ಬೆಂಗಳೂರು: ಪೊಲೀಸ್ ಇಲಾಖೆ(Police Department) ಹೆಸರಲ್ಲಿ ಅನಧಿಕೃತ ವೆಬ್ ಲಿಂಕ್ ಮೂಲಕನಕಲಿ ನೇಮಕಾತಿ ಪ್ರಕಟಣೆಯನ್ನ ದುಷ್ಕರ್ಮಿಗಳು ಹೊರಡಿಸಿದ್ದಾರೆ. ಹೌದು ksprecruitment.co.in ಹೆಸರಲ್ಲಿ ಅನಧಿಕೃತ ಲಿಂಕ್ ತೆರೆದಿದ್ದು, ಅದು ಅನಧಿಕೃತ ವೆಬ್ ಲಿಂಕ್ ಮೂಲಕ ರಾಜ್ಯ ಪೊಲೀಸ್ ನೇಮಕಾತಿ ವಿಭಾಗದ ವೆಬ್ ಸೈಟ್ ಕನೆಕ್ಟ್ ಮಾಡಿದ್ದಾರೆ.
ಅದರಲ್ಲಿ ಕೆಎಸ್ಪಿ ರಿಕ್ರೂಟ್ಮೆಂಟ್ ಟೆಕ್ನಿಕಲ್ ಸ್ಟಾಪ್ ಎಂಬ ಪುಟ ತೆರೆದು, 25 ಟೆಕ್ನಿಕಲ್ ಸ್ಟಾಪ್ ನೇಮಕಾತಿ ಇದೆ ಎಂದು ಪ್ರಕಟಣೆ ಹೊರಡಿಸಿದ್ದಾರೆ. ಜೊತೆಗೆ ಅರ್ಜಿ ಶುಲ್ಕ 2 ಸಾವಿರ ಇದ್ದು ಯುಪಿಐ ಮೂಲಕ ಹಣ ಪಾವತಿಸಲು ಸೂಚಿಸಿದ್ದು, ಈ ಬಗ್ಗೆ ಅಧಿಕಾರಿಗಳಿಂದ ಕೇಂದ್ರ ವಿಭಾಗ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅನಧಿಕೃತ ವೆಬ್ ಲಿಂಕ್ ತೆರೆದ ದುಷ್ಕರ್ಮಿಗಳಿಗಾಗಿ ಶೋಧಕಾರ್ಯ ಆರಂಭವಾಗಿದೆ.
545 ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ; ಭಾಗಿಯಾದವರ ವಿರುದ್ದ ಕ್ರಮ
ಈ ಹಿಂದೆ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿನ 545 ಪಿಎಸ್ಐ ಹುದ್ದೆಗಳ ಭರ್ತಿಗಾಗಿ ನೇಮಕಾತಿ ಪರೀಕ್ಷೆ ನಡೆಸಿತ್ತು. ಕಳೆದ ಅಕ್ಟೋಬರ್ 3 ರಂದು ಪಿಎಸ್ಐ ನೇಮಕಾತಿ ಪರೀಕ್ಷೆ ಬೆಂಗಳೂರು ಸೇರಿದಂತೆ ರಾಜ್ಯದ 7 ಜಿಲ್ಲೆಗಳಲ್ಲಿ 93 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯಲ್ಲಿ ಕೆಲವು ಅಭ್ಯರ್ಥಿಗಳು ಹುದ್ದೆಗಳನ್ನು ಅಕ್ರಮವಾಗಿ ಗಿಟ್ಟಿಸಿಕೊಳ್ಳಲು ಲಕ್ಷಾಂತರ ರೂಪಾಯಿ ಹಣ ನೀಡಿದ್ದರು. ಈ ಪ್ರಕರಣ ಬೆಳಕಿಗೆ ಬಂದು ತನಿಖೆ ನಡೆಸಿದಾಗ ಪರೀಕ್ಷಾ ಹಗರಣದಲ್ಲಿ ಹಣದ ಹೊಳೆಯೇ ಹರಿದಿರುವುದು ದೃಢವಾಗಿತ್ತು