ಮಂಡ್ಯ:- ಕೌಟುಂಬಿಕ ಕಲಹದ ಹಿನ್ನೆಲೆ ಕೊಡಲಿಯಿಂದ ಕೊಚ್ಚಿ ತನ್ನ ಹೆಂಡತಿಯನ್ನೇ ಪಾಪಿ ಗಂಡ ಕೊಲೆ ಮಾಡಿದ ಘಟನೆ ಜರುಗಿದೆ. 38 ವರ್ಷದ ತೇಜಸ್ವಿನಿ ಕೊಲೆಯಾದ ಮಹಿಳೆ ಎನ್ನಲಾಗಿದೆ.
ಜಯರಾಮು, ಪತ್ನಿಯನ್ನು ಕೊಲೆಗೈದ ಪತಿರಾಯ. ಕೌಟುಂಬಿಕ ವಿಚಾರವಾಗಿ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಜಗಳ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ. ತೇಜಸ್ವಿನಿ ಕುತ್ತಿಗೆಗೆ ಜಯರಾಮು ಸ್ಕ್ರೂಡ್ರೈವರ್ನಿಂದ ಚುಚ್ಚಿ ಬಳಿಕ ಕೊಡಲಿಯಿಂದ ತಲೆ ಮೇಲೆ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ತೇಜಸ್ವಿನಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.