ಧಾರವಾಡ ;- ಹು-ಧಾ ಪಾಲಿಕೆ ಮೇಯರ್ ಉಪ ಮೇಯರ್ ಚುನಾವಣೆ ಹಿನ್ನೆಲೆ, ಧಾರವಾಡ ಪಾಲಿಕೆ ಕಚೇರಿಗೆ ಪಾಲಿಕೆ ಸದಸ್ಯರು ಆಗಮಿಸಿದ್ದಾರೆ. ರೆಸಾರ್ಟ್ ನಿಂದ ಧಾರವಾಡಕ್ಕೆ ಪಾಲಿಕೆ ಸದಸ್ಯರು ಮತ್ತು ಬಿಜೆಪಿ ಸದಸ್ಯರು ಆಗಮಿಸಿದ್ದರು. ಇದೇ ವೇಳೆ ಪಾಲಿಕೆ ಸದಸ್ಯರೊಂದಿಗೆ ಬಿಜೆಪಿ ಎಂಎಲ್ ಸಿ ಪ್ರದೀಪ್ ಶೆಟ್ಟರ್ ಆಗಮಿಸಿದ್ದರು.
ಇನ್ನೂ ಮೇಯರ್ ಉಪ ಮೇಯರ್ ಚುನಾವಣೆ ಹಿನ್ನೆಲೆ ಪೊಲೀಸ್ ಭದ್ರತೆಯೊಂದಿಗೆ ಪಾಲಿಕೆ ಸದಸ್ಯರು ಆಗಮಿಸಿದ್ದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಶಾಸಕರಾದ ಮಹೇಶ ಟೆಂಗಿನಕಾಯಿ ಹಾಗೂ ಶಾಸಕ ಅರವಿಂದ ಬೆಲ್ಲದ್ ನೇತೃತ್ವದಲ್ಲಿ ಸದಸ್ಯರು ಖಾಸಗಿ ಬಸ್ ಮೂಲಕ ಪಾಲಿಕೆಗೆ ಆಗಮಿಸಿದ್ದಾರೆ.