ವಿದ್ಯುತ್ ತಂತಿಗಳು ಒಂದಕ್ಕೊಂದು ಸ್ಪರ್ಶ ಮಾಡಿ ಅದರಿಂದ ಬಂದ ಬೆಂಕಿ ಕಿಡಿಯಿಂದ ಹುಲ್ಲಿನ ಬಣವೆ ಸುಟ್ಟು ಭಸ್ಮಾವಾಗಿರುವ ಘಟನೆ ತಾಲೂಕಿನ ವಡ್ಡರಹಳ್ಳಿ ಗ್ರಾಮದಲ್ಲಿ ಇಂದು ನಡೆದಿದೆ.
ಗ್ರಾಮದ ತಿಮ್ಮೆಗೌಡ ಎಂಬುವ ರೈತನಿಗೆ ಹುಲ್ಲಿನ ಬಣವೆ ಸೇರಿದ್ದು,ಬೆಂಕಿಯಿಂದ ಸುಮಾರು 70 ಸಾವಿರ ಬೆಲೆ ಬಾಳುವ ನಾಲ್ಕು ಲೋಡ್ ನಷ್ಟು ಮೇವು ಸುಟ್ಟು ಕರುಕಲಾಗಿದೆ.
ವಿದ್ಯುತ್ ಕಂಬದಲ್ಲಿ ಇರುವ ಎರಡು ವಿದ್ಯುತ್ ತಂತಿಗಳು ಒಂದಕ್ಕೊಂದು ಸ್ಪರ್ಶ ಮಾಡಿರುವುದರಿಂದ ಬೆಂಕಿ ಕಾಣಿಸಿಕೊಂಡಿದೆ.ಹತ್ತಿರದಲ್ಲಿ ಇದ್ದ ಹುಲ್ಲಿನ ಬಣವೆ ಮೇಲೆ ಬೆಂಕಿ ಕಿಡಿ ಬಿದ್ದ ಕಾರಣ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.
ಇನ್ನೂ ಬೇಸಿಗೆ ಕಾಲ ಆರಂಭವಾಗಿರುವುದರಿಂದ ಈ ತರಹ ಘಟನೆಗಳು ಜಾಸ್ತಿಯಾಗುತ್ತಿದೆ. ಕೂಡಲೇ ಅಗ್ನಿ ಶಾಮಕದಳದ ಸಿಬ್ಬಂದಿಯು ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ..