ್ತವೆ, ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತವೆ ಮತ್ತು ಚಯಾಪಚಯಕ್ರಿಯೆಯನ್ನ್ನೂ ಹೆಚ್ಚಿಸುತ್ತವೆ, ಇದು ತೂಕ ಇಳಿಕೆಗೆ ಪರೋಕ್ಷವಾಗಿ ನೆರವಾಗುತ್ತವೆ. ಕಾರಣವಾಗುತ್ತದೆ.