ಬೆಂಗಳೂರು:– ಸಿಎಂ ಕಾರ್ಯದರ್ಶಿಯ ಪಿಎ ಎಂದು ಮಹಿಳಾ ಅಧಿಕಾರಿಗಳ ಮಾಹಿತಿ ಕಲೆ ಹಾಕುತ್ತಿದ್ದ ವ್ಯಕ್ತಿಯನ್ನು ಅರೆಸ್ಟ್ ಮಾಡಲಾಗಿದೆ.
ನಗರದ ವಿಧಾನಸೌಧ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಗೋಪಾಲಸ್ವಾಮಿ ಬಂಧಿತ ಆರೋಪಿ. ಆರೋಪಿ ಮುಖ್ಯಮಂತ್ರಿ ಕಾರ್ಯದರ್ಶಿ ಪಿಎ, ಕಂದಾಯ ಸಚಿವರ ಪಿಎ ಎಂದು ಹೇಳಿಕೊಂಡು ತಿರುಗಾಡುತ್ತಿದ್ದನು. ಈತ ಡಿಜಿ ಕಚೇರಿ, ಕಮಿಷನರ್ ಕಚೇರಿಯಿಂದ ಕರೆ ಮಾಡ್ತಿದ್ದೇನೆಂದು ಹೇಳಿ ಕಂದಾಯ ಇಲಾಖೆಯ ಮಹಿಳಾ ಅಧಿಕಾರಿಗಳ ಬಗ್ಗೆ ವಿವರ ಕಲೆ ಹಾಕುತ್ತಿದ್ದ.
ಈತನ ನಿಜ ಬಣ್ಣ ತಿಳಿದು, ಓರ್ವ ಅಧಿಕಾರಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಾಗುತ್ತಿದ್ದಂತೆ ಪೊಲೀಸರು ವಿಕ್ರಂ ಗೋಪಾಲಸ್ವಾಮಿಯನ್ನು ಬಂಧಿಸಿದರು. ವಿಚಾರಣೆ ವೇಳೆ ಅಸಲಿ ಸತ್ಯ ಗೊತ್ತಾಗಿದೆ.