ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ದರ್ಶನ್ ಜೈಲು ಸೇರಿ ಮೂರು ತಿಂಗಳು ಕಳೆದಿದೆ. ದರ್ಶನ್ ರನ್ನು ಹೇಗಾದರು ಮಾಡಿ ಹೊರ ತರಬೇಕು ಎಂದು ಪತ್ನಿ ವಿಜಯಲಕ್ಷ್ಮಿ ಪ್ರಯತ್ನಿಸ್ತಿದ್ದಾರೆ. ಇದೇ ಕಾರಣಕ್ಕೆ ಅವರು ಸಾಕಷ್ಟು ದೇವರುಗಳ ಮೊರೆ ಹೋಗ್ತಿದ್ದಾರೆ. ಈ ಮಧ್ಯೆ ದರ್ಶನ್ ಹಾಗೂ ಪವಿತ್ರಾ ಗೌಡ ನಡುವಿನ ಚಾಟಿಂಗ್ ಚಾರ್ಜ್ ಶೀಟ್ ನಲ್ಲಿ ಬಯಲಾಗಿದೆ. ಈ ಮಧ್ಯೆ ನಟಿ ರಚಿತಾ ರಾಮ್ ಮಾಡಿರುವ ಫೋಸ್ಟ್ ಒಂದು ಚರ್ಚೆಗೆ ಕಾರಣವಾಗಿದೆ.
ಸಿನಿ ಜೀವನಕ್ಕೆ ಗುರುವಾದ ದರ್ಶನ್ ಪರ ರಚಿತಾ ರಾಮ್, ತನ್ನ ಇನ್ಸ್ಟಾಗ್ರಾಮ್ನಲ್ಲಿ ಮತ್ತೊಂದು ಪೋಸ್ಟ್ ಭಾರೀ ಸದ್ದು ಮಾಡ್ತಿದೆ. ನಕಲಿ ಜನರು ಮುಖವಾಡ ಹಾಕೊಂಡು ಬದುಕ್ತಾರೆ. ಆದ್ರೆ ಅಸಲಿ ಜನರು ಇದ್ಯಾವುದಕ್ಕೂ ಕೇರ್ ಮಾಡಲ್ಲ ಅಂತ ಪೋಸ್ಟ್ ಮಾಡಿದ್ದಾರೆ. ರಚಿತಾ ಫೇಕ್ ಪೀಪಲ್ ಅಂದಿದ್ಯಾರಿಗೆ? ಈ ಪೋಸ್ಟ್ ಹಿಂದಿನ ಸತ್ಯ ಏನು? ಎಂಬ ಚರ್ಚೆ ಇದೀಗ ಎಲ್ಲೆಡೆ ಸದ್ದು ಮಾಡ್ತಿದೆ.
ಬಳ್ಳಾರಿ ಜೈಲಿನಲ್ಲಿ ಇರುವ ದರ್ಶನ್, ತನ್ನ ಪತ್ನಿ ವಿಜಯಲಕ್ಷ್ಮಿ, ತಾಯಿ ಮೀನಾ ಭೇಟಿಗೆ ಮನವಿ ಮಾಡಿದ್ದಾರಂತೆ. ಮುಂದಿನ ಕಾನೂನು ಪ್ರಕ್ರಿಯೆಗಳ ಬಗ್ಗೆ ಫ್ಯಾಮಿಲಿ ಜೊತೆ ಮಾತನಾಡಲು ಅವರು ಬಯಸಿದ್ದಾರಂತೆ. ದರ್ಶನ್ ಕುಟುಂಬ ಇವತ್ತು ಸಂಜೆ 4 ಗಂಟೆ ನಂತರ ಬಳ್ಳಾರಿ ಸೆಂಟ್ರಲ್ ಜೈಲಿಗೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ. ಒಟ್ಟಾರೆ, ರೇಣುಕಾಸ್ವಾಮಿಯ ಅವತ್ತಿನ ಚಾಟಿಂಗ್, ರಚಿತಾ ರಾಮ್ನ ನಿನ್ನೆಯ ಪೋಸ್ಟ್. ದರ್ಶನ್ ತಾಯಿ ಮತ್ತು ಪತ್ನಿಯನ್ನು ಇವತ್ತು ಭೇಟಿ ಮಾಡಲಿದ್ದು ಮುಂದಿನ ನಡೆ ಏನಾಗಲಿದೆ ಎಂಬ ಕುತೂಹಲ ಶುರುವಾಗಿದೆ.