ಬೆಂಗಳೂರು: ಈ ದುನಿಯಾ ದಿನೇದಿನೆ ಕಾಸ್ಟ್ಲಿ ಆಗ್ತಿದೆ. ಜನ ಸಾಮಾನ್ಯರಂತೂ ಬದುಕೋಕೆ ಆಗ್ತಿಲ್ಲ. ಏಪ್ರಿಲ್, ಮೇ ತಿಂಗಳು ಬಂದ್ರೆ ಸಾಕು ಟಣ್ ಅಂತ ಕರೆಂಟ್ ಬಿಲ್ ಏರಿಕೆ ಆಗೇ ಬಿಡುತ್ತೆ.ಕಳೆದ ವರ್ಷ ಮೂರು ಬಾರಿ ವಿದ್ಯುತ್ ದರ ಏರಿಕೆ ಮಾಡಿದ್ದ ಎಸ್ಕಾಂಗಳು ಈ ಬಾರಿಯೂ ವಿದ್ಯುತ್ ದರ ಪರಿಷ್ಕರಣೆ ಮಾಡೋಕೆ ಸಿದ್ದತೆ ನಡೆಸಿದೆ.ಈ ಸಂಬಂಧ ಬೆಸ್ಕಾಂ ಸೇರಿ ಇತರೆ ಕಂಪನನಿಗಳು ವಿದ್ಯುತ್ ದರ ಏರಿಸುವಂತೆ ಕೆಇಆರ್ಸಿ ಮುಂದೆ ಪ್ರಸ್ತಾಪ ಇಟ್ಟಿವೆ
ಗ್ಯಾರಂಟಿ ಭಾಗ್ಯಗಳನ್ನ ಕೊಟ್ಟ ಕಾಂಗ್ರೆಸ್ ಸರ್ಕಾರ ಜನರಿಗೆ ತೆರಿಗೆ ಹೊರೆ ಹಾಕಲು ಸಿದ್ದತೆ ಮಾಡಿಕೊಳ್ತಿದೆ. ಗ್ಯಾರಂಟಿ ಭಾಗ್ಯಗಳಿಗೆ ಆಗುವ ವೆಚ್ಚ ಸರಿದೂಗಿಸಲು ಬೆಲೆ ಏರಿಕೆ ಮಾಡೋಕೆ ಹೊರಟಿದೆ. ಪರಿಣಾಮ ಎನ್ನುವಂತೆ ವಿದ್ಯುತ್ ದರ ಏರಿಕೆಗೆ ಸನ್ನದ್ದವಾಗ್ತಿದೆ..
ಹೌದು..ಈಗಾಗ್ಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ.ದಿನ ನಿತ್ಯ ಉಪಯೋಗಿಸುವ ದವಸ ಧಾನ್ಯ ,ಪೆಟ್ರೋಲ್, ಡಿಸೇಲ್ ಗ್ಯಾಸ್ ,ಹಾಲು ಮೊಸರು ಗಗನಕ್ಕೇರಿದೆ.ಇದರ ನಡುವ ರಾಜ್ಯದ ಜನತೆಗೆ ಮತ್ತೆ ಕರೆಂಟ್ ಶಾಕ್ ಕಾದಿದ್ಯಾ ಎಂಬ ಬಗ್ಗೆ ಅನುಮಾನ ಮೂಡ್ತಿದೆ.ಏಕೆಂದರೆ ವಿದ್ಯುತ್ ದರ ಪರಿಷ್ಕರಣೆ ಮಾಡುವಂತೆ ಎಸ್ಕಾಂಗಳು ಕೆಇಆರ್ಸಿ ಮುಂದೆ ಪ್ರಸ್ತಾಪ ಇಟ್ಟಿವೆ. ಕಳೆದ ವರ್ಷ ಮೂರು ಬಾರಿ ವಿದ್ಯುತ್ ದರ ಪರಿಷ್ಕರಣೆ ಮಾಡಿದ್ದ ಕೆಇಆರ್ಸಿ ಇದೀಗ ಮತ್ತೆ ವಿದ್ಯುತ್ ದರ ಏರಿಕೆ ಮಾಡೋಕೆ ಸಿದ್ದತೆ ನಡೆಸಿದೆ.ಬೆಸ್ಕಾಂ ಸೇರಿ ಇತರೆ ವಿದ್ಯುತ್ ಸರಬರಾಜು ಕಂಪನಿಗಳು ಪ್ರತಿ ಯೂನಿಟ್ ಗೆ 49 ರಿಂದ 60 ಪೈಸೆಯವರಿಗೂ ವಿದ್ಯುತ್ ದರ ಏರಿಸುವಂತೆ ಬೇಡಿಕೆ ಇಟ್ಟಿವೆ. ಇನ್ನು ಈ ಬಾರಿ ಜನರಿಗೆ ಸಮಸ್ಯೆ ಆಗದಂತೆ ವಿದ್ಯುತ್ ದರ ಏರಿಕೆ ಮಾಡ್ತೇವೆ ಅಂತ ಇಂಧನ ಸಚಿವ ಕೆ ಜೆ ಜಾರ್ಜ್ ತಿಳಿಸಿದ್ದಾರೆ
ಒಟ್ನಲ್ಲಿ ಪ್ರಗತಿ ಹೊಂದಬೇಕಾದ ಜನ ಬೆಲೆ ಏರಿಕೆ ಯಿಂದ ಹಿಂದುಳಿಯುವಂತಾಗಿದೆ.ಇದೀಗ ಜನವರಿ ಆರಂಭದಲ್ಲೇ ಪ್ರತಿಯೂನಿಟ್ ಇಂತಿಷ್ಟು ವಿದ್ಯುತ್ ದರ ಹೆಚ್ಚಳ ಮಾಡಿ ಅಂತ ಎಸ್ಕಾಂಗಳು ಕೆಇಆರ್ಸಿ ಮುಂದೆ ಪ್ರಸ್ತಾಪ ಇಟ್ಟಿವೆ. ಆದ್ರೆ ಲೋಕಸಭಾ ಚುನಾವಣೆ ಇರುವ ಹಿನ್ನೆಲೆ ಸರ್ಕಾರ ಅಸ್ತು ಅನ್ನುತ್ತೊ ಅಥವಾ ತಡೆ ಹಿಡಿಯುತ್ತೊ ಅಂತ ಕಾದು ನೋಡ್ಬೇಕಿದೆ.