‘ಬಿಗ್ ಬಾಸ್ ಹಿಂದಿ ಸೀಸನ್16’ರಲ್ಲಿ ಕಾಣಿಸಿಕೊಂಡು ಸದ್ದು ಮಾಡಿದ್ದ ಗಾಯಕ ಅಬ್ದು ರೋಜಿಕ್ ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. 20 ವರ್ಷದ ರೋಜಿಕ್ ಇದೀಗ ತಮ್ಮ ಮದುವೆಯ ಕಾರಣದಿಂದಾಗಿ ಸುದ್ದಿಯಾಗಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ತಮ್ಮ ಮನ ಗೆದ್ದ ಹುಡುಗಿಯ ಬಗ್ಗೆ ಅಬ್ದು ರೋಜಿಕ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಇದೀಗ ಅಬ್ದು ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ಇದರ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅವರು ಹಂಚಿಕೊಂಡಿದ್ದಾರೆ. ಅಲ್ಲಿ ಅವರ ಭಾವಿ ಪತ್ನಿ ಬಿಳಿ ಬುರ್ಖಾ ಧರಿಸಿದ್ದು ಮುಖ ಕಾಣಿಸಿಲ್ಲ.
ಶಾರ್ಜಾ ಎಮಿರೇಟ್ನ 19 ವರ್ಷದ ಅಮೀರಾ ಅವರನ್ನು ಅಬ್ದು ಮದುವೆ ಆಗಿತ್ತಿದ್ದಾರೆ. ದುಬೈ ಮಾಲ್ನಲ್ಲಿ ಇವರ ಭೇಟಿ ನಡೆದಿದೆ. ಮೊದಲ ಬಾರಿಗೆ ಅಬ್ದು ಅಮೀರಾ ಅವರನ್ನು ನೋಡಿದ್ದು, ಮೊದಲ ನೋಟದಲ್ಲೇ ಇಬ್ಬರಿಗೂ ಇಷ್ಟವಾಗಿದೆ. ಈಗ ಇಬ್ಬರು ಮದುವೆ ಆಗುತ್ತಿದ್ದಾರೆ. ‘ನನ್ನ ಜೀವನದಲ್ಲಿ ಹೊಸ ಪ್ರಯಾಣವನ್ನು ಪ್ರಾರಂಭಿಸಿದ್ದೇನೆ’ ಎಂದು ಅಬ್ದು ಹೇಳಿದ್ದಾರೆ. ನವ ಜೋಡಿಗೆ ಎಲ್ಲರೂ ಶುಭಾಶಯ ತಿಳಿಸಿದ್ದಾರೆ.
ಅಬ್ದು ರೋಜಿಕ್ ಅವರು ಇತ್ತೀಚೆಗೆ ವಿಡಿಯೋ ಹಂಚಿಕೊಂಡಿದ್ದರು. ‘ನನ್ನನ್ನು ಗೌರವಿಸುವ, ಪ್ರೀತಿಸುವ ಹುಡುಗಿ ಸಿಗುತ್ತಾಳೆ ಎಂದು ನಾನು ಯಾವಾಗಲೂ ಊಹಿಸಿರಲಿಲ್ಲ. ನಾನು ಎಷ್ಟು ಸಂತೋಷವಾಗಿದ್ದೇನೆ ಎಂಬುದನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ನನಗೆ 20 ವರ್ಷ. ಪ್ರೀತಿಯಲ್ಲಿ ಬೀಳಬೇಕು, ನಾನು ಪ್ರೀತಿಸೋ ಹುಡುಗಿ ನನ್ನನ್ನು ಗೌರವಿಸಬೇಕು, ಅತಿಯಾಗಿ ಪ್ರೀತಿ ಮಾಡಬೇಕು ಎನ್ನುವ ಆಸೆ ಇತ್ತು. ಆಗ ಈ ಹುಡುಗಿ ಸಿಕ್ಕಳು’ ಎಂದಿದ್ದರು ಅಬ್ದು. ಈಗ ಅವರ ಜೊತೆ ರೋಜಿಕ್ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಜುಲೈ 7ರಂದು ಮದುವೆ ಆಗಲಿದ್ದಾರೆ.