‘ವಾಣಿ ರಾಣಿ’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿ ಖ್ಯಾತಿ ಗಳಿಸಿದ್ದ ನಟಿ ಜೆನ್ನಿ ಪ್ರಿಯಾ ಇದೀಗ ವಿದೇಶದಲ್ಲಿರೋ 2 ಮಕ್ಕಳ ತಂದೆಯನ್ನ ಮದುವೆಯಾಗಲು ಹೋಗಿ 400ಗ್ರಾಂ ಚಿನ್ನ ಕಳೆದುಕೊಂಡಿರುವುದಾಗಿ ವರದಿಯಾಗಿದೆ. ಸದ್ಯ ಈ ಬಗ್ಗೆ ದೂರು ನೀಡಿರುವ ನಟಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ನಟಿ ಜೆನಿ ಪ್ರಿಯಾ ನಟನೆಯ ಜೊತೆಗೆ ಮೇಕಪ್ ಕಲಾವಿದೆಯೂ ಗುರುತಿಸಿಕೊಂಡಿದ್ದರು. ಸನ್ ಟಿವಿ, ಜಯ ಟಿವಿ, ಕಲೈನಾರ್ ಟಿವಿ ಮುಂತಾದ ಅನೇಕ ಟಿವಿ ಚಾನೆಲ್ಗಳಲ್ಲಿ ಕೆಲಸ ಮಾಡಿದ್ದು, ಪಾಲಿಮರ್ ಟಿವಿಯಲ್ಲಿ ಪ್ರಸಾರವಾದ ‘ರಾಜ ಮನ್ನಾರ್ ಪುರಿಯಾರ’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರವನ್ನೂ ನಿರ್ವಹಿಸಿದ್ದಾರೆ. ಅದಾದ ನಂತರ ಹಲವು ಚಿತ್ರಗಳಲ್ಲಿ ನಟಿಸಿದ್ದರು. ನಟಿ ತಮ್ಮದೇ ಆದ ಮೇಕಪ್ ಸ್ಟುಡಿಯೊವನ್ನು ಹೊಂದಿದ್ದಾರೆ. ಮೇಕಪ್ ತರಬೇತಿ ತರಗತಿಗಳನ್ನು ನೀಡುತ್ತಿರುತ್ತಾರೆ.
ಜೆನ್ನಿ ಅವರಿಗೆ ಮದುವೆ ಮಾಡಲು ಪೋಷಕರು ನಿರ್ಧರಿಸಿದ್ದರು. ಇದಕ್ಕಾಗಿ ಮ್ಯಾಟ್ರಿಮೋನಿಯಲ್ಲಿ ವಿದೇಶದಲ್ಲಿರುವ ವರನಿಗಾಗಿ ಹುಡುಕಾಟ ನಡೆಸಿದ್ದರು. ಈ ಸಂದರ್ಭದಲ್ಲಿ ಜೆನಿ ಪ್ರಿಯಾ ಅವರಿಗೆ ಪರಿಚಯವಾಗಿದ್ದು, ಎರಡು ಮಕ್ಕಳ ತಂದೆ ಪೈಲಟ್ ಥುಣೇಶನ್. ಥುಣೇಶನ್ ಅವರಿಗೆ ಈಗಾಗಲೇ ಡಿವೋರ್ಸ್ ಆಗಿದ್ದರಿಂದ ಆತನನ್ಉ ಮದುವೆಯಾಗಲು ಜೆನ್ನಿ ನಿರ್ಧರಿಸಿದ್ದಾರೆ. ಮದುವೆಗೆ ಡೇಟ್ ಕೂಡ ಫಿಕ್ಸ್ ಆಗಿತ್ತು.
ಮದುವೆ ಸಮದರ್ಭದಲ್ಲಿ 1600 ಗ್ರಾಂ ಚಿನ್ನವನ್ನು ಥುನೇಸನ್ ಪೋಷಕರು ಡಿಮ್ಯಾಂಡ್ ಮಾಡಿದ್ದಾರೆ. ಆದರೆ ವಿದೇಶಕ್ಕೆ ಹೆಚ್ಚು ಚಿನ್ನಗಳನ್ನು ತೆಗೆದುಕೊಂಡು ಹೋಗಲು ಕಷ್ಟ ಎಂದು ಜೆನಿ ಪೋಷಕರು ಮೊದಲ ಹಂತದಲ್ಲಿ 400 ಗ್ರಾಂ ಚಿನ್ನವನ್ನು ವರನಿಗೆ ನೀಡಿದ್ದಾರೆ. ಬಳಿಕ ನಟಿ ಪ್ರಿ ವೆಡ್ಡಿಂಗ್ ಫೋಟೋ ಶೂಟ್ಗೆಂದು ಸಿಂಗಾಪುರಕ್ಕೆ ಹೋಗಿದ್ದಾರೆ. ಅಲ್ಲಿ ಹೋದಾಗ ವರನ ಪರಿಚಯದವರಿಂದ ಥುಣೇಶನ್ ಕುಟುಂಬದವರೇ ಮೊದಲ ಪತ್ನಿಯನ್ನು ಮನೆಯಿಂದ ಓಡಿಸಿರುವ ವಿಚಾರ ತಿಳಿದು ಬಂದಿದೆ.
ಮಾತ್ರವಲ್ಲ ಆತ ವಿಡಿಯೋ ಗೇಮ್ಸ್ ಆ್ಯಡಿಕ್ಟ್ ಹಾಗೇ ನಡವಳಿಕೆ ಸರಿ ಇಲ್ಲ ಎಂದು ನಟಿಗೆ ತಿಳಿದು ಬಂದಿದೆ. ಇದನ್ನು ಸ್ವತಃ ವರದನ ಬಳಿ ಕೇಳಿದಾಗ ಆತ ಮೊದಲ ಪತ್ನಿ ಬಗ್ಗೆ ಏನು ಹೇಳಲು ರೆಡಿ ಇರಲಿಲ್ಲ. ಈ ಬಗ್ಗೆ ಕೇಳಿದಾಗಲ್ಲೆ ಕಾಲ್ ಕೂಡ ರಿಸೀವ್ ಮಾಡ್ತಾ ಇರ್ತಿಲ್ವಂತೆ. ಬಳಿಕ ಮನೆಯವರು ಚಿನ್ನಾಭರಣ ಕೊಟ್ಟಿರುವುದನ್ನು ಕೇಳಿದಾಗ, ನಮಗೆ ಚಿನ್ನ ಏನೂ ಕೊಟ್ಟಲ್ಲ ಎಂದು ಕಾರಣ ಬೆರೆ ಹೇಳಿದ್ದಾರೆ ಎಂದು ನಟಿ ಹೇಳಿಕೊಂಡಿರುವುದಾಗಿ ವರದಿಯಾಗಿದೆ.
ಇದೀಗ ಆಭರಣಗಳನ್ನು ಕಳೆದುಕೊಂಡಿರುವುದಾಗಿ ಜೆನ್ನಿ ಹೇಳಿಕೊಂಡಿದ್ದು ಮದುವೆ ಕ್ಯಾನ್ಸಲ್ ಮಾಡಿದ್ದಾರಂತೆ. ಅಲ್ಲದೆ ಆತನ ವಿರುದ್ಧ ದೂರು ನೀಡಲುಮುಂದಾಗಿದ್ದಾರೆ.