ಟೆಸ್ಟ್ ಕ್ರಿಕೆಟ್ನಲ್ಲಿ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಬಿರುಸಿನ ಬ್ಯಾಟಿಂಗ್ ಮೂಲಕ ಗಮನ ಎದುರಾಳಿ ತಂಡಗಳ ನಿದ್ರೆ ಕಡೆಸಿತ್ತು. ಆದರೆ, ಇಂಗ್ಲೆಂಡ್ ತಂಡದ ಈ ಅಬ್ಬರಕ್ಕೆ ಟೀಮ್ ಇಂಡಿಯಾ ಬ್ರೇಕ್ ಹಾಕಿದೆ. ಬ್ಯಾಝ್ಬಾಲ್ ಕ್ರಿಕೆಟ್ ಮೂಲಕ ಈವರೆಗೆ 4 ಟೆಸ್ಟ್ ಸರಣಿ ಗೆದ್ದು, 3 ಸರಣಿಗಳನ್ನು ಡ್ರಾ ಮಾಡಿಕೊಂಡಿದ್ದ ಇಂಗ್ಲೆಂಡ್ ತಂಡಕ್ಕೆ ಮೊದಲ ಸೋಲಿನ ಬರೆ ಎಳೆಯುವಲ್ಲಿ ರೋಹಿತ್ ಶರ್ಮಾ ಸಾರಥ್ಯದ ಭಾರತ ಟೆಸ್ಟ್ ಕ್ರಿಕೆಟ್ ತಂಡ ಯಶಸ್ವಿಯಾಗಿದೆ.
ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ಎದುರು ಯಶಸ್ಸು ಕಂಡಿದೆ. 2022ರಲ್ಲಿ ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಭಾರತದ ಎದುರು ತಾಯ್ನಾಡಿನಲ್ಲಿ ನಡೆದ ಏಕೈಕ ಟೆಸ್ಟ್ನಲ್ಲಿ ಜಯ ದಾಖಲಿಸಿತ್ತು ಕೂಡ. ಆದರೆ, ಭಾರತ ಪ್ರವಾಸದಲ್ಲಿ ಅಂಥದ್ದೇ ಆಟವಾಡಿ ಯಶಸ್ಸು ಕಾಣಲು ಇಂಗ್ಲೆಂಡ್ ತಂಡ ಸಂಪೂರ್ಣ ವಿಫಲವಾಗಿದೆ.
ಬ್ಯಾಝ್ ಬಾಲ್ ಕ್ರಿಕೆಟ್ ಮೂಲಕ ಇಂಗ್ಲೆಂಡ್ ಆಡಿದ ಸರಣಿಗಳು
- ಇಂಗ್ಲೆಂಡ್ vs ನ್ಯೂಜಿಲೆಂಡ್, ಇಂಗ್ಲೆಂಡ್ಗೆ 3-0 ಅಂತರದ ಜಯ
- ಇಂಗ್ಲೆಂಡ್ vs ಭಾರತ, 2-2 ಅಂತರದಲ್ಲಿ ಡ್ರಾ
- ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ಗೆ 2-1 ಅಂತರದ ಜಯ
- ಇಂಗ್ಲೆಂಡ್ vs ಪಾಕಿಸ್ತಾನ, ಇಂಗ್ಲೆಂಡ್ಗೆ 3-0 ಅಂತರದ ಜಯ
- ಇಂಗ್ಲೆಂಡ್ vs ನ್ಯೂಜಿಲೆಂಡ್, 1-1 ಅಂತರದಲ್ಲಿ ಡ್ರಾ
- ಇಂಗ್ಲೆಂಡ್ vs ಐರ್ಲೆಂಡ್, ಇಂಗ್ಲೆಂಡ್ಗೆ 1-0 ಅಂತರದ ಜಯ
- ಇಂಗ್ಲೆಂಡ್ vs ಆಸ್ಟ್ರೇಲಿಯಾ, 2-2 ಅಂತರದಲ್ಲಿ ಡ್ರಾ
- ಇಂಗ್ಲೆಂಡ್ vs ಭಾರತ, ಇಂಗ್ಲೆಂಡ್ಗೆ 1-3 ಅಂತರದ ಸೋಲು