ಪಾಕಿಸ್ತಾನ: ದೇಶದಲ್ಲಿ ಲ್ಯಾಮಿನೇಷನ್ ಪೇಪರ್ ಕೊರತೆಯಿಂದಾಗಿ ಪಾಕಿಸ್ತಾನಿ ನಾಗರಿಕರು ತಮ್ಮ ಪಾಸ್ಪೋರ್ಟ್ಗಳನ್ನು ಪಡೆಯಲು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ದಿ ಎಕ್ಸ್ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ. ಲ್ಯಾಮಿನೇಶನ್ ಪೇಪರ್ ಪಾಸ್ಪೋರ್ಟ್ಗಳಲ್ಲಿ ಅತ್ಯಗತ್ಯ ಅಂಶವಾಗಿದೆ ಮತ್ತು ಇದನ್ನು ಸಾಮಾನ್ಯವಾಗಿ ಫ್ರಾನ್ಸ್ನಿಂದ ಆಮದು ಮಾಡಿಕೊಳ್ಳಲಾಗುತ್ತದೆ ಎಂದು ಪಾಕಿಸ್ತಾನದ ಡೈರೆಕ್ಟರೇಟ್ ಜನರಲ್ ಆಫ್ ಇಮಿಗ್ರೇಶನ್ ಮತ್ತು ಪಾಸ್ಪೋರ್ಟ್ಗಳನ್ನು (ಡಿಜಿಐ & ಪಿ) ಉಲ್ಲೇಖಿಸಿ ವರದಿ ಹೇಳಿದೆ.
ಕಾಗದದ ಕೊರತೆಯು ರಾಷ್ಟ್ರವ್ಯಾಪಿ ಪಾಸ್ಪೋರ್ಟ್ಗಳ ಕೊರತೆಗೆ ಕಾರಣವಾಗಿದೆ. ವಿದೇಶದಲ್ಲಿ ಓದಲು ಬಯಸಿರುವ ಅಥವಾ ಆರ್ಥಿಕ ಸಂಕಷ್ಟದಲ್ಲಿರುವ ದೇಶದಿಂದ ಹೊರಹೋಗುವ ಅವರ ಆಶಯಗಳು ಭಗ್ನಗೊಂಡಿರುವ ಕಾರಣ ದೇಶಾದ್ಯಂತ ಜನರು ಕಂಗಾಲಾಗಿದ್ದಾರೆ. ಯುಕೆ ಅಥವಾ ಇಟಲಿಯಂತಹ ಸ್ಥಳಗಳಲ್ಲಿನ ವಿಶ್ವವಿದ್ಯಾಲಯಗಳಿಗೆ ದಾಖಲಾದ ಹಲವಾರು ವಿದ್ಯಾರ್ಥಿಗಳು ತಮ್ಮ ಪಾಸ್ ಪೋರ್ಟ್ಗಳನ್ನು ಸಮಯಕ್ಕೆ ಸರಿಯಾಗಿ ಪಡೆಯದ ಕಾರಣ ಅವರು ಅಲ್ಲಿಗೆ ಹೋಗಲು ಸಾಧ್ಯವಾಗಿಲ್ಲ. ಸರ್ಕಾರಿ ಇಲಾಖೆಯ ಅಸಮರ್ಥತೆಗೆ ಸಾಮಾನ್ಯ ನಾಗರೀಕರು ಬೆಲೆ ತೆರಬೇಕಾಗಿದೆ ಎಂದು ಅವರು ಎಕ್ಸ್ಪ್ರೆಸ್ ಟ್ರಿಬ್ಯೂನ್ಗೆ ತಿಳಿಸಿದರು.
ಆಂತರಿಕ ಸಚಿವಾಲಯದ ಮಾಧ್ಯಮದ ಮಹಾನಿರ್ದೇಶಕ ಖಾದಿರ್ ಯಾರ್ ತಿವಾನಾ, ಪಾಕಿಸ್ತಾನ ಸರ್ಕಾರವು ಬಿಕ್ಕಟ್ಟನ್ನು ಪರಿಹರಿಸಲು ಕೆಲಸ ಮಾಡುತ್ತಿದೆ ಮತ್ತು ಶೀಘ್ರದಲ್ಲೇ ಪರಿಸ್ಥಿತಿಯನ್ನು ಹತೋಟಿಗೆ ತರಲಾಗುತ್ತದೆ ಎಂದು ಹೇಳಿದ್ದಾರೆ. ಆದರೆ, ತಮ್ಮ ಪ್ರಯಾಣದ ದಾಖಲೆಗಳನ್ನು ಪಡೆಯಲು ಸಾಧ್ಯವಾಗದ ಕಾರಣ ಜನರು ಈ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ನನ್ನ ಪಾಸ್ಪೋರ್ಟ್ ತೆಗೆದುಕೊಳ್ಳಲು ಸಿದ್ಧವಾಗಿದೆ ಎಂದು ಅಕ್ಟೋಬರ್ನಲ್ಲಿ ಡಿಜಿಐ ಮತ್ತು ಪಿಯಿಂದ ಸಂದೇಶವನ್ನು ಸ್ವೀಕರಿಸಿದ್ದೇನೆ ಆದರೆ ಸಂಬಂಧಪಟ್ಟ ಕಚೇರಿಯನ್ನು ತಲುಪಿದಾಗ ಸಿಬ್ಬಂದಿ ತನ್ನ ಪಾಸ್ಪೋರ್ಟ್ ಇನ್ನೂ ಬಂದಿಲ್ಲ ಎಂದು ಹೇಳಿದರು ಎಂದು ಪಾಕಿಸ್ತಾನದ ವ್ಯಕ್ತಿಯೊಬ್ಬರು ಸ್ಥಳೀಯ ಪತ್ರಿಕೆಗೆ ತಿಳಿಸಿದ್ದಾರೆ.