ಬೆಂಗಳೂರು:- ರೇಣುಕಾಸ್ವಾಮಿ ಬಚಾವ್ ಆದರೆ ಸಾಕಪ್ಪಾ ಅಂತಾ ಕಣ್ಣೀರಿಡುತ್ತಿರುವ ನಟ ದರ್ಶನ್ಗೆ FSL ಕಂಟಕ, ಬಿಟ್ಟೂಬಿಡದಂತೆ ಕಾಡೋದಕ್ಕೆ ಶುರುವಾಗಿದೆ. ಈಗಾಗಲೇ ನೂರಾರು ಸಾಕ್ಷ್ಯಗಳನ್ನ ಸಂಗ್ರಹಿಸಿರುವ ಪೊಲೀಸರು, ಕಾನೂನು ತಜ್ಞರ ಜೊತೆ ಸಮಾಲೋಚನೆಗೆ ಅಖಾಡ ರೆಡಿ ಮಾಡಿದ್ದಾರೆ.
ಇದರ ನಡುವೆಯೇ ಅಭಿಮಾನ ಅನ್ನೋದು ಅತಿಯಾದರೆ ಏನಾಗುತ್ತೆ ಅನ್ನೋದು ಜೈಲು ಸೇರಿರುವ 15 ಮಂದಿ ಆರೋಪಿಗಳಿಗೆ ಅರ್ಥವಾಗಿದೆ ಅಂತ ಕಾಣುತ್ತಿದೆ. ಹೀಗಾಗಿಯೇ ನಾವ್ ಬಚಾವ್ ಆದ್ರೆ ಸಾಕು ಅನ್ನೋ ಹಂತಕ್ಕೆ ಬಂದಿದ್ದಾರಂತೆ.
ಈಗಾಗಲೇ ಆರೋಪಿ ಅನುಕುಮಾರ್ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಚಾರ್ಜ್ಶೀಟ್ ಬಳಿಕ ಇನ್ನೂ ಹಲವರು ಬೇಲ್ಗೆ ಪ್ಲ್ಯಾನ್ ಮಾಡ್ಕೊಂಡಿದ್ದಾರಂತೆ. ಅಲ್ಲದೆ ಸ್ವಾಮಿ ಪ್ರಕರಣದಲ್ಲಿ ದರ್ಶನ್ ಸಹಾಯ ಮಾಡ್ತಾರೆ ಅನ್ನೋ ನಂಬಿಕೆಯನ್ನೂ ಕಳ್ಕೊಂಡಿದ್ದಾರೆ. ಇದೇ ಕಾರಣಕ್ಕೆ ತಮ್ಮ ತಲೆಗೆ ತಮ್ಮದೇ ಕೈ ಅನ್ನೋದನ್ನ ಅರ್ಥ ಮಾಡ್ಕೊಂಡಿದ್ದಾರೆ. ಒಟ್ನಲ್ಲಿ ಕೆಟ್ಟ ಮೇಲೆ ಬುದ್ದಿ ಬಂತು ಅನ್ನೋ ಹಾಗೆ ಎಲ್ಲರೂ ಒಂದೇ ಕಣ್ಣಲ್ಲಿ ಕಣ್ಣೀರಿಡ್ತಿದ್ದಾರೆ ಎನ್ನಲಾಗಿದೆ.
ಇತ್ತ ದರ್ಶನ್ ವಿರುದ್ಧ ಸಿಕ್ಕಿರುವ ಸಾಕ್ಷ್ಯಗಳೇ ಕಂಟಕವಾಗಿ ಕಾಡೋದಕ್ಕೆ ಶುರುವಾಗಿವೆ. ಅದರಲ್ಲೂ ತಾಂತ್ರಿಕ ಹಾಗೂ ಮೆಡಿಕಲ್ ಸಾಕ್ಷ್ಯಗಳು ಸಿಕ್ಕಾಪಟ್ಟೆ ಸ್ಟ್ರಾಂಗ್ ಆಗಿವೆಯಂತೆ.
ಪ್ರತಿ ಸಾಕ್ಷ್ಯದಲ್ಲೂ ದರ್ಶನ್ ಪಾತ್ರ ಇರೋದು ಬಹುತೇಕ ಖಾಯಂ ಆಗಿದೆ. ಹೀಗಾಗಿ ದರ್ಶನ್ ಕೇಸ್ ಕೈಗೆತ್ತಿಕೊಂಡರೆ ಹಿನ್ನೆಡೆ ಅನುಭವಿಸುವ ಆತಂಕ ಕಾಡ್ತಿದೆ. ಹೀಗಾಗಿಯೇ ವಕೀಲರು ಹಿಂದೇಟು ಹಾಕ್ತಿದ್ದಾರೆ