ಸೀತಾಫಲದಿಂದ ಮಾಡಲಾಗುವ ಆರೋಗ್ಯಕರ ಸ್ಮೂದಿ ಬಾಯಾರಿಕೆಯನ್ನು ತಣಿಸುತ್ತದೆ. ಶುಂಠಿ, ಬಾದಾಮಿಯನ್ನು ಸೇರಿಸಿ ಮಾಡಲಾಗುವ ಸೀತಾಫಲ ಸ್ಮೂದಿ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ ಮಾತ್ರವಲ್ಲದೆ ಬಹಳಷ್ಟು ಆರೋಗ್ಯಕರ ಪ್ರಯೋಜನಗಳಿವೆ. ಈ ನವರಾತ್ರಿ ಸಂದರ್ಭದಲ್ಲಿ ಸೀತಾಫಲದ ಸ್ಮೂದಿಯನ್ನು ನೀವು ಕೂಡಾ ತಯಾರಿಸಿ, ಸವಿದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ.
ಬೇಕಾಗುವ ಪದಾರ್ಥಗಳು:
ಬಾದಾಮಿ ಹಾಲು – 1 ಕಪ್
ಸೀತಾಫಲದ ತಿರುಳು – 1 ಕಪ್
ಕೊಚ್ಚಿದ ಶುಂಠಿ – ಅರ್ಧ ಟೀಸ್ಪೂನ್
ಜೇನುತುಪ್ಪ – 1 ಟೀಸ್ಪೂನ್
ಬಾದಾಮಿ ಚೂರುಗಳು – 1 ಟೀಸ್ಪೂನ್
ಏಲಕ್ಕಿ ಪುಡಿ – 1 ಚಿಟಿಕೆ
ಮಾಡುವ ವಿಧಾನ:
* ಮೊದಲಿಗೆ ಬಾದಾಮಿ ಚೂರುಗಳನ್ನು ಪೂರ್ವಭಾವಿಯಾಗಿ ಕಾಯಿಸಲ್ಪಟ್ಟ ಓವನ್ನಲ್ಲಿ ಸುಮಾರು 5 ನಿಮಿಷಗಳ ಕಾಲ 150 ಡಿಗ್ರಿ ತಾಪದಲ್ಲಿ ಹುರಿದುಕೊಳ್ಳಿ.
* ಒಂದು ಮಿಕ್ಸರ್ ಜಾರ್ನಲ್ಲಿ ಹುರಿದ ಬಾದಾಮಿ ಚೂರುಗಳು, ಕೊಚ್ಚಿದ ಶುಂಠಿ, ಸೀತಾಫಲ ತಿರುಳು, ಬಾದಾಮಿ ಹಾಲು, ಜೇನುತುಪ್ಪ ಮತ್ತು ಚಿಟಿಕೆ ಏಲಕ್ಕಿ ಪುಡಿಯನ್ನು ಸೇರಿಸಿ. ಅದನ್ನು ಸುಮಾರು 4 ನಿಮಿಷಗಳ ಕಾಲ ಬ್ಲೆಂಡ್ ಮಾಡಿಕೊಳ್ಳಿ.
* ಈಗ ಮಿಶ್ರಣ ಕ್ರೀಮ್ನಂತಹ ಟೆಕ್ಸ್ಚರ್ ಹೊಂದಿರುತ್ತದೆ. ಅದನ್ನು ಒಂದು ಪಾತ್ರೆಗೆ ಹಾಕಿ, ಅರ್ಧ ಗಂಟೆ ಫ್ರಿಜ್ನಲ್ಲಿಡಿ.
* ಬಳಿಕ ಗ್ಲಾಸ್ಗಳಿಗೆ ಸುರಿದು, ಒಣ ಹಣ್ಣುಗಳಿಂದ ಅಲಂಕರಿಸಿದರೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಸೀತಾಫಲ ಸ್ಮೂದಿ ಸವಿಯಲು ಸಿದ್ಧವಾಗುತ್ತದೆ