ದಿನದಿಂದ ದಿನಕ್ಕೆ ರಾಜಧಾನಿಯಲ್ಲಿ ಹೆಚ್ಚಿದ ಬಿಸಿಲಿನ ಝಳ… ಕುಡಿಯುವ ನೀರಿಗೆ ಭಾರಿ ತೊಂದರೆ… ಶಾಲೆಗಳಿಗೆ ರಜೆ.. ನೀರು ಹೆಚ್ಚಾಗಿ ಬೇಕು.. ಈ ಸಮಯದಲ್ಲಿ ಸರಿಯಾಗಿ ಕುಡಿಯಲ ನೀರು ಸಿಗುವುದಿಲ್ಲ.. ಕೇವಲ ಏರಿಯಾ ಗಳಲ್ಲಿ ಇದ್ದ ನೀರಿನ ಸಮಸ್ಯೆ ಇದೀಗ ಡಿಪೋ ಗಳಲ್ಲಿ ಕೂಡ ಶುರುವಾಗಿದೆ.. ಇದನ್ನು ಕಂಡ ಸಿಬ್ಬಂದಿ ಅಸ್ಟ್ ಇಷ್ಟೋ ನೀರನ್ನು ಒದಗಿಸಿ ಮಾರಾಯ್ರೇ ಎಂದು ಇಲ್ಲಿರುವ ಸಿಬ್ಬಂದಿ ಪತ್ರ ಬರೆದಿದ್ದಾರೆ.. ಹಾಗಿದ್ದರೆ ಏನಿದು ಸ್ಟೋರಿ ಅಂತೀರಾ ಇಲ್ಲಿ ನೋಡಿ.
ಬೇಸಿಗೆಯ ಝಳ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯನ್ನೂ ಕಾಡುತ್ತಿದೆ.ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಕುಡಿಯಲು ನೀರು ಕೂಡ ಸಿಗುತ್ತಿಲ್ಲವಂತೆ.ಸುಡೋ ಬಿಸಿಲಿನಲ್ಲಿ ಕೆಲಸ ಮಾಡಲು ಸಾಧ್ಯವಾಗದ ಸ್ಥಿತಿಗೆ ಸಿಲುಕಿರುವ ಸಾರಿಗೆ ಸಿಬ್ಬಂದಿಗೆ ನೀರನ್ನು ಕೊಟ್ಟು ಪುಣ್ಯ ಕಟ್ಟಿಕೊಳ್ಳಿ ಎಂದು ಬಿಎಂಟಿಸಿ ಸಿಬ್ಬಂದಿಯೋರ್ವರು ಪತ್ರವನ್ನೇ ಬರೆದಿದ್ದಾರೆ..
ಇಲ್ಲಿ ನೋಡಿ ಹಲವಾರು ತಿಂಗಳಿನಿಂದ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಡ್ರೈವರ್, ಕಂಡಕ್ಟರ್ ಪ್ರಣಿಕರು ಹೈರಾಣಾಗುತ್ತಿದ್ದಾರೆ. ಅಂತರ್ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಈ ಬಸ್ನಿಲ್ದಾಣಕ್ಕೆ ದಿನವೂ ಸಾವಿರಾರೂ ಸಂಖ್ಯೆಯಲ್ಲಿ ಪ್ರಯಾಣಿಕರು ಆಗಮಿಸುತ್ತಾರೆ. ಬೇಸಿಗೆ ಕಾಲವಿರುವುದರಿಂದ ಪ್ರಯಾಣಿಕರು ಬಸ್ಸಿನಿಂದ ಇಳಿಯುತ್ತಲೇ ಶುರುವಾಗುತ್ತದೆ ಕುಡಿಯುವ ನೀರಿನ ಸಮಸ್ಯೆ.
ನಗರದಲ್ಲಿ ಒಟ್ಟು ೫೩ ಟಿಟಿಎಂಸಿಗಳುದ್ದು ಬಹುತೇಕ ಕಡೆ ನೀರಿನ ಸಮಸ್ಯೆ ಎದುರಾಗಿದೆ.. ಡಿಪೋಗಳಲ್ಲಿನ ಆರ್ ಓ ಪ್ಲಾಂಟ್ ಗಳು ಬಹುತೇಕ ಕೆಟ್ಟು ಹೋಗಿವೆಯಂತೆ.ಇರುವಂಥ ಘಟಕಗಳ ದುರಸ್ತಿಯೂ ನಡೆದಿಲ್ಲ.ಅದರಿಂದ ಬರುತ್ತಿರುವ ನೀರು ಸೇವನೆಗೆ ಯೋಗ್ಯವಾಗಿಲ್ಲವಂತೆ.ಡಿಪೋಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ಕುಡಿಯಲು ನೀರಿಲ್ಲದೆ ಶೌಚಕ್ಕೂ ನೀರಿಲ್ಲದೆ ಒದ್ದಾಡುವಂತಾಗಿದೆ.
ಬಾಯಾರಿಕೆ ತಣಿಸಲು ನಲ್ಲಿಗಳನ್ನು ತಿರುಗಿಸಿದರೆ ಒಂದು ಹನಿ ನೀರು ಬಾರದೆ ನಿರಾಶರಾಗಿ ನಿಲ್ದಾಣ ಅಧಿಕಾರಿಗಳ ಮೇಲೆ ಹಿಡಿ ಶಾಪ ಹಾಕುತ್ತಾರೆ. ಈ ನೀರಿನ ತೊಟ್ಟಿಗಳು ಕೇವಲ ಪ್ರದರ್ಶನಕ್ಕೆ ಸೀಮಿತವಾದಂತೆ ಭಾಸವಾಗುತ್ತದೆ. ಬಸ್ ನಿಲ್ದಾಣಗಳಲ್ಲಿ ಮೂಲಭೂತ ಅಗತ್ಯವಾದ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಯಾಕೆ ಮಾಡುತ್ತಿಲ್ಲ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಈ ಎಲ್ಲಾ ಸಮಸ್ಯೆಗಳು ಇರುವುದರಿಂದ ಅನೇಕ ಸಿಬ್ಬಂದಿ ಡ್ಯೂಟಿಗೆ ಬರುವ ಆಸಕ್ತಿಯನ್ನೇ ತೋರಿಸುತ್ತಿಲ್ಲವಂತೆ.ಅನೇಕರು ನಮಗೆ ರಜೆ ಕೊಡಿ ಸಂಬಳ ಇಲ್ಲದಿದ್ದರೂ ಪರ್ವಾಗಿಲ್ಲ ಎಂದು ಮನವಿ ಮಾಡಿಕೊಳ್ಳಲಾರಂಭಿಸಿದ್ದಾರಂತೆ. ಬಿಎಂಟಿಸಿ ಇತಿಹಾಸದಲ್ಲಿ ಕುಡಿಯುವ ನೀರಿಗೆ ಇಷ್ಟೊಂದು ಸಮಸ್ಯೆ ನಿರ್ಮಾಣವಾದ ಉದಾಹರಣೆಗಳೇ ಇರಲಿಲ್ಲವೇನೋ,.?