ಬಾಲಿವುಡ್ ಖ್ಯಾತ ನಟ ಅಮಿತಾಭ್ ಬಚ್ಚನ್ ಅಯೋಧ್ಯೆಯಲ್ಲಿ ಮನೆ ಹೊಂದಲು ನಿರ್ಧರಿಸಿದ್ದಾರೆ. ಹಾಗಾಗಿಯೇ ಅವರು ಅಯೋಧ್ಯೆಯಲ್ಲಿ ನಿವೇಶನ ಖರೀದಿ ಮಾಡಿದ್ದಾರೆ. ಮುಂಬೈ ಮೂಲದ ಡೆವಲಪರ್ ಕಂಪೆನಿಯಿಂದ ಈ ನಿವೇಶನ ಖರೀದಿ ಮಾಡಿದ್ದು, ನಿವೇಶನದ ಮೌಲ್ಯ 14.5 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ.
ಮೊನ್ನೆಯಷ್ಟೇ ಅಯೋಧ್ಯೆಯಲ್ಲಿ ನಡೆಯುತ್ತಿರುವ ರಾಮಮಂದಿರ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆ ಪಡೆದ್ದ ಅಮಿತಾಭ್, ಇದೀಗ ರಾಮನೂರಿನಲ್ಲೇ ಮನೆ ಮಾಡಲು ನಿರ್ಧಾರ ಮಾಡಿದ್ದು, ಸಹಜವಾಗಿಯೇ ಅಭಿಮಾನಿಗಳಿಗೆ ಸಂಭ್ರಮ ತಂದಿದೆ. ರಾಮ ನಿಮ್ಮನ್ನು ಕಾಪಾಡಲಿ ಎಂದು ಶುಭ ಕೋರಿದ್ದಾರೆ.
ಅಂದಹಾಗೆ ಈ ನಿವೇಶನವು ಹತ್ತು ಸಾವಿರ ಚದರ ಅಡಿ ಅಳತೆಯನ್ನು ಹೊಂದಿದ್ದು, ವಿಮಾನ ನಿಲ್ದಾಣದಿಂದ 30 ನಿಮಿಷ ದೂರವಿದೆಯಂತೆ. ಈ ಕುರಿತಂತೆ ಅಮಿತಾಭ್ ಪ್ರತಿಕ್ರಿಯೆ ಕೂಡ ಮಾಡಿದ್ದಾರೆ.