ಬೆಂಗಳೂರು: ಕರ್ನಾಟಕವೆಂದು ನಾಮಕರಣ ಇವತ್ತಿಗೆ 50 ವರ್ಷ ತುಂಬಿದೆ. ಇದರ ಸವಿನೆನಪಿಗಾಗಿ ರಾಜ್ಯದಲ್ಲಿ ಒಂದು ವರ್ಷ ಕರ್ನಾಟಕ ಸಂಭ್ರಮ 50 ಅಂತ ಕರಿಬೇಕು ಎಂದು ಜನರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿಕೊಂಡರು. ಕನ್ನಡದ ಇತಿಹಾಸ, ಸಂಸ್ಕೃತಿ, ಭಾಷೆ, ಕಲೆ, ಸಂಗೀತ, ಜಾನಪದ, ಸಂಪ್ರದಾಯಯವನ್ನ ರಾಜ್ಯದ ಜನರಿಗೆ ತಿಳಿಸುವ ಕೆಲಸ ಮಾಡುತ್ತಿದ್ದೇವೆ.
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಎಂದು ಘೋಷ ವಾಕ್ಯ ಕೊಟ್ಟಿದ್ದೇವೆ. ಇಡೀ ರಾಜ್ಯದಲ್ಲಿ ಈ ಘೋಷ ವಾಕ್ಯದೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಈ ವರ್ಷವೇ 50 ವರ್ಷ ಮುಗಿಯಬೇಕಿತ್ತು, ಆದರೆ ಹಿಂದಿ ನಸರ್ಕಾರ ಮಾಡಲಿಲ್ಲ. ಬಾನು ಬಜೆಟ್ನಲ್ಲಿ ಘೊಷಣೆ ಮಾಡಿದ್ದೆ ನ. 1,2023- ನ.1, 2024ರವರೆಗೆ ಈ ಉತ್ಸವ ಮಾಡಲು ಘೋಷಣೆ ಮಾಡಿದ್ದೇನೆ. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇನೆ. ಪ್ರತಿಯೊಬ್ಬ ಕನ್ನಡಿಗನು ಕೂಡಾ ತಾಯಿನಾಡಿಗೆ ಋಣ ತಿರಸಿಬೇಕಿದೆ ಎಂದರು.