ರಾಜ್ಯ ಬಜೆಟ್ ಗೂ ಮೊದಲೇ ಕಾಂಗ್ರೆಸ್ ಸರ್ಕಾರಕ್ಕೆ ಪ್ರತಿಭಟನೆಯ ಬಿಸಿ ಕಾವೇರಿದ್ದು ಹಲವು ಬೇಡಿಕೆ ಮುಂದಿಟ್ಟು ಸರ್ಕಾರದ ವಿರುದ್ಧ ಕಾರ್ಮಿಕರ ಪ್ರತಿಭಟನೆ. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಹೋರಾಟ
ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಕಟ್ಟಡ, ಕಾರ್ಖನೆ ಕಾರ್ಮಿಕರು ಸೇರಿ ಸಾವಿರಾರು ಕಾರ್ಮಿಕರಿಂದ ಅಲ್ ಇಂಡಿಯಾ ಟ್ರೆಡ್ ಯೂನಿಯನ್ ಕಾಂಗ್ರೆಸ್ ವತಿಯಿಂದ ಧರಣಿ.
1. ಕನಿಷ್ಠ ವೇತನ ಕಾನೂನು ಬದ್ಧವಾಗಿ ₹31.500/- ಕ್ಕೆ ನಿಗದಿಗೊಳಿಸಿ
2. ಅಂಗನವಾಡಿ, ಬಿಸಿ ಊಟ ಹಾಗೂ ಆಶಾ ಕಾರ್ಯಕರ್ತೆಯರ ಗೌರವ ಧನವನ್ನು ಹೆಚ್ಚಿಸಿ
3. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಸೌಲಭ್ಯಗಳ ಕಡಿತ ನಿಲ್ಲಿಸಿ
4 ಸೆಸ್ ಸಂಗ್ರಹ ಹೆಚ್ಚಿಸಿ ಹಾಗೂ ಕಲ್ಯಾಣ ಮಂಡಳಿಯ ಲೆಕ್ಕ ಪತ್ರಗಳ ಶ್ವೇತ ಪತ್ರವನ್ನು ಕೂಡಲೇ ಬಿಡುಗಡೆ ಮಾಡಿ
5. ಕೆಲಸದ ಅವಧಿಯ ತಿದ್ದುಪಡಿ ಮಾಡಿ, 8 ಗಂಟೆಗಳಿಗೆ ಮರುಸ್ಥಾಪಿಸಿ
6. ಕಾರ್ಮಿಕರ ತುಟ್ಟಿ ಭತ್ಯೆವನ್ನು (2015-18) ನೀಡಲು ಕೂಡಲೆ ಕ್ರಮ ವಹಿಸಬೇಕು.
6. ತೋಟದ ಕಾರ್ಮಿಕರ ಕನಿಷ್ಠ ವೇತನವನ್ನು ಹೆಚ್ಚಿಸಿ
7. ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆಗೆ ಕಲ್ಯಾಣ ಮಂಡಳಿ ರಚನೆ
8. ಗಿಗ್ ಕಾರ್ಮಿಕರ ಆರ್ಥಿಕ ಭದ್ರತೆಗೆ ಕನಿಷ್ಠ ವೇತನ ಜಾರಿ ಮಾಡಿ.
9. ಅಂಗನವಾಡಿ ಕೇಂದ್ರಗಳನ್ನ ಬಲಗೊಳಿಸಿ, ಅಲ್ಲಿಯೇ lkg ಆರಂಭಿಸಬೇಕು
10. ಚುನಾವಣೆ ಪೂರ್ವ ಕೊಟ್ಟ ಭರವಸೆಯಂತೆ ಸರ್ಕಾರ 6ನೇ ಗ್ಯಾರಂಟಿ ಜಾರಿ ಮಾಡ್ಬೇಕು