ಹಿಂದಿ ಕಿರುತೆರೆಯ ಖ್ಯಾತ ನಟಿ ಹಿನಾ ಖಾನ್ ಅವರು ಸ್ತನ್ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದಾರೆ. ಈ ರೋಗ ಮೂರನೇ ಹಂತದಲ್ಲಿದ್ದು ಈ ಬಗ್ಗೆ ಹಿನಾ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ. ಹಿನಾ ಖಾನ್ ‘ಯೇ ರಿಷ್ತಾ ಕ್ಯಾ ಕೆಹ್ಲಾತಾ ಹೇ’, ‘ಕೌಸಟಿ ಜಿಂದಗಿ ಕೇ 2’ ಧಾರಾವಾಹಿಗಳಲ್ಲಿ ನಟಿಸಿ ಖ್ಯಾತಿ ಘಳಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಹಿನಾ ಖಾನ್ ಅವರು ಈ ಬಗ್ಗೆ ಪೋಸ್ಟ್ ಹಾಕಿದ್ದಾರೆ. ‘ನಾನು ಒಂದು ಪ್ರಮುಖ ಸುದ್ದಿ ಹಂಚಿಕೊಳ್ಳಬೇಕು. ನನಗೆ ಮೂರನೇ ಸ್ಟೇಜ್ನ ಸ್ತನ ಕ್ಯಾನ್ಸರ್ ಇದೆ’ ಎಂದು ಹಿನಾ ಖಾನ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ‘ನಾನು ಚೆನ್ನಾಗಿಯೇ ಇದ್ದೇನೆ. ನಾನು ಗಟ್ಟಿ ಇದ್ದೇನೆ. ಈ ರೋಗದಿಂದ ಹೊರ ಬರಲು ಪ್ರಯತ್ನಿಸುತ್ತಿದ್ದೇನೆ. ನನಗೆ ಚಿಕಿತ್ಸೆ ಕೊಡಿಸುವ ಕೆಲಸ ಶುರುವಾಗಿದೆ. ಮತ್ತಷ್ಟು ಗಟ್ಟಿಯಾಗಿ ಬರಲು ಏನೆಲ್ಲ ಬೇಕೋ ಅದೆಲ್ಲವನ್ನೂ ಮಾಡುತ್ತೇನೆ’ ಎಂದಿದ್ದಾರೆ.
‘ನನಗೆ ಗೌರವ ಹಾಗೂ ಖಾಸಗಿತನವನ್ನು ನೀಡಿ. ನೀವು ನೀಡಿರುವ ಪ್ರೀತಿ ಹಾಗೂ ಆಶೀರ್ವಾದವನ್ನು ನಾನು ಪ್ರಶಂಶಿಸುತ್ತೇನೆ’ ಎಂದು ಅವರು ಬರೆದುಕೊಂಡಿದ್ದಾರೆ. ಹಿನಾ ಅವರನ್ನು ಬೆಂಬಲಿಸಿ ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ಗಳನ್ನು ಹಾಕುತ್ತಿದ್ದಾರೆ.