ಆಧಾರ್ ಕಾರ್ಡ್ ಯೋಜನೆಯ ಹೊಣೆ ಹೊತ್ತಿರುವ ಯುಐಡಿಎಐ ಹೊರಡಿಸಿರುವ ಮಾರ್ಗಸೂಚಿ ಪ್ರಕಾರ ನೀವು ಆಧಾರ್ ಕಾರ್ಡ್ನಲ್ಲಿ ನಿಮ್ಮ ಹೆಸರನ್ನ ಎರಡು ಬಾರಿ ಮಾತ್ರ ತಿದ್ದುಪಡಿ ಮಾಡಬಹುದು. ಹಾಗಾಗಿ, ಪದೇ ಪದೇ ಆಧಾರ್ ಕಾರ್ಡ್ನಲ್ಲಿ ಹೆಸರು ತಿದ್ದುಪಡಿ ಮಾಡಲು ಹೋಗದಿರಿ.
ಹಾಗೆ ಆದಾರ್ ಕಾರ್ಡ್ ಅಪ್ ಡೇಟ್ ಮಾಡುವವರಿಗೆ ಗುಡ್ ನ್ಯೂಸ್ ಸಿಕ್ಕಿದ್ದು ಮಾರ್ಚ್ 14ರ ವರೆಗೆ ಗಡುವುನೀಡಿದ್ದು ಈಗ ಜೂನ್ ವರೆಗೆ ಮುಂದುವರೆಸಿದ್ದಾರೆ. ಮಾರ್ಚ್ 14ರವರೆಗೂ ಉಚಿತವಾಗಿ ಆಧಾರ್ ಅಪ್ಡೇಟ್ ಮಾಡಬಹುದಾಗಿತ್ತು. ಈ ಅವಕಾಶವನ್ನು ಜೂನ್ 14ರವರೆಗೂ ವಿಸ್ತರಿಸಲಾಗಿದೆ. ಯಾವುದಾದರೂ ಆಧಾರ್ ಸೆಂಟರ್ಗೆ ಹೋಗಿಯೂ ಆಧಾರ್ ವಿವರ ಅಪ್ಡೇಟ್ ಮಾಡಬಹುದು. ಅದಕ್ಕೆ ನಿರ್ದಿಷ್ಟ ಶುಲ್ಕ ಇರುತ್ತದೆ. ಜೂನ್ 14 ರ ಬಳಿಕ ಆನ್ಲೈನ್ನಲ್ಲೂ ಕೂಡ ಶುಲ್ಕ ಪಾವತಿಸಿ ಆಧಾರ್ ಡೀಟೇಲ್ಸ್ ಅಪ್ಡೇಟ್ ಮಾಡಬಹುದು.
ಆಧಾರ್ ವಿವರ ಮಾರ್ಪಡಿಸಲು ಯಾವ ದಾಖಲೆಗಳು ಬೇಕು
- ಐಡಿ ಮತ್ತು ಅಡ್ರೆಸ್ ಪ್ರೂಫ್ ಎರಡಕ್ಕೂ ಸಲ್ಲುವ ದಾಖಲೆಗಳು: ವೋಟರ್ ಐಡಿ, ಪಾಸ್ಪೋರ್ಟ್, ಸರ್ಕಾರದಿಂದ ನೀಡಲಾದ ಮತ್ತು ವಿಳಾಸ ನಮೂದಾಗಿರುವ ಯಾವುದೇ ಐಡಿ ಕಾರ್ಡ್ ಅಥವಾ ಸರ್ಟಿಫಿಕೇಟ್.
- ಐಡಿ ಪ್ರೂಫ್ಗೆ: ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಶಾಲೆಯ ಅಂಕ ಪಟ್ಟಿ, ಸರ್ಕಾರದಿಂದ ನೀಡಲಾದ ಐಡಿ ಕಾರ್ಡ್ ಅಥವಾ ಪ್ರಮಾಣಪತ್ರ.
- ಅಡ್ರೆಸ್ ಪ್ರೂಫ್ಗೆ: ಹಿಂದಿನ ಮೂರು ತಿಂಗಳ ಎಲೆಕ್ಟ್ರಿಕ್ ಬಿಲ್, ನೀರಿನ ಬಿಲ್, ಗ್ಯಾಸ್ ಬಿಲ್, ಬ್ಯಾಂಕ್ ಪಾಸ್ಬುಕ್, ಪೋಸ್ಟ್ ಆಫೀಸ್ ಪಾಸ್ಬುಕ್, ಬಾಡಿಗೆ ಕರಾರು ಇತ್ಯಾದಿ ದಾಖಲೆಗಳು.
ಹೇಗೆ ಸಲ್ಲಿಸೋದು ಅಂತೀರಾ
- ಮೈ ಆಧಾರ್ ಪೋರ್ಟಲ್ಗೆ ಹೋಗಿ ಲಾಗಿನ್ ಆಗಬಹುದು. ಅಥವಾ ಮುಖ್ಯಪುಟದಲ್ಲಿ ಕೆಳಗೆ ಡಾಕ್ಯುಮೆಂಟ್ ಅಪ್ಡೇಟ್ ಟ್ಯಾಬ್ ಕ್ಲಿಕ್ ಮಾಡಿ.
- ಅಲ್ಲಿ ಆಧಾರ್ ನಂಬರ್ ನಮೂದಿಸಿ, ಕ್ಯಾಪ್ಚಾ ಹಾಕಿ ಒಟಿಪಿ ಮೂಲಕ ಲಾಗಿನ್ ಆಗಿರಿ.
- ಆಗ ನಿಮ್ಮ ಹೆಸರು, ಲಿಂಗ, ಜನ್ಮ ದಿನಾಂಕ ಮತ್ತು ವಿಳಾಸದ ವಿವರ ನೋಡಬಹುದು.
- ಅಲ್ಲಿ ಐಡಿ ಪ್ರೂಫ್ ಮತ್ತು ಅಡ್ರೆಸ್ ಪ್ರೂಫ್ ದಾಖಲೆಗಳನ್ನು ಅಪ್ಡೇಟ್ ಮಾಡಬಹುದು. ಸಂಬಂಧ ಪಟ್ಟದ ದಾಖಲೆಯ ಸ್ಯಾನ್ಡ್ ಕಾಪಿಯನ್ನು ಅಪ್ಲೋಡ್ ಮಾಡಬೇಕಾಗುತ್ತದೆ.
- ಬಳಿಕ ಅಕ್ನಾಲೆಡ್ಜ್ಮೆಂಟ್ ಅನ್ನು ಡೌನ್ಲೋಡ್ ಮಾಡಿ.