ಬೆಂಗಳೂರು: ಕಳೆದ ಒಂದು ವಾರದಿಂದ ವರ್ಗಾವಣೆ ದಂಧೆ ವಿಚಾರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಸಿಡಿಸಿದ ಬಾಂಬ್ ಸಾಕಷ್ಟು ಸದ್ದು ಮಾಡ್ತಿದೆ. ಇದೇ ವಿಚಾರವಾಗಿ ಹೆಚ್ ಡಿಕೆ ಮತ್ತಷ್ಟು ಸ್ಪೋಟಕ ಮಾಹಿತಿ ಹೊರಹಾಕಿದ್ದು, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಅಲ್ಲದೇ ಬಿಜೆಪಿ ನಾಯಕರು ಈ ಆರೋಪಕ್ಕೆ ಮತ್ತಷ್ಟು ತುಪ್ಪಸುರಿದಿದ್ದು ಸದನದಲ್ಲೂ ಈ ವಿಚಾರ ಪ್ರತಿಧ್ವನಿಸುವ ಸಾಧ್ಯತೆಯಿದೆ.
ಹೌದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸಿದ್ದರಾಮಯ್ಯ ಸರ್ಕಾರದ ವಿರುದ್ದ ವರ್ಗಾವಣೆ ದಂದೆ ಆರೋಪವನ್ನು ಕಳೆದೊಂದು ವಾರದಿಂದ ಮಾಡ್ತಾ ಬಂದಿದ್ದಾರೆ. ನಿನ್ನೆ ವೈಎಸ್ ಟಿ ಕೆಲೆಕ್ಷನೆ ಆಗುತ್ತಿದೆ ಎಂದು ಆರೋಪಿಸಿದ್ದ ಕುಮಾರಸ್ವಾಮಿ ಇಂದು ಸಾರಿಗೆ ಇಲಾಖೆಯಲ್ಲಿ ವರ್ಗಾವಣೆಯ ಸಿಂಡಿಕೇಟ್ ಇದೆ. ಸಬ್ರಿಜಿಸ್ಟ್ರಾರ್ ಸಿಂಡಿಕೇಟ್ ಇದೆ,ಈಗ ಕಮರ್ಷಿಯಲ್ ಟ್ಯಾಕ್ಸ್ ಸಿಂಡಿಕೇಟ್ ಶುರುವಾಗಿದೆ, ವರ್ಗಾವಣೆ ಸಿಂಡಿಕೇಟ್ ಶುರುವಾಗಿದೆ, ಆಯಾ ಇಲಾಖೆಯಲ್ಲಿ ಕೆಲವು ಸಿಂಡಿಕೇಟ್ ಗಳು ಕೆಲಸ ಮಾಡ್ತಾ ಇವೆ ಎಂಬ ಹೊಸ ಬಾಂಬ್ ಸಿಡಿಸಿದ್ದಾರೆ .ಈ ಸಿಂಡಿಕೇಟ್ ಗಳು ಯಾರು ಯಾರು ವರ್ಗಾವಣೆ ಆಗಬೇಕು ಅಂತಾ ಲಿಸ್ಟ್ ಕೊಡ್ತಾರೆ ಅದರಂತೆ ವರ್ಗಾವಣೆ ನಡೆಯುತ್ತೆ. ಹಾಗೇ ಶಾಸಕರ ಲೆಟರ್ ತೆಗೆದುಕೊಂಡು ಸಿಎಂ ಕಚೇರಿಗೆ ಹೋದ್ರೆ 30 ಲಕ್ಷ ಕೊಡಬೇಕು ಅಂತಾರೆ. 30 ಲಕ್ಷ ಕೊಡದೇ ಹೊದರೆ ಕೆಲಸ ಆಗೊಲ್ಲ ಅಂತ ಸಿಎಂ ಕಚೇರಿಯಲ್ಲಿ ಹೇಳ್ತಾರೆ ಎಂದು ಸಿಎಂ ಕಚೇರಿ ವಿರುದ್ದ ಕುಮಾರಸ್ವಾಮಿ ಆರೋಪಿಸಿದ್ದಾರೆ….
ವರ್ಗಾವಣೆ ದಂಧೆ ಬಗೆಗಿನ ಕುಮಾರಸ್ವಾಮಿ ಆರೋಪಕ್ಕೆ ವಿಪಕ್ಷ ಬಿಜೆಪಿ ಕೂಡ ಕೈಜೋಡಿಸಿದೆ. ಅಲ್ಲದೇ ಈ ವಿಚಾರವನ್ನು ಸದನದಲ್ಲಿ ಪ್ರತ್ಯೇಕ ಅಸ್ತ್ರವನ್ನಾಗಿ ಬಳಸಲು ಬಿಜೆಪಿ ನಿರ್ಧರಿಸಿದೆ. ಕುಮಾರಸ್ವಾಮಿ ಸಿಎಂ ಆಗಿ ಕೆಲಸ ಮಾಡಿದವ್ರು ಅವರಿಗೆ ಸಾಕಷ್ಟು ಸೋರ್ಸ್ ಇರುತ್ತದೆ. ಕ್ಯಾಬಿನೆಟ್ ನಲ್ಲೂ ಏನೇನು ಆಗ್ತಿದೆ ಅಂತ ಕುಮಾರಸ್ವಾಮಿ ಗೆ ಗೊತ್ತಾಗುತ್ತೆ. ವರ್ಗಾವಣೆ ದಂಧೆಯಲ್ಲಿ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿಕೆಶಿವಕುಮಾರ್ ಸೇರಿ ಎಲ್ಲರ ಪಾಲು ಇದೆ ಎಂದು ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರವನ್ನು ಜರಿದಿದ್ದಾರೆ. ಸರ್ಕಾರದ ವಿರುದ್ದ ಹರಿಹಾಯ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಐಎಸ್, ಐಪಿಎಸ್ ವರ್ಗಾವಣೆ ಹಲವಾರು ಬಾರಿ ಕ್ಯಾನ್ಸಲ್ ಆಗಿದೆ. ಇದೇ ವರ್ಗಾವಣೆ ದಂಧೆಗೆ ಮಹತ್ವದ ಸಾಕ್ಷಿ, ನಮ್ಮ ಅವಧಿಯಲ್ಲಿ ಸುಖಾ ಸುಮ್ಮನೆ ಆರೋಪ ಮಾಡಿದ್ರಿ. ಆಗ ಸಾಕ್ಷ್ಯ ಕೇಳಿದಾಗ ಕೊಡೋಕೆ ಆಗಲಿಲ್ಲ ಎಂದು ಕುಟುಕಿದ್ದಾರೆ.
ಕಾಂಗ್ರೆಸ್ ಸರ್ಕಾರದ ಮೇಲೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಆರೋಪ ವಿಚಾರಕ್ಕೆ ಸಚಿವ ಪ್ರಿಯಾಂಕ ಖರ್ಗೆ ತಿರುಗೇಟು ನೀಡಿದ್ದು.
YST ಮತ್ತು VST ಟ್ಯಾಕ್ಸ್ ಬಗ್ಗೆ ಸಾಕ್ಷಿಗಳು ಇದ್ದರೆ ಕೊಡಿ. ಅದರ ಬಗ್ಗೆ ನಾವು ತನಿಖೆ ಮಾಡ್ತೀವಿರಾಜ್ಯದ ಮೇಲೆ ಭ್ರಷ್ಟಾಚಾರದ ಆರೋಪ ಇದೆ ಅದನ್ನು ತೊಳೆಯುವ ಕೆಲಸ ನಾವು ಮಾಡ್ತಿದ್ದೇವೆ. 40% ಕಮಿಷನ್ ಬಗ್ಗೆ ಕೂಡ ತನಿಖೆ ನಡೆಸ್ತಿದ್ದೆವೆ. ಕುಮಾರಸ್ವಾಮಿ ಹಿಟ್ ಆ್ಯಂಡ್ ರನ್ ಮಾಡ್ತಿದ್ದಾರೆ ಹಿಂದಿನ ಸರ್ಕಾರದ ಮೇಲೆ ನಾವು ಭ್ರಷ್ಟಾಚಾರ ಆರೋಪ ಮಾಡಿದ್ವಿ.ಅದರ ದಾಖಲೆ ಇಟ್ಟುಕೊಂಡು ನಾವು ಮಾತಾಡಿದೇವೆ. ಕುಮಾರಸ್ವಾಮಿ ಅವರ ಬಳಿ ದಾಖಲೆ ಇದ್ದರೆ ತೋರಿಸಲಿ ಎಂದು ತಿರುಗೇಟು ನೀಡಿದ್ದಾರೆ.
ಒಟ್ನಲ್ಲಿ ಸದನದ ಹೊರಗಡೆ ಸಾಕಷ್ಟು ಸದ್ದು ಮಾಡಿರೋ ವಿಪಕ್ಷಗಳು ಸಭೆಯ ಒಳಗೂ ಸಿದ್ದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಹೊರಟಿದ್ದಾರೆ. ಆದ್ರೆ ಸಿಎಂ ಸಿದ್ದರಾಮಯ್ಯ ಇದಕ್ಕೆ ತಕ್ಕ ಪ್ರತ್ಯುತ್ತರ ಕೊಡಲು ಸಿದ್ದರಾಗಿದ್ದಾರೆ ಎನ್ನಲಾಗ್ತಿದೆ. ವರ್ಗಾವಣೆಯ ವಾರ್ YST , VST ಟ್ಯಾಕ್ಸ್ ಗದ್ದಲದಲ್ಲಿ ಯಾರ ಕೈ ಮೇಲಾಗುತ್ತದೆ ಅನ್ನೊದನ್ನ ಕಾದುನೋಡಬೇಕಿದೆ…..