ಇಡೀ ವಿಶ್ವವನ್ನೇ ಕೊರೊನಾ ಅನ್ನೋ ವೈರಸ್ ಗಢ ಗಢ ಅಂತ ನಡಗ್ಬಿಟ್ಟಿದೆ. ಕೊರೊನಾ ಎಂಬ ಮಹಾಮಾರಿಯ ಹೆಸರನ್ನು ಕೇಳಿದರೆ ಸಾಕು ಈಗಲೂ ಜನ ಭಯ ಪಡುತ್ತಾರೆ. ಮೊದಲೆರಡು ಅಲೆಯಲ್ಲಿ ಕೊರೊನಾ ಕೊಟ್ಟ ಕಾಟ ಅಷ್ಟಿಷ್ಟು ಅಲ್ಲವೇ ಅಲ್ಲ.ಇದೀಗ ಮೂರನೇ ಮುಗಿದ ಬಳಿಕ ಕೊರೊನಾ ರೂಪಾಂತರಿ ಜೆಎನ್-1 ಅನ್ನೋ ಕ್ರಿಮಿ ದಿನೇ ದಿನೇ ಆತಂಕ ಹುಟ್ಟಿಸುತ್ತಿದೆ.ಇಷ್ಟು ದಿನ ಸೈಲೆಂಟ್ ಆಗಿ ಇದ್ದ ಕೊರೊನಾ ಬೇರೆ ಸ್ವರೂಪದಲ್ಲಿ ಎಂಟ್ರಿ ಕೊಟ್ಟು ಜನರ ದೇಹ ಸೇರುತ್ತಿದೆ. ಇದೇ ಜೆಎನ್-1 ವೈರಸ್ ಜನವರಿ ತಿಂಗಳಲ್ಲಿ ಉತ್ತುಂಗಕ್ಕೆ ಹೋಗಲಿದೆ ಅಂತ ತಜ್ಞರು ಅಂದಾಜಿಸಿರೋದು ಮತ್ತಷ್ಟು ಭಯ ಹೆಚ್ಚಿಸಿದೆ.
ಹೌದು.ಕೊರೊನಾ ರೂಪಾಂತರಿ ಜೆಎನ್-1 ವೈರಸ್ ಜನವರಿ ಮೊದಲ ವಾರದಲ್ಲಿ ಗರಿಷ್ಠ ಪ್ರಮಾಣ ತಲುಪುವ ಸಾಧ್ಯತೆಗಳಿವೆ ಎಂದು ತಜ್ಞರು ಅಂದಾಜು ಮುನ್ಸೂಚನೆ ನೀಡಿದ್ದು, ಪ್ರತಿಯೊಬ್ಬರೂ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು ಎಂದು ರಾಜ್ಯ ಆರೋಗ್ಯ ಇಲಾಖೆ ಮನವಿ ಮಾಡಿದೆ. .ಸೋಂಕು ಹರಡುವಿಕೆಯ ಪ್ರಮಾಣ ಹೆಚ್ಚಳವಾಗಲಿದ್ದು, ಮನೆಯಲ್ಲಿ ಒಬ್ಬ ವ್ಯಕ್ತಿಗೆ ಸೋಂಕು ತಗಲಿದ್ರೆ ಇಡೀ ಮನೆಯವರಿಗೆಲ್ಲಾರೂ ಸೋಂಕು ಹರಡಲಿದೆ. 60 ವರ್ಷ ಮೇಲ್ಪಟ್ಟ್ ಕೋಮಾರ್ಬಿಟಿಸ್ ನಿಂದ ಬಳುತ್ತಿರುವ ಜನ ಎಚ್ಚರಿಕೆಯತಯಿಂದ ಇರಬೇಕು ಅಂತ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಮನವಿ ಮಾಡಿದ್ದಾರೆ.
ಇನ್ನೂ ಕೋವಿಡ್ ಮೂರನೇ ಅಲೆ ಮಕ್ಕಳಿಗೆ ಡೇಂಜರ್ ಎನ್ನಲಾಗುತ್ತಿತ್ತು.ಆದ್ರೆ ಕೋವಿಡ್ ಮೂರನೇ ಅಲೆಯಲ್ಲಿ ಮಕ್ಕಳಿಗೆ ಸೋಂಕು ಹೆಚ್ಚು ಬಾಧಿಸಿಲ್ಲ. 3ನೇ ಅಲೆಯಲ್ಲಿ ಮಕ್ಕಳಲ್ಲಿ ಸೋಂಕು ಪರಿಣಾಮ ಕಡಿಮೆ ಆಯ್ತು.. ಕಳೆದೆ ಮೂರು ಅಲೆಗೆ ಕೊರೊರಾ ಅಲೆಗೆ ಹೋಲಿಸಿದರೆ ಈ ರೂಪಾಂತರಿ ವೈರಸ್ ಅತಿಯಾಗಿ ಹರಡುತ್ತದೆ. ಕೋವಿಡ್ ಕಟ್ಟಿಹಾಕಲು ತಾಂತ್ರಿಕ ಸಲಹಾ ಸಮಿತಿ ಜೊತೆ ಇಲಾಖೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಅಗತ್ಯವಿದ್ರೆ ಕೋವಿಡ್ ಗಾಗಿ ಹೊಸ ಗೈಡ್ ಲೈನ್ ಬಿಡುಗಡೆ ಮಾಡಲಾಗ್ತದೆ ಅಂತ ಆರೋಗ್ಯ ಇಲಾಖೆ ಆಯುಕ್ತರು ತಿಳಿಸಿದ್ದಾರೆ.
ಒಟ್ಟಿನಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗ್ತಿದೆ.ಮೊದಲ ಮೂರು ಅಲೆಗೆ ಹೋಲಿಸಿದರೆ ನಾಲ್ಕನೇ ಅಲೆ ಅತಿ ಹೆಚ್ಚು ವೇಗವಾಗಿ ಹರುಡುತ್ತಿದೆ.ಈಗಾಗಲೇ ರಾಜ್ಯದಲ್ಲಿ ನಿತ್ಯ 20-30 ಹೊಸ ಸೋಂಕಿತರು ಪತ್ತೆಯಾಗುತ್ತಿದ್ದಾರೆ.ಇನ್ನೂ ಮುಂದಿನ ದಿನಗಳಲ್ಲಿ ಉತ್ತುಂಗಕ್ಕೆ ಹೋಗಲಿದ್ದು,ಜನ ಎಚ್ಚರಿಕೆಯಿಂದ ಇರಬೇಕು. ನಿರ್ಲಕ್ಷ್ಯ ಮಾಡಿದ್ರೆ ಅಪಾಯ ಕಟ್ಟಿಟ್ಟಬುತ್ತಿ.