ಬೆಂಗಳೂರು: ಬ್ರಾಂಡೆಡ್ ಕಂಪನಿಯ ಹೆಸರಲ್ಲಿ ನಕಲಿ ಬಟ್ಟೆಗಳನ್ನು ತಯಾರಿಕ ಕಂಪನಿ ಮೇಲೆ ಬೊಮ್ಮನಹಳ್ಳಿ ಪೊಲೀಸರು ದಾಳಿ ನಡೆಸಿ ಲಕ್ಷಾಂತರ ಮೌಲ್ಯದ ಬಟ್ಟೆಗಳನ್ನು ವಶಪಡಿಸಿಕೊಂಡಿರುವ ಘಟನೆ ನಡೆದಿದೆ.. ಬೊಮ್ಮನಹಳ್ಳಿ ಹೊಸೂರು ಮುಖ್ಯ ರಸ್ತೆಯಲ್ಲಿರುವ ರಾಜು ಅಂಡ್ ಕಂಪನಿಯಲ್ಲಿ ಗಾರ್ಮೆಂಟ್ಸ್ ನಲ್ಲಿLINEN CLUB,
Armani, Gant, Levis, RL-POLO, Hugo-Boss, UNDER-ARMOUR ಏಳು ಬ್ರಂಡೆಟ್ ಕಂಪನಿಗಳ ನಕಲಿ ಮಾಡಿ ಮಾರಾಟ ಮಾಡುತ್ತಿದ್ದ ಅಸಾಮಿಗಳು .
ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಮಾಲ್ ವಶಕ್ಕೆ ಪಡೆಯಲಾಗಿದೆ.. ಇನ್ನು ಕಾಲ ಸಂತೆಯಲ್ಲಿ ನಕಲಿ ಬ್ಯಾಂಡೆಡ್ ಗಳ ಹಾವಳಿ ಹೆಚ್ಚಾಗಿದೆ..ಇನ್ನುಹೊಸೂರು ಮುಖ್ಯ ರಸ್ತೆಯ ಬಾನು ನರ್ಸಿಂಗ್ ಹೋಮ್ ಸಮೀಪವಿರುವ ರಾಜ ಅಂಡ್ ಕಂಪನಿ ಬ್ರಾಂಡೆಡ್ ಕಂಪನಿಗೆ ಸೇರಿದ ನಕಲಿ, ಹೆಸರುಗಳನ್ನು ಬಟ್ಟೆ ಮೇಲೆ ಹಾಕಿ ಡಿಸ್ಟ್ರಿಬ್ಯೂಟರ್ ಗೆ ಮಾರಾಟ ಮಾಡುತ್ತಿದ್ದರು .
ಹೀಗಾಗಿ ಸಾಕಷ್ಟು ದೂರು ಕೇಳಿಬಂದಿದ್ದು ಬೊಮ್ಮನಹಳ್ಳಿ ಪೊಲೀಸರು ದಾಳಿ ನಡೆಸಿದ್ದಾರೆ.. ಇನ್ನು ಬೆಂಗಳೂರುನ ಮಹಾನಗರದಲ್ಲಿ. ವಿಶ್ವ ದರ್ಜೆಯ ಬ್ರಾಂಡ್ಗಳನ್ನು ರಚಿಸಲು ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಆರ್ & ಡಿ ಚಟುವಟಿಕೆಗಳಲ್ಲಿ ಸಾಕಷ್ಟು ಖರ್ಚು ಮಾಡುತ್ತಿವೆ. ಆದರೆ ಮಾರುಕಟ್ಟೆಯಲ್ಲಿ ನಕಲಿಗಳ ಹಾವಳಿಯಿಂದ ನಷ್ಟ ಅನುಭವಿಸುವಂತಾಗಿದೆ.ಇದು ಸರ್ಕಾರಕ್ಕೆ, ನಿಜವಾದ ವಸ್ತು ತಯಾರಕರಿಗೆ ಮತ್ತು ಗ್ರಾಹಕರಿಗೆ ಮೋಸ ಜೊತೆಗೆ ನಿಜವಾದ ಬ್ರಾಂಡ್ ಗುರುತಿಸುವುದು ಸವಾಲಾಗಿ ಪರಿಣಮಿಸಿದೆ..