ಆನೇಕಲ್:- ಬೆಂಗಳೂರು ಹೊರವಲಯದ ತಮಿಳುನಾಡು ಗಡಿ ಗೋಪಸಂದ್ರದ ಬಳಿ ಬೆಳ್ಳಂಬೆಳಗ್ಗೆ ಒಂಟಿ ಸಲಗ ಪ್ರತ್ಯಕ್ಷವಾಗಿದೆ.
ರಾಜ್ಯದ ಗಡಿಗೆ ಹೊಂದಿಕೊಂಡಂತಿರುವ ಗೋಪಸಂದ್ರ ರಸ್ತೆ ಬದಿಯಲ್ಲಿಯೇ ಒಂಟಿ ಸಲಗ ಬೀಡುಬಿಟ್ಟಿದೆ. ಒಂಟಿ ಸಲಗ ದೃಶ್ಯಗಳು ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ.
ಡೆಂಕಣಿಕೋಟೆ ಕಾಡಿಗೆ ಹೊಂದಿಕೊಂಡಂತಿರುವ ಕಾಡು ಇದಾಗಿದ್ದು, ನೀರು ಕುಡಿಯಲು ಸಲಗ ಆಗಮಿಸಿದೆ. ಕಾಡಾನೆಯನ್ನು ಸಾರ್ವಜನಿಕರು ಕಾಡಿಗಟ್ಟಿದ್ದಾರೆ.
ಸತತ ಕಳೆದ ಒಂದು ತಿಂಗಳಿನಿಂದ ಕಾಡಾನೆಗಳು ನಾಡಿಗೆ ಬರುತ್ತಿದ್ದು, ಅರಣ್ಯಾದಿಕಾರಿಗಳಿಗೆ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ.