ಬೆಂಗಳೂರು: ಎಸ್ ಎಸ್ ಎಲ್ ಸಿ ಪರೀಕ್ಷೆ ಸಮೀಪಿಸುತ್ತಿದ್ದು, ಈ ನಡುವಲ್ಲೇ ರಾಜ್ಯ ವಿಧಾನಸಭಾ ಚುನಾವಣೆ ಕೂಡ ಹತ್ತಿರ ಬರುತ್ತಿರುವುದು ಪರೀಕ್ಷೆಯ ಮೇಲೆ ಬೀರುವ ಸಾಧ್ಯತೆಗಳ ಕುರಿತು ಆತಂಕಗಳು ಎದುರಾಗಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸ್ಪಷ್ಟನೆ ನೀಡಿರುವ ಶಿಕ್ಷಣ ಇಲಾಖೆಯು ಪರೀಕ್ಷೆಗೆ ಚುನಾವಣೆ ಅಡ್ಡಿಯಾಗುವುದಿಲ್ಲ ಎಂದು ಹೇಳಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಮಾರ್ಚ್ 31 ರಿಂದ ಪ್ರಾರಂಭವಾಗಿ ಏಪ್ರಿಲ್ 15 ರವರೆಗೆ ನಡೆಯಲಿವೆ. ಚುನಾವಣೆಯ ದಿನಾಂಕಗಳು ಇನ್ನೂ ಪ್ರಕಟವಾಗದಿದ್ದರೂ, ಮೇ 2023 ರ ಮೊದಲು ನಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಚುನಾವಣೆ ವೇಳೆ ಶಿಕ್ಷಕರನ್ನು ಕರ್ತವ್ಯಕ್ಕೆ ನಿಯೋಜಿಸಲಾಗುತ್ತದೆ. ಇಧರಿಂದ ಪರೀಕ್ಷೆಗಳಿಗೆ ಸಮಸ್ಯೆಗಳಾಗುತ್ತವೆ ಎಂಬ ಆತಂಕಗಳು ಶುರುವಾಗಿದೆ.ಪರೀಕ್ಷೆ ಹಾಗೂ ಚುನಾವಣೆ ಎರಡನ್ನೂ ನಿಭಾಯಿಸಲು ಇಲಾಖೆಯಲ್ಲಿ ಶಿಕ್ಷಕರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಸಮಸ್ಯೆಗಳು ಎದುರಾಗುವುದಿಲ್ಲ. ಪರೀಕ್ಷೆಗಳು ಮತ್ತು ಚುನಾವಣೆಗಳು ಒಮ್ಮೆಲೆ ಬಂದರೂ ನಾವು ಎರಡನ್ನೂ ನಿರ್ವಹಿಸಲು ಸಾಧ್ಯವಿದೆ ಎಂದು ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆಯು ಹೇಳಿದೆ.