ಬೆಂಗಳೂರು:– ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಇಲಿಯಾಸ್ ನಗರದಲ್ಲಿ ಕೌಟುಂಬಿಕ ಕಲಹಕ್ಕೆ ಬೇಸತ್ತು ಹೆಂಡತಿಯನ್ನೇ ಕೊಂದ ಘಟನೆ ಜರುಗಿದೆ.
ಶಿಯಾಪತ್ ಉನ್ನೀಸ್ ಗಂಡನಿಂದಲೇ ಕೊಲೆಯಾದ ಹೆಂಡತಿ ಎಂದು ಹೇಳಲಾಗಿದೆ. ನೂರುಲ್ಲಾ ಕೊಲೆ ಮಾಡಿರುವ ಪತಿ ಎಂದು ತಿಳಿದು ಬಂದಿದೆ. ಬೆಂಗಳೂರಿನಲ್ಲಿ ಹೆಂಡತಿಯನ್ನೇ ಕೊಂದ ಗಂಡ. ಸಂಜೆ 7.30 ಸುಮಾರಿಗೆ ನಡೆದಿರೋ ಘಟನೆ. ಕಳೆದ ಹಲವು ದಿನಗಳಿಂದ ಗಂಡ-ಹೆಂಡತಿ ಮಧ್ಯೆ ಜಗಳ ನಡೆದಿದೆ. ಇದರಿಂದ ಬೇಸತ್ತಿದ್ದ ಹೆಂಡತಿ ವಿಚ್ಛೇದನ ತೆಗೆದುಕೊಳ್ಳಲು ನಿರ್ಧರಿಸಿದ್ದಳು. ಇದೇ ವಿಚಾರಕ್ಕೆ ಪತ್ನಿಯೊಂದಿಗೆ ಜಗಳ ತೆಗೆಯುತ್ತಿದ್ದ ನೂರುಲ್ಲಾ. ಕಳೆದ ಐದು ದಿನಗಳಿಂದ ಗಂಡ-ಹೆಂಡತಿ ದೂರವಾಗಿದ್ದರು.
ಇವತ್ತಿನಿಂದ ನಾನು ನಿನ್ನಿಂದ ದೂರ ಇರ್ತೀನಿ..’ ಅಂತಾ ನಿರ್ಧರಿಸಿ ಮನೆ ಖಾಲಿ ಮಾಡಲು ಮುಂದಾಗಿದ್ದ ಪತ್ನಿ ಶಿಯಾಪತ್ ಉನ್ನೀಸ್. ಇಂದು ಮನೆ ಖಾಲಿ ಮಾಡುತ್ತಿದ್ದ ವೇಳೆಯೇ ಏಕಾಏಕಿ ಚಾಕುವಿನಿಂದ ಪತ್ನಿ ಮೇಲೆ ದಾಳಿ ಮಾಡಿರುವ ಪತಿ ನೂರುಲ್ಲಾ. ಚಾಕುವಿನಿಂದ ನಾಲ್ಕೈದು ಬಾರಿ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಪತ್ನಿಯನ್ನ ಹತ್ಯೆ ಮಾಡಿದ ಬಳಿಕ ಪೊಲೀಸ್ ಠಾಣೆಗೆ ಹೋಗಿ ಶರಣಾಗಿರುವ ಆರೋಪಿ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನ ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.