ಬಳ್ಳಾರಿ: ಗಾಲಿ ಜನಾರ್ದನ ರೆಡ್ಡಿ (Janardhan Reddy) ಹೊಸ ಪಕ್ಷ ಸಂಘಟನೆಗೆ ಒಂದಲ್ಲಾ ಒಂದು ಸರ್ಕಸ್ ಮಾಡುತ್ತಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ರೆಡ್ಡಿ ಪುತ್ರಿ ಬ್ರಾಹ್ಮಣಿ ಸೀರೆ ಹಂಚಿಕೆ ಮಾಡಿದ್ರೆ, ಈಗ ರೆಡ್ಡಿ ಅವರು ಪಕ್ಷ ಸಂಘಟನೆ ಮಾಡುವವರಿಗೆ ಬೈಕ್ ನೀಡಲಿದ್ದಾರೆ.
ಮುಂಬರುವ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಕೆಆರ್ ಪಿ (KRP Party) ಪಕ್ಷದ ಸಂಘಟನೆಗೆ ಗಂಗಾವತಿ ಮತ್ತು ಬಳ್ಳಾರಿ ನಗರದದ ಪ್ರಮುಖ ಮುಖಂಡರು ಓಡಾಡಲು 100 ಟಿವಿಎಸ್ ಸ್ಪೋರ್ಟ್ಸ್ ಬೈಕ್ (Sports Bike) ಗಳನ್ನು ಪಕ್ಷದ ಹೆಸರು ಮತ್ತು ಚಿನ್ಹೆಗಳನ್ನು ಬಳಸಿ ವಿಶೇಷವಾಗಿ ಸಿದ್ಧಪಡಿಸಲಾಗಿದೆ.
ಈಗಾಗಲೇ ತಲಾ ಒಂದೊಂದು ಕ್ಷೇತ್ರದಲ್ಲಿ ಐದು ಬೈಕ್ ಗಳು ಬಂದಿವೆ. ಪ್ರಮುಖ ಕಾರ್ಯಕರ್ತರು ಕ್ಷೇತ್ರದೆಲ್ಲೆಡೆ ಪಕ್ಷದ ಪ್ರಮುಖ ಸಭೆ, ಸಮಾರಂಭಗಳನ್ನು ಹಮ್ಮಿಕೊಳ್ಳಲು ಸಂಘಟನಾತ್ಮಕ ಕಾರ್ಯಗಳನ್ನು ಇವುಗಳನ್ನು ಬಳಸಲಿದ್ದಾರೆ.
ಈ ಹಿಂದೆ ಬಿಜೆಪಿಯಲ್ಲಿದ್ದಾಗಲೂ ರೆಡ್ಡಿ ಬಳಗ ಪ್ರಚಾರದಲ್ಲಿ ವಿಶೇಷವಾಗಿ ನಡೆಯುತ್ತಿತ್ತು. ಈಗಲೂ ಅದೇ ರೀತಿ ಕೆಅರ್ ಪಿ ಸಹ. ಹೊಟೇಲ್ ಗಳಲ್ಲಿ, ವಾರ್ಡ್‍ಗಳಲ್ಲಿ ಬೃಹತ್ ಸಭೆಗಳನ್ನು ನಡೆಸಿ ಅದರಲ್ಲೂ ಮಹಿಳಾ ಮತದಾರರನ್ನು ಹೆಚ್ಚಿನ ಮಟ್ಟದಲ್ಲಿ ಗಮನ ಸೆಳೆಯತೊಡಗಿದ್ದಾರೆ. ಇದು ಕ್ಷೇತ್ರದ ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಪಕ್ಷಗಳಿಗೆ ಧಕ್ಕೆ ತರುವ ನಿಟ್ಟಿನಲ್ಲಿ ನಡೆದಿದೆ. ಇದಲ್ಲದೆ ಮಹಿಳೆಯರಿಗೆ ನೀಡುತ್ತಿರುವ ಇಳಕಲ್ ಸೀರೆಗಳು ಸಹ ಮತದಾರರ ಮೇಲೆ ಹೆಚ್ಚಿನ ಪರಿಣಾಮ ಬೀರತೊಡಗಿವೆ.