ಗದಗ ;- ತಾಲೂಕಿನ ನಾಗಾವಿ ಬಳಿಯ ಹಲವು ರೈತರನ್ನ ಜಮೀನು ತೆಗೆದುಕೊಂಡು ಒಕ್ಕಲೆಬ್ಬಿಸಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ಯ ವಿಶ್ವವಿದ್ಯಾಲಯ ಸ್ಥಾಪಿಸಿ ಪರಿಹಾರ ನೀಡದೆ ಸರಕಾರ ಮೋಸ ಮಾಡಿದೆ ಅಂತ ಗದಗ ಜಿಲ್ಲಾಧಿಕಾರಿ ಕಚೇರಿ ಎದುರು ನಾಗಾವಿ ಹಾಗೂ ಬಗುರ್ ಹುಕುಂ ಸಾಗುವಳಿದಾರರು ಪ್ರತಿಭಟನೆ ಮಾಡಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶ್ವವಿದ್ಯಾಲಯ ಸ್ಥಾಪನೆಗೆ ಸುಮಾರು 500 ಕ್ಕೂ ಹೆಚ್ಚು ಎಕರೆ ಜಮೀನನ್ನು ಸರಕಾರ ವಶಪಡಿಸಿಕೊಂಡಿದೆ. ಇದರಲ್ಲಿ ಸುಮಾರು 50ಕ್ಕೂ ಹೆಚ್ಚು ರೈತರು ನಾಲ್ಕು ತಲೆಮಾರುಗಳಿಂದ ಉಳುಮೆ ಮಾಡಿಕೊಂಡು ಜೀವನ ನಡೆಸುತ್ತ ಬರ್ತಿದ್ದರು. ಆದ್ರೆ ಇದ್ದಕ್ಕಿದ್ದಂತೆ ಎಲ್ಲ ರೈತರನ್ನ ಒಕ್ಕಲೆಬ್ಬಿಸಿ ಅವರಿಗೆ ಪರಿಹಾರವನ್ನೂ ನೀಡದೆ ಕಾಲೇಜು ಸ್ಥಾಪನೆ ಮಾಡಿದೆ ಅಂತಾ ಆರೋಪಿಸಿದ್ದಾರೆ. ಆದ್ರೆ ಪರಿಹಾರಕ್ಕಾಗಿ ರೈತರು ಐದಾರು ವರ್ಷಗಳಿಂದ ಅಲೆದಾಡ್ತಾಯಿದ್ದಾರೆ. ಯಾರೂ ಈ ಬಗ್ಗೆ ಕಿವಿಗೊಡ್ತಿಲ್ಲ ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ.ಪಾಟೀಲ್ ಗಮನ ಹರಿಸಿ ಪರಿಹಾರ ಕೊಡಿಸಬೇಕು ಅಂತ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ ಡಿಸಿ ಕಚೇರಿ ಗೇಟ್ ಮುಂಬಾಗದಲ್ಲಿ ಟೆಂಟ್ ಹಾಕಿ ಬುತ್ತಿ ತಂದು ರೊಟ್ಟಿ ಊಟ ಮಾಡುವುದರ ಮೂಲಕ ಸರಕಾರಕ್ಕೆ ಅನ್ನ ಕಸಿದುಕೊಂಡ ಸರಕಾರ ಅಂತ ಕಿಡಿ ಕಾರಿದ್ದಾರೆ.