ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಅಂದ ಹಾಗೆ ದರ್ಶನ್ ಜೈಲಿಗೆ ಹೋಗುವ ಮುನ್ನ ತೆರೆಕಂಡ ಕಾಟೇರ ಸಿನಿಮಾ ಸೂಪರ್ ಹಿಟ್ ಆಗಿದೆ. ಬ್ಯಾಕ್ ಟು ಬ್ಯಾಕ್ ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿದೆ. ಇದೀಗ ಅಬುಧಾಬಿಯಲ್ಲಿ ನಡೆದ ಫಿಫಾ 2025 ಕಾರ್ಯಕ್ರಮದಲ್ಲಿ ಕಾಟೇರ ಪ್ರಶಸ್ತಗಳ ಸುರಿಮಳೆಯನ್ನೇ ಬಾಚಿಕೊಂಡಿದೆ.
ಕಾಟೇರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿ ಕರೀಯರ್ನಲ್ಲೇ ಅತ್ಯುತ್ತಮ ಸಿನಿಮಾ ಎನಿಸಿಕೊಂಡಿದೆ. ಹೋದ ಕಡೆಗಳಲ್ಲೆ ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿದೆ. ಕರ್ನಾಟಕದಲ್ಲೇ ಮಾತ್ರ ರಿಲೀಸ್ ಆಗಿದ್ದ ಕಾಟೇರ 200 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿ ದಾಖಲೆ ಮಾಡಿತ್ತು. ದರ್ಶನ್ ಜೈಲಿನಲ್ಲಿದ್ದರು ತರುಣ್ ಸುದೀರ್ ನಿರ್ದೇಶನದ ಈ ಸಿನಿಮಾಕ್ಕೆ ಪ್ರಶಸ್ತಿಗಳು, ಬಹುಮಾನಗಳು ಹರಿದು ಬರುತ್ತಿವೆ.
ಇತ್ಥೀಚೆಗೆ ದುಬೈನಲ್ಲಿ ನಡೆದಿದ್ದ ಸೈಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಬರೋಬ್ಬರಿ 4 ಪ್ರಶಸ್ತಿಗಳನ್ನು ಕಾಟೇರಗೆ ಬಂದಿದ್ದವು. ಇದರ ಬೆನ್ನಲ್ಲೇ ಕಾಟೇರ ಮತ್ತೆ ನಾಲ್ಕು ಆವಾರ್ಡ್ಗಳನ್ನು ಪಡೆದುಕೊಂಡಿದೆ.
ಇಂಟರ್ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್ಸ್ (ಐಐಎಫ್ಎ) ಕಾರ್ಯಕ್ರಮದಲ್ಲಿ ದರ್ಶನ್ ಅಭಿನಯಿಸಿದ್ದ ಕಾಟೇರ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಗೆದ್ದುಕೊಂಡಿದೆ. ಈ ಚಿತ್ರಕ್ಕೆ ನಿರ್ದೇಶನ ಮಾಡಿರುವ ತರುಣ್ ಸುಧೀರ್ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಸಿಕ್ಕಿದೆ. ನಟಿ ಶ್ರುತಿ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಒಲಿದು ಬಂದಿದೆ. ಡೆಬ್ಯೂ ಆ್ಯಕ್ಟಿಂಗ್ಗಾಗಿ ಮಾಲಶ್ರೀ ಅವರ ಮಗಳು ಆರಾಧನಾ ಅವರಿಗೆ ಪ್ರಶಸ್ತಿ ಸಿಕ್ಕಿದ್ದು, ತೆಲುಗು ನಟ ಜಗಪತಿ ಬಾಬು ಅವರಿಗೆ ಅತ್ಯುತ್ತಮ ಖಳನಾಯಕ ಪ್ರಶಸ್ತಿ ಪಡೆದುಕೊಂಡಿದ್ದಾರೆ.
3 ದಿನಗಳ ಇಂಟರ್ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್ಸ್ (ಐಐಎಫ್ಎ) ಕಾರ್ಯಕ್ರಮ ದುಬೈನಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಬಾಲಿವುಡ್ ಸೇರಿ ದಕ್ಷಿಣ ಭಾರತದ 4 ಭಾಷೆಯ ಸಿನಿಮಾಗಳಿಗೆ ಈ ಪ್ರಶಸ್ತಿಗಳನ್ನ ನೀಡಲಾಗುತ್ತದೆ. 2023ರಲ್ಲಿ ರಿಲೀಸ್ ಸಿನಿಮಾಗಳಿಗೆ ಐಐಎಫ್ಎ ಪ್ರಶಸ್ತಿಗೆ ಆಯ್ಕೆ ಮಾಡಿಕೊಂಡಿದೆ.