ಬಾಗಲಕೋಟೆ: ರಾಜ್ಯದಲ್ಲಿ ಅನೇಕರು ನೇಕಾರಿಕೆ ವೃತ್ತಿಯನ್ನು ನಂಬಿ ಬದುಕುವ ಬಡ ನೇಕಾರ ಕುಟುಂಬಗಳಿಗೆ ಉಚಿತವಾಗಿ ಪ್ಯಾನ್ ಮತ್ತು ಆಧಾರ ಕಾರ್ಡ್ ಜೋಡಣೆಗೆ ಅವಕಾಶ ಕಲ್ಪಸಬೇಕೆಂದು ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷರಾದ ಶಿವಲಿಂಗ ಟಿರಕಿ. ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ಅಸಿಸ್ಟೆಂಟ್ ಕಮಿಷನರ್ ಕಚೇರಿಯಲ್ಲಿ ನೇಕಾರ ಸಮಸ್ಯೆ ಕುರಿತು ಮನವಿ ಪತ್ರ ಸಲ್ಲಿಸಿದರು. ರಬಕವಿ- ಬನಹಟ್ಟಿ ತಾಲ್ಲೂಕಿನ ತೇರದಾಳ ಮತಕ್ಷೇತ್ರದಲ್ಲಿ ಅತಿ ಹೆಚ್ಚು ನೇಕಾರಿಕೆ ಹೊಂದಿರುವ ಕ್ಷೇತ್ರ ಅದರಲ್ಲಿ 70 ಸಾವಿರಕ್ಕೂ ಹೆಚ್ಚು ಬಹುಸಂಖ್ಯಾತ ನೇಕಾರರಿದ್ದು.
ಕಳೆದ ಎರಡು ವರ್ಷಗಳಲ್ಲಿ GST ಹೊಡೆತ ಮತ್ತು ಮಾರುಕಟ್ಟೆ ಬೆಲೆ ಗಗನಕ್ಕೆರಿರುವದರಿಂದ ಉದ್ಯೋಗವೇ ಇಲ್ಲದೆ ಅನೇಕ ನೇಕಾರ ಕುಟುಂಬಗಳು ಬೀದಿಗೆ ಬಿದ್ದು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತದ್ದಾರೆ.
ಸರ್ಕಾರ ಎಲ್ಲ ನೇಕಾರ ಸಮಸ್ಯೆಗಳನ್ನು ಆಲಿಸಲಿ
ಪ್ಯಾನ್ ಮತ್ತು ಆಧಾರ ಕಾರ್ಡ್ ಜೋಡಣೆಗೆ ವಿಧಿಸಿರುವ 1000/- ಸಾವಿರ ರೂ.ಮೊತ್ತದ ದಂಡವನ್ನು ರದ್ದುಗೊಳಿಸಿ ಉಚಿತವಾಗಿ ಜೋಡಣೆಗೆ ಅವಕಾಶ ಕಲ್ಪಪಿಸಬೇಕೆಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಸಿದ್ದಮಲ್ಲಪ್ಪ ಗಡೆಪ್ಪನವರ.ಶಂಕರ ಮರೆಗುದ್ದಿ.ಶಿವಾನಂದ ಹುಲ್ಯಾಳ.ಶಿವಾಜಿ ಜಾಧವ.ಗಂಗಪ್ಪ ಕರೋಳಿ.ಮಲ್ಲಪ್ಪ ಗೋಠೆ.ಹೋಳಬಸು ಚಿಂಚಕಂಡಿ.ಇನ್ನೂ ಅನೇಕ ನೇಕಾರರ ಹಾಗೂ ಮುಂತಾದವರು ಭಾಗವಹಿಸಿದ್ದರು.
ವರದಿ: ಪ್ರಕಾಶ ಕುಂಬಾರ, ಬಾಗಲಕೋಟೆ