ಬೆಂಗಳೂರು ;- ಯಾವುದೇ ಕಾರಣಕ್ಕೂ ವಿದ್ಯುತ್ ದರ ಕಡಿಮೆ ಆಗಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ವಿದ್ಯುತ್ ದರ ಕಡಿಮೆ ಆಗಲ್ಲ. 2 ತಿಂಗಳ ಬಿಲ್ ಒಟ್ಟಿಗೆ ಬಂದಿದೆ. ಹೀಗಾಗಿ ದರ ಜಾಸ್ತಿಯಾಗಿದೆ ಎಂದರು.
ಮುಂದಿನ ತಿಂಗಳಿನಿಂದ ವಿದ್ಯುತ್ ಬಿಲ್ ಸರಿಯಾಗಿ ಬರುತ್ತದೆ. ಅಲ್ಲಿಯವರೆಗೆ ಕಾದು ನೋಡಿ ಎಂಬುದಾಗಿ ತಿಳಿಸಿದರು.
ಇದೇ ವೇಳೆ bವಿದ್ಯುತ್ ದರ ಏರಿಕೆ ಖಂಡಿಸಿ ಎಫ್ ಕೆ ಸಿಸಿಐ ಪ್ರತಿಭಟನೆ ವಿಚಾರವಾಗಿ ಮಾತನಾಡಿದಂತ ಸಿದ್ದರಾಮಯ್ಯ ಅವರು, ಎಫ್ ಕೆ ಸಿಸಿಐ ಜೊತೆಗೆ ಮಾತನಾಡಿ, ಚರ್ಚಿಸುವುದಾಗಿ ತಿಳಿಸಿದರು.
ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುವ ಸಂಬಂಧ ಅಕ್ಕಿ ಹೊಂದಾಣಿಕೆಯಲ್ಲಿ ಸರ್ಕಾರ ತೊಡಗಿದೆ. ರಾಜಯಚೂರಿನಲ್ಲಿ ಸೋನಾ ಮಸೂರಿ ಅಕ್ಕಿ ಇದೆ. ಪ್ರತಿ ಕೆಜಿಗೆ 55 ರೂಪಾಯಿ, ಎಫ್ ಸಿಐ ಪ್ರತಿ ಕೆಜಿಗೆ 36.60 ದರ ನಿಗದಿಯಲ್ಲಿ ಕೊಡಲು ಹೇಳಿತ್ತು. ಸೋನಾ ಮಸೂರಿ ಅಕ್ಕಿಯನ್ನು ಕೊಡಲಾಗುತ್ತಾ ಎಂದು ಹೇಳಿದರು.