ಬೆಂಗಳೂರು: ಮತ್ತೆ ಜಾಹೀರಾತು ನೀಡಿದ ಕಾಂಗ್ರೆಸ್, ‘ಮೋದಿ ಸರ್ಕಾರಕ್ಕೆ ಕಟ್ಟುವ ಪ್ರತಿ 100 ರೂಪಾಯಿ ತೆರಿಗೆಯಲ್ಲಿ ಕರ್ನಾಟಕಕ್ಕೆ ಮರಳಿ ಸಿಗುವುದು 13 ರೂಪಾಯಿ ಮಾತ್ರ. ಈ ಅನ್ಯಾಯವನ್ನು ಎಲ್ಲಿಯವರೆಗೆ ಸಹಿಸಬೇಕು’ ಎಂದು ಉಲ್ಲೇಖಿಸಿದೆ. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಮತ್ತೆ ಜಾಹೀರಾತು ಸಮರಕ್ಕಿಳಿದ ಬಿಜೆಪಿ,
ಹೆಚ್ಚಿನೆಲ್ಲ ಪತ್ರಿಕೆಗಳಿಗೆ ಮತ್ತೊಂದು ಜಾಹೀರಾತು ನೀಡಿತು. ‘ಕಾಂಗ್ರೆಸ್ ಡೇಂಜರ್’ ಎಂಬ ಜಾಹೀರಾತಿನಲ್ಲಿ ಲವ್ ಜಿಹಾದ್, ಕುಕ್ಕರ್ ಬಾಂಬ್, ವಿಧಾನಸೌಧ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ ಸೇರಿದಂತೆ ಹಲವು ವಿಚಾರಗಳನ್ನು ಬಿಜೆಪಿ ಉಲ್ಲೇಖಿಸಿತು. ಜತೆಗೆ, ಭದ್ರತೆ ಮತ್ತು ಸುರಕ್ಷತೆಗಾಗಿ ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿತು.
ಗಮನ ಸೆಳೆದ ಬಿಜೆಪಿಯ ‘ಚಿಪ್ಪು’ ಜಾಹೀರಾತು
ಈ ಮಧ್ಯೆ, ‘ಕನ್ನಡಿಗರ ಕೈಗೆ ಚಿಪ್ಪು ನೀಡಿದ ಕಾಂಗ್ರೆಸ್’ ಎಂದು ಬಿಜೆಪಿ ಜಾಹೀರಾತು ನೀಡಿತು. ಅದರಲ್ಲಿ, ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕ ಜನತೆ ಕೈಗೆ ಚಿಪ್ಪು ನೀಡಲಾಗಿದೆ ಎಂದು ಉಲ್ಲೇಖಿಸಿತು. ಮುಂದುವರಿದು, ಕಾಂಗ್ರೆಸ್ ಆಡಳಿತದಲ್ಲಿ ಆಟೋ ಮತ್ತು ಕ್ಯಾನ್ ಚಾಲಕರಿಗೆ ಚಿಪ್ಪು, ಬರದಿಂದ ತತ್ತರಿಸಿದ ರೈತರ ಕೈಗೆ ಚಿಪ್ಪು, ಕಾವೇರಿ ನೀರು ತಮಿಳುನಾಡಿಗೆ ಬಿಟ್ಟು ಬೆಂಗಳೂರಿಗರ ಕೈಗೆ ಚಿಪ್ಪು,
ದಲಿತರ 11 ಸಾವಿರ ಕೋಟಿ ದುರ್ಬಳಕೆ ಮಾಡಿಕೊಂಡು ತಳಸಮುದಾಯದ ಕೈಗೆ ಚಿಪ್ಪು, ಪ್ರತಿದಿನ ಪ್ರಯಾಣ ಮಾಡುವ ಕಾರ್ಮಿಕರಿಗೆ ಕೈಗೆ ಚಿಪ್ಪು, ವಿದ್ಯಾನಿಧಿ ನೀಡದೆ ವಿದ್ಯಾರ್ಥಿಗಳ ಕೈಗೆ ಚಿಪ್ಪು, ಅಲ್ಪಸಂಖ್ಯಾತರ ಓಲೈಕೆಯಿಂದ ಹಿಂದುಗಳ ಕೈಗೆ ಚಿಪ್ಪು, ಕಿಸಾನ್ ಸಮ್ಮಾನ್ ನ 24000 ಸ್ಥಗಿತಗೊಳಿಸಿ ರೈತರ ಕೈಗೆ ಚಿಪ್ಪು, ಬೆಲೆ ಏರಿಕೆ ಮಾಡಿ ಜನಸಾಮಾನ್ಯರ ಕೈಗೆ ಚಿಪ್ಪು ನೀಡಿದೆ ಎಂದು ಉಲ್ಲೇಖಿಸಿತು.